ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಬಹುನಿರೀಕ್ಷಿತ ಚಿತ್ರ “ಯಜಮಾನ’ ಸಿನಿಮಾದ “ಶಿವನಂದಿ’ ಲಿರಿಕಲ್ ಹಾಡು ಬಿಡುಗಡೆಯಾಗಿ, ಸಾಮಾಜಿಕ ಜಾಲತಾಣಗಳಲ್ಲಿ ತನ್ನದೇ ಆದ ಟ್ರೆಂಡ್ ಹುಟ್ಟುಹಾಕಿತ್ತು. ಇದೀಗ ಚಿತ್ರದ ಮತ್ತೊಂದು ರೋಮ್ಯಾಂಟಿಕ್ ಲಿರಿಕಲ್ ಹಾಡು ರಿಲೀಸ್ ಆಗಿದೆ.
ಹೌದು, “ಒಂದು ಮುಂಜಾನೆ’ ಎಂಬ ಹೊಸ ಹಾಡು ಬಿಡುಗಡೆಯಾಗಿದ್ದು, ದರ್ಶನ್ ಮತ್ತು ರಶ್ಮಿಕಾ ಜೋಡಿಯ ಡ್ಯುಯೆಟ್ ಹಾಡು ಇದಾಗಿದೆ. ಅಲ್ಲದೇ ಸ್ವೀಡನ್‍ನಲ್ಲಿ ಹಾಡನ್ನು ಚಿತ್ರೀಕರಿಸಲಾಗಿದೆ. ಸಂಪೂರ್ಣ ಹಾಡಿನಲ್ಲಿ ದರ್ಶನ್ ಮತ್ತು ರಶ್ಮಿಕಾ ಇಬ್ಬರ ರೋಮ್ಯಾಂಟಿಕ್ ಫೋಟೋಗಳನ್ನು ಕಾಣಬಹುದಾಗಿದ್ದು, ಇಬ್ಬರ ಪ್ರೀತಿ ಎಷ್ಟರ ಮಟ್ಟಿಗೆ ಇದೆ ಎಂಬುದನ್ನು ನೋಡಬಹುದಾಗಿದೆ.
ಇನ್ನು ಈ ಹಾಡನ್ನು ಪ್ರೇಮಕವಿ ಕವಿರಾಜ್ ಬರೆದಿದ್ದು, ಸೋನು ನಿಗಮ್ ಹಾಗೂ ಶ್ರೇಯಾ ಘೋಷಾಲ್ ಧ್ವನಿಯಾಗಿದ್ದಾರೆ. ವಿ. ಹರಿಕೃಷ್ಣ ಟ್ಯೂನ್ ಹಾಕಿರುವ ಈ ಸಾಂಗ್ ಕೇವಲ ಅರ್ಧಗಂಟೆಯಲ್ಲಿ 4 ಲಕ್ಷಕ್ಕೂ ಹೆಚ್ಚು ವೀವ್ಸ್ ಪಡೆದಿದೆ. ಮುಖ್ಯವಾಗಿ ದರ್ಶನ್ ಈ ಬಗ್ಗೆ “ಶಿವನಂದಿ’ ಹಾಡಿಗೆ ನೀವು ತೋರಿಸಿರುವ ಪ್ರೀತಿಗೆ ನಾ ಆಭಾರಿಯಾಗಿದ್ದೇನೆ ಈಗ ಯಜಮಾನ ಚಿತ್ರದ 2ನೇ ಹಾಡು – “ಒಂದು ಮುಂಜಾನೆ’ ಮೆಲೋಡಿ ನಿಮಗಾಗಿ. ಕೇಳಿ ನಿಮ್ಮ ಅನಿಸಿಕೆ ತಿಳಿಸಲು ಮರೆಯದಿರಿ’ ಎಂದು ಟ್ವೀಟ್ ಮಾಡಿದ್ದಾರೆ.
ಅಂದಹಾಗೆ, “ಯಜಮಾನ’ ದರ್ಶನ್ ಮತ್ತು ವಿ. ಹರಿಕೃಷ್ಣ ಕಾಂಬಿನೇಷನ್‌ನ 25ನೇ ಚಿತ್ರವಾಗಿದ್ದು, ಡಿ-ಬೀಟ್ಸ್ ಯೂ ಟ್ಯೂಬ್ ಚಾನಲ್‌ನಲ್ಲಿ “ಒಂದು ಮುಂಜಾನೆ’ ಹಾಡು ಬಿಡುಗಡೆಯಾಗಿದೆ. “ಯಜಮಾನ’ ಚಿತ್ರಕ್ಕೆ ಪಿ. ಕುಮಾರ್ ಮತ್ತು ವಿ. ಹರಿಕೃಷ್ಣ ಅವರ ಜಂಟಿ ನಿರ್ದೇಶನವಿದ್ದು, ಶೈಲಜಾ ನಾಗ್ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಚಿತ್ರದಲ್ಲಿ ನಾಯಕ ದರ್ಶನ್ ಅವರಿಗೆ ನಾಯಕಿಯರಾಗಿ ರಶ್ಮಿಕಾ ಮಂದಣ್ಣ ಮತ್ತು ತಾನ್ಯಾ ಹೋಪ್ ಜೋಡಿಯಾಗಿದ್ದಾರೆ. ಅಲ್ಲದೇ ಚಿತ್ರವನ್ನು ಮುಂಬರುವ ಫೆಬ್ರವರಿ ಅಂತ್ಯಕ್ಕೆ ತೆರೆಗೆ ತರಬಹುದು ಎಂಬುದು ಚಿತ್ರತಂಡದ ಲೆಕ್ಕಾಚಾರವಾಗಿದೆ.