ಮುಂಬೈ: ಐಸಿಸಿ ಟಿ20 ವಿಶ್ವಕಪ್ ಬಳಿಕ ಭಾರತ ಪ್ರವಾಸ ಮಾಡಲಿರುವ ನ್ಯೂಜಿಲ್ಯಾಂಡ್ ಕ್ರಿಕೆಟ್ ತಂಡ ತನ್ನ ಬಳಗದಲ್ಲಿ ಒಂದು ಬದಲಾವಣೆ ಮಾಡಿಕೊಂಡಿದೆ.
ಇಂಗ್ಲೆಂಡ್ ವಿರುದ್ಧದ ಸೆಮಿ ಫೈನಲ್ ಪಂದ್ಯದಲ್ಲಿ ಗಾಯಗೊಂಡ ಆಟಗಾರ ಡೆವೋನ್ ಕಾನ್ವೆ ಅವರು ಸರಣಿಯಿಂದ ಹೊರ ಬಿದ್ದಿದ್ದಾರೆ. ಕಾನ್ವೆ ಬದಲಿಗೆ ಡ್ಯಾರೆಲ್ ಮಿಚೆಲ್ ಅವರು ಭಾರತ ಪ್ರವಾಸ ಕೈಗೊಳ್ಳಲಿದ್ದಾರೆ.
ಸೆಮಿ ಫೈನಲ್ ಪಂದ್ಯದಲ್ಲಿ ಔಟಾದ ವೇಳೆ ನಿರಾಶೆಯಿಂದ ಕೈಯನ್ನು ಬ್ಯಾಟಿಗೆ ಬಡಿದ ಕಾನ್ವೆ ಗಾಯಗೊಂಡಿದ್ದರು. ಅವರು ಇಂದು ನಡಯಲಿರುವ ಫೈನಲ್ ಪಂದ್ಯ ಮತ್ತು ಭಾರತದ ವಿರುದ್ಧದ ಸರಣಿಯಿಂದ ಹೊರಬಿದ್ದಿದ್ದಾರೆ.
ಇದನ್ನೂ ಓದಿ:12 ಕ್ರೀಡಾ ಸಾಧಕರಿಗೆ ಮೇಜರ್ ಧ್ಯಾನ್ ಚಂದ್ ಖೇಲ್ ರತ್ನ ಪ್ರಶಸ್ತಿ ಪ್ರದಾನ
“ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಹೊಸ ಋತುವಿನ ಮೊದಲ ಸರಣಿಯಲ್ಲಿ ಡೆವೊನ್ ತಪ್ಪಿಸಿಕೊಳ್ಳುವುದು ನಾಚಿಕೆಗೇಡಿನ ಸಂಗತಿಯಾಗಿದೆ, ಆದರೆ ಇದು ಬೇರೆಯವರಿಗೆ ಅವಕಾಶವನ್ನು ನೀಡುತ್ತದೆ” ಎಂದು ಕೋಚ್ ಗ್ಯಾರಿ ಸ್ಟೆಡ್ ಹೇಳಿದರು.
ಕಿವೀಸ್ ತಂಡ ಭಾರತದಲ್ಲಿ ಎರಡು ಟೆಸ್ಟ್ ಪಂದ್ಯಗಳನ್ನು ಆಡಲಿದೆ. ಮೊದಲ ಪಂದ್ಯ ಕಾನ್ಪುರದಲ್ಲಿ ನ.25ರಿಂದ ಆರಂಭವಾಗಲಿದ್ದು, ಎರಡನೇ ಪಂದ್ಯ ಡಿ.3ರಿಂದ ಮುಂಬೈನಲ್ಲಿ ನಡೆಯಲಿದೆ.