Advertisement

ಸೆ.23ಕ್ಕೆ ಯಜಮಾನ ಫ‌ಸ್ಟ್‌ಲುಕ್‌

09:50 AM Sep 21, 2018 | Team Udayavani |

ದರ್ಶನ್‌ ಅಭಿನಯದ “ಯಜಮಾನ’ ಚಿತ್ರದ ಬಹುತೇಕ ಚಿತ್ರೀಕರಣ ಮುಗಿದಿದೆ. ಇನ್ನೇನಿದ್ದರೂ ಹಾಡುಗಳ ಚಿತ್ರೀಕರಣವಷ್ಟೇ ಬಾಕಿ ಇದೆ. “ಯಜಮಾನ’ ಚಿತ್ರ ಆರಂಭವಾದ ದಿನದಿಂದಲೂ ದರ್ಶನ್‌ ಅಭಿಮಾನಿಗಳಿಗೆ ಒಂದು ಕುತೂಹಲವಿತ್ತು. ಅದು “ನಮ್‌ ಬಾಸ್‌ ಹೆಂಗ್‌ ಕಾಣಾ¤ರೆ’ ಅನ್ನೋದು. ಏಕೆಂದರೆ ಚಿತ್ರ ಆರಂಭವಾಗಿ ಇಷ್ಟು ದಿನವಾದರೂ ಸಿನಿಮಾದ ಯಾವುದೇ ಫೋಟೋಗಳು ಹೊರಬಂದಿರಲಿಲ್ಲ. ಈಗ “ಯಜಮಾನ’ದಲ್ಲಿ ದರ್ಶನ್‌ ಹೇಗೆ ಕಾಣಿಸಿಕೊಂಡಿದ್ದಾರೆಂಬ ಕುತೂಹಲಕ್ಕೆ ತೆರೆಬೀಳುವ ಸಮಯ. ಚಿತ್ರದ ಫ‌ಸ್ಟ್‌ಲುಕ್‌ ಸೆಪ್ಟೆಂಬರ್‌ 23 ರಂದು ಬಿಡುಗಡೆಯಾಗುತ್ತಿದೆ. ಈ ವಿಷಯವನ್ನು ಸ್ವತಃ ಚಿತ್ರತಂಡ ಘೋಷಿಸಿಕೊಂಡಿದೆ. ಇದೇ ತಿಂಗಳ 23 ರಂದು ಬೆಳಗ್ಗೆ 10 ಗಂಟೆಗೆ ಚಿತ್ರದ ಫ‌ಸ್ಟ್‌ಲುಕ್‌ ಬಿಡುಗಡೆಯಾಗುತ್ತಿದೆ.

Advertisement

“ಯಜಮಾನ’ ಚಿತ್ರವನ್ನು ಪೊನ್‌ ಕುಮಾರ್‌ ನಿರ್ದೇಶಿಸುತ್ತಿದ್ದು, ಮೀಡಿಯಾ ಹೌಸ್‌ ಮೂಲಕ ಬಿ.ಸುರೇಶ್‌ ಹಾಗೂ ಶೈಲಜಾ ನಾಗ್‌ ನಿರ್ಮಿಸುತ್ತಿದ್ದಾರೆ. “ಯಜಮಾನ’ದಲ್ಲಿ ರಶ್ಮಿಕಾ ಮಂದಣ್ಣ ನಾಯಕಿಯಾಗಿದ್ದು, ತಾನ್ಯಾ ಹೋಪ್‌ ಕೂಡಾ ಪ್ರಮುಖ ಪಾತ್ರ ಮಾಡುತ್ತಿದ್ದಾರೆ. ಇನ್ನು ಈ ಚಿತ್ರದ ಹಾಡೊಂದರಲ್ಲಿ ದರ್ಶನ್‌ ಪುತ್ರ ವಿನೀಶ್‌ ಕಾಣಿಸಿಕೊಂಡಿದ್ದಾರೆ. ಈ ಹಿಂದೆ “ಐರಾವತ’ದಲ್ಲಿ ಜೊತೆಯಾಗಿ ಕಾಣಿಸಿಕೊಂಡಿದ್ದರು. ಈಗ “ಯಜಮಾನ’ ಸರದಿ.  ಈಗಾಗಲೇ ಚಿತ್ರೀಕರಣ ನಡೆದಿದೆ. 

Advertisement

Udayavani is now on Telegram. Click here to join our channel and stay updated with the latest news.

Next