ಮಂಡ್ಯ: ರಾಜ್ಯಸಭಾ ಚುನಾವಣೆ ಹಿನ್ನಲೆಯಲ್ಲಿ ನನಗೆ ಯಾವುದೇ ಬೆದರಿಕೆ ಹಾಗೂ ಆಮಿಷವೊಡ್ಡಿಲ್ಲ ಕೇವಲ ಮತ ಕೇಳಿದ್ದಾರೆ ಅಷ್ಟೇ ಎಂದು ಶಾಸಕ ದರ್ಶನ್ ಪುಟ್ಟಣ್ಣಯ್ಯ ಸ್ಪಷ್ಟನೆ ನೀಡಿದ್ದಾರೆ.
ರಾಜ್ಯಸಭಾ ಚುನಾವಣೆಯಲ್ಲಿ ತಮ್ಮ ಪರ ಮತ ಚಲಾಯಿಸುವಂತೆ ಕಾಂಗ್ರೆಸ್ ಶಾಸಕರಿಗೆ ಹಣದ ಆಮಿಷವೊಡ್ಡಿದ್ದಾರೆಂಬ ಆರೋಪ ಜೆಡಿಎಸ್-ಬಿಜೆಪಿ ಮೈತ್ರಿ ಅಭ್ಯರ್ಥಿ ಕುಪೇಂದ್ರರೆಡ್ಡಿ ವಿರುದ್ಧ ಕೇಳಿ ಬಂದಿತ್ತು.
ಈ ಕುರಿತು ಸ್ಪಷ್ಟನೆ ನೀಡಿದ ಶಾಸಕ ದರ್ಶನ್ ಪುಟ್ಟಣ್ಣಯ್ಯ ಪ್ರಜಾಪ್ರಭುತ್ವದಲ್ಲಿ ಮತಯಾಚಿಸುವುದು ಸಾಮಾನ್ಯ. ಅದರಂತೆ ಕುಪೇಂದ್ರ ರೆಡ್ಡಿ ಕಡೆಯವರು ಕರೆ ಮಾಡಿ ಮತ ಕೇಳಿದ್ದಾರೆ. ಅದು ಬಿಟ್ಟು ಬೆದರಿಕೆ ಹಾಗೂ ಆಮಿಷ ನೀಡಿಲ್ಲ ಎಂದು ಸ್ಪಷ್ಟಪಡಿಸಿದರು. ಶಾಸಕ ರವಿಕುಮಾರ್ ಗೌಡ ಗಣಿಗ ಅವರು ನನಗೆ ಕರೆ ಮಾಡಿದ್ದರು. ಆಗ ತಿಳಿಸಿದ್ದೆನು. ಅದು ಬಿಟ್ಟು ಬೇರೆ ಏನೂ ಆಗಿಲ್ಲ ಎಂದರು.
ಬೇರೆ ಶಾಸಕರಿಗೆ ಏನು ಮಾಡಿದ್ದಾರೆ ಎಂಬುದು ನನಗೆ ಗೊತ್ತಿಲ್ಲ. ಇಲ್ಲಿ ಹೈಡ್ರಾಮ ನಡೆಯುತ್ತಿದೆ. ಇದರ ಬಗ್ಗೆ ತಿಳಿದುಕೊಳ್ಳುತ್ತೇನೆ ಎಂದು ಹೇಳಿದ್ದಾರೆ.
ಟ್ರಯಲ್ ಬ್ಲಾಸ್ಟ್ ಬಗ್ಗೆ ಮಾತನಾಡಿದ ಅವರು ಇದರ ಬಗ್ಗೆ ನನ್ನ ವಿರೋಧವೂ ಇದೆ. ಆದರೆ 8 ಗ್ರಾ.ಪಂನ ಜನರು ಕೈಕುಳಿ ಮಾಡಲು ಅವಕಾಶ ನೀಡಬೇಕು, ಅಲ್ಲಿನ ಜನರಿಗೆ ಜವಾಬ್ದಾರಿ ನೀಡಬೇಕು. ಯಾವುದೇ ಕಾರಣಕ್ಕೂ ಬ್ಲಾಸ್ಟಿಂಗ್ ಮಾಡಬಾರದು ಎಂದು ಸೂಚನೆ ನೀಡಬೇಕು ಎಂದರು.
ಇದನ್ನೂ ಓದಿ: Tragedy: ಘೋರ ದುರಂತ… ಟ್ರ್ಯಾಕ್ಟರ್ ಕೆರೆಗೆ ಬಿದ್ದು 7 ಮಕ್ಕಳು ಸೇರಿ 15 ಮಂದಿ ಮೃತ್ಯು