Advertisement

ಬೆಳೆ ಸಮೀಕ್ಷೆ ಆಕ್ಷೇಪಣೆಗೆ ದರ್ಶಕ್‌ ಮೊಬೈಲ್‌ ಆ್ಯಪ್‌

11:22 PM Jan 21, 2020 | mahesh |

ಉಡುಪಿ: ಅಂತರ್ಜಾಲ ಸಹಾಯದಿಂದ ಈಗ ಕೃಷಿಕರು ಸಹ ಲಾಭ ಪಡೆಯುತ್ತಿದ್ದು ಕೃಷಿಕರು ಮತ್ತು ಕೃಷಿ ಇಲಾಖೆ ನಡುವೆ ಸಂಬಂಧ ವೃದ್ಧಿಸಲು ಕೃಷಿ ಇಲಾಖೆ ಪ್ರಯತ್ನಿಸುತ್ತಿದೆ. ಇದರ ಫ‌ಲವಾಗಿಯೇ ಬೆಳೆ ಸಮೀಕ್ಷೆಗೆ ಸಂಬಂಧಿಸಿ ರೈತರಿಗೆ ಆಕ್ಷೇಪಣೆ ಸಲ್ಲಿಸಲು ಬೆಳೆ ದರ್ಶಕ್‌ ಮೊಬೈಲ್‌ ಆಪ್‌ ಈಗ ಲಭ್ಯವಿದೆ.

Advertisement

ಜಿಲ್ಲೆಯಲ್ಲಿ ಜಿ.ಪಿ.ಎಸ್‌ ಆಧಾರಿತ ಬೆಳೆ ಸಮೀಕ್ಷೆಯು ಮುಂಗಾರು ಹಾಗೂ ಹಿಂಗಾರು ಹಂಗಾಮುಗಳಲ್ಲಿ ಜಾರಿಯಲ್ಲಿದೆ. ಈ ಮೊದಲು ಖಾಸಗಿ ವ್ಯಕ್ತಿಗಳ ಮೂಲಕ ಪ್ರತಿ ಹಳ್ಳಿಯಲ್ಲಿ ಸಮೀಕ್ಷೆ ನಡೆದಿತ್ತು. ಜಿಲ್ಲೆಯಲ್ಲಿ 9,32,662 ಮಂದಿ ರೈತರ ಸರ್ವೆ ನಡೆದಿತ್ತು. ಈ ಮುಂಗಾರಿನಲ್ಲಿ ಮುಕ್ತಾಯವಾದ ಬೆಳೆ ಸಮೀಕ್ಷೆಯಲ್ಲಿ ನಮೂದಾದ ಬೆಳೆಗಳ ಬಗ್ಗೆ ರೈತರಿಗೆ ಆಕ್ಷೇಪಣೆ ಇದ್ದಲ್ಲಿ ಬೆಳೆ ದರ್ಶಕ್‌ ಎಂಬ ಆ್ಯಪ್‌ ಮೂಲಕ ಆಕ್ಷೇಪಣೆಗಳನ್ನು ಸಲ್ಲಿಸಲು ಇಲಾಖೆ ಕ್ರಮವಹಿಸಿತ್ತು. ಸಾಕಷ್ಟು ಪ್ರಚಾರ ಕೈಗೊಂಡಿತ್ತು. ರೈತರು ಇದರ ಪ್ರಯೋಜನ ಪಡಕೊಂಡಿದ್ದರು. ರೈತರು ಈಗಾಗಲೆ ಆಕ್ಷೇಪಣೆ ಸಲ್ಲಿಸುತ್ತಿದ್ದು ಮೇಲ್ವಿಚಾರಕರು ಸೂಕ್ತ ಬೆಳೆಗಳನ್ನು ದಾಖಲಿಸಿ ರೈತರ ಆಕ್ಷೇಪಣೆಗಳನ್ನು ಇತ್ಯರ್ಥಪಡಿಸಿಕೊಳ್ಳುತ್ತಿದ್ದಾರೆ.

ಹೇಗೆ ಬಳಕೆ
Bele Darshak Karnataka -2019, App Google play store ನಲ್ಲಿ ಆ್ಯಪ್‌ ಲಭ್ಯವಿದ್ದು, ಇದನ್ನು ಉಚಿತವಾಗಿ ಪ್ಲೇ-ಸ್ಟೋರ್‌ನಲ್ಲಿ ಡೌನ್ಲೋಡ್ ಮಾಡಿಕೊಂಡು ಆಕ್ಷೇಪಣೆಯನ್ನು ಸಲ್ಲಿಸಬಹುದಾಗಿದೆ. ಅದೇ ರೀತಿ ಬೆಳೆ ಸಮೀಕ್ಷೆ ತಂತ್ರಾಂಶದಲ್ಲಿ (www.cropsurvey.karnataka.gov.in www.cropsurvey.karnataka.gov.in ಮೂಲಕ ನೇರವಾಗಿ ತಮ್ಮ ದೂರು ಸಲ್ಲಿಸಲು ಇದರಲ್ಲಿ ರೈತರಿಗೆ ಅವಕಾಶ ಕಲ್ಪಿಸಲಾಗಿದೆ.

ಜ. 30ರ ವರೆಗೆ ಅವಕಾಶ
ಎಲ್ಲ ವರ್ಗದ ರೈತರಿಗೆ ಆ್ಯಪ್‌ ಬಳಕೆ ಕಷ್ಟ. ಬಳಸಲು ಸಾಧ್ಯವಿಲ್ಲದನ್ನು ಮನ ಗಂಡ ಇಲಾಖೆ‌ ಲಿಖೀತ ರೂಪದಲ್ಲಿ ದೂರು ಸಲ್ಲಿಸಲು ಅವಕಾಶ ನೀಡಿದೆ.

ಪೂರಕವಾಗಿ ಗ್ರಾ.ಪಂ.ನಲ್ಲಿ ಸರ್ವೆ ನಂಬರ್‌ ಆಧಾರದಲ್ಲಿ ದಾಖಲಾದ ಬೆಳೆಗಳ ಪಟ್ಟಿಯನ್ನು ಲಗತ್ತಿಸಲಾಗುತ್ತಿದೆ. ಆ ಪಟ್ಟಿಯಲ್ಲಿ ತಮ್ಮ ಹೆಸರಿನ ಮುಂದೆ ಇರುವ ಬೆಳೆಯನ್ನು ಪರಿಶೀಲಿಸಿಕೊಂಡು ಬೆಳೆ ಸಮೀಕ್ಷೆ ಕಾರ್ಯದಲ್ಲಿ ಏನಾದರೂ ವ್ಯತ್ಯಾಸಗಳು ಕಂಡುಬಂದಲ್ಲಿ ತಮ್ಮ ಆಕ್ಷೇಪಣೆಯನ್ನು ಸಂಬಂ ಧಿಸಿದ ಸಹಾಯಕ ಕೃಷಿ ನಿರ್ದೇಶಕರು ಹಾಗೂ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿ ಕಾರಿಗಳಿಗೆ ದೂರು ಸಲ್ಲಿಸಲು ಜ. 30ರ ವರೆಗೆ ಕಾಲಾವಕಾಶ ನೀಡಲಾಗಿದೆ. ಪ್ರಕ್ರಿಯೆ ಪೂರ್ಣಗೊಂಡ ಅನಂತರದಲ್ಲಿ ಬೆಳೆ ಸಮೀಕ್ಷೆ ತಂತ್ರಾಂಶದಲ್ಲಿ ದಾಖಲು ಮಾಡಿ ಮತ್ತೆ ಆಕ್ಷೇಪಣೆಗಳನ್ನು ಇತ್ಯರ್ಥಪಡಿಸಲು ಜಂಟಿ ಕೃಷಿ ನಿರ್ದೇಶಕರು ಕ್ರಮವಹಿಸುವರು.

Advertisement

ರೈತರಿಗೆ ಅನುಕೂಲ
ಬೆಳೆ ಸಮೀಕ್ಷೆ ಪ್ರಕ್ರಿಯೆ ವೇಳೆ ತಂತ್ರಾಂಶದಲ್ಲಿ ದಾಖಲುಗೊಂಡ ಅಂಶಗಳ ಆಧಾರದಲ್ಲಿ ಪರಿಶೀಲಿಸಲಾಗುತ್ತದೆ. ಇದಕ್ಕೂ ಮೊದಲು ಆಕ್ಷೇಪಣೆಗಳೇನಾದರೂ ಇದ್ದಲ್ಲಿ ಸಲ್ಲಿಕೆಗೆ ರೈತರಿಗೆ ಅನುಕೂಲ ಮಾಡಿಕೊಡಲಾಗಿದೆ.
-ಕೆಂಪೇಗೌಡ, ಜಂಟಿ ನಿರ್ದೇಶಕರು , ಕೃಷಿ ಇಲಾಖೆ, ಉಡುಪಿ

Advertisement

Udayavani is now on Telegram. Click here to join our channel and stay updated with the latest news.

Next