Advertisement

ಡಿಎಆರ್‌ ಪೊಲೀಸ್‌ ತಂಡಕ್ಕೆ ಸಮಗ್ರ ಪ್ರಶಸ್ತಿ

10:17 AM Dec 04, 2018 | |

ಕಲಬುರಗಿ: ನಗರದ ಪೊಲೀಸ್‌ ಪರೇಡ್‌ ಮೈದಾನದಲ್ಲಿ ಮೂರು ದಿನಗಳ ಕಾಲ ನಡೆದ ಜಿಲ್ಲಾ ಪೊಲೀಸ್‌ ವಾರ್ಷಿಕ
ಕ್ರೀಡಾಕೂಟಕ್ಕೆ ಅದ್ಧೂರಿ ತೆರೆಬಿದ್ದಿದೆ. ಪ್ರಸಕ್ತ ಸಾಲಿನಲ್ಲೂ ಡಿಎಆರ್‌ ಪೊಲೀಸ್‌ ತಂಡ ಸಮಗ್ರ ಪ್ರಶಸ್ತಿಗೆ ಪಡೆಯುವುದರ
ಮೂಲಕ ಮತ್ತೂಮ್ಮೆ ಚಾಂಪಿಯನ್‌ ಆಗಿ ಹೊರ ಹೊಮ್ಮಿತು.

Advertisement

ಸೋಮವಾರ ವಾರ್ಷಿಕ ಕ್ರೀಡಾಕೂಟ ಅಂತ್ಯವಾಗಿದ್ದು, ಸಮಾರೋಪದ ಸಮಾರಂಭದಲ್ಲಿ ವಿಜೇತರು ಪ್ರಶಸ್ತಿ ಪಡೆದು
ಸಂಭ್ರಮಿಸಿದರು. ಡಿಎಆರ್‌ ಪೊಲೀಸ್‌ ತಂಡದವರು ಸಮಗ್ರ ಪ್ರಶಸ್ತಿಗೆ ಭಾಜನರಾದರೆ, ವೈಯಕ್ತಿಕ ವಿಭಾಗದ ಮಹಿಳೆಯರಲ್ಲಿ ಆಳಂದದ ಡಬ್ಲ್ಯೂಪಿಸಿ ಸುವರ್ಣಾ ಮತ್ತು ಪುರುಷರ ವಿಭಾಗದಲ್ಲಿ ಡಿಎಆರ್‌ ಎಪಿಸಿ ನದಾಫ್‌ ಬೆಸ್ಟ್‌ ಅಥ್ಲೆಟ್‌ ಪ್ರಶಸ್ತಿಗೆ ಪಾತ್ರರಾದರು.

ಪುರುಷರ ಕಬಡ್ಡಿಯಲ್ಲಿ ಡಿಎಆರ್‌ ತಂಡ ವಿನ್ನರ್‌ ಮತ್ತು ಎ ಉಪವಿಭಾಗ ತಂಡ ರನ್ನರ್‌ ಅಪ್‌ ಪ್ರಶಸ್ತಿ, ವಾಲಿಬಾಲ್‌ನಲ್ಲೂ
ಡಿಎಆರ್‌ ತಂಡ ವಿನ್ನರ್‌ ಆದರೆ, ಗ್ರಾಮೀಣ ಉಪವಿಭಾಗ ರನ್ನರ್‌ ಅಪ್‌ ಪ್ರಶಸ್ತಿ ಮುಡಿಗೇರಿಸಿಕೊಂಡಿತು. ಹಗ್ಗ-ಜಗ್ಗಾಟ ಸ್ಪರ್ಧೆಯಲ್ಲಿ ಗ್ರಾಮೀಣ ಉಪ ವಿಭಾಗ ತಂಡ ಪ್ರಥಮ ಮತ್ತು ಡಿಎಆರ್‌ ತಂಡ ದ್ವಿತೀಯ ಪ್ರಶಸ್ತಿಗೆ ಭಾಜನವಾಯಿತು.

ಎಸ್‌ಪಿ ಹಂತದ ಅಧಿಕಾರಿಗಳಿಗೆ ನಡೆದ ಶೂಟಿಂಗ್‌ನಲ್ಲಿ ಎಸ್‌ಪಿ ಎನ್‌.ಶಶಿಕುಮಾರ ಪ್ರಥಮ ಹಾಗೂ ಹೆಚ್ಚುವರಿ ಎಸ್‌ಪಿ ಜಯಪ್ರಕಾಶ ದ್ವಿತೀಯ ಬಹುಮಾನ ಪಡೆದರು. ರೈಫಲ್‌ ಶೂಟಿಂಗ್‌ನಲ್ಲೂ ಎಸ್‌ಪಿ ಎನ್‌. ಶಶಿಕುಮಾರ ಹಾಗೂ ಹೆಚ್ಚುವರಿ ಎಸ್‌ಪಿ ಜಯಪ್ರಕಾಶ ಕ್ರಮವಾಗಿ ಪ್ರಥಮ, ದ್ವಿತೀಯ ಪ್ರಶಸ್ತಿ ಗಳಿಸಿದರು.

ಪಿಎಸ್‌ಐಗಳ ಡಬಲ್‌ ಶಟಲ್‌ ಬ್ಯಾಡ್ಮಿಂಟನ್‌ನಲ್ಲಿ ಯಡ್ರಾಮಿ ಪಿಎಸ್‌ಐ ನಾಗಪ್ಪ ಮತ್ತು ಗ್ರಾಮೀಣ ಪಿಎಸ್‌ಐ ಚಂದ್ರಶೇಖರ ಪ್ರಥಮ, ಅಫಲಜಪುರದ ರೇವಣ್ಣ, ಮಂಜುನಾಥ ಹೂಗಾರ ದ್ವಿತೀಯ ಹಾಗೂ ಎಂ.ಬಿ. ನಗರದ ಶರಣಬಸಪ್ಪ, ವಾಡಿಯ ವಿಜಯಕುಮಾರ ತೃತೀಯ ಬಹುಮಾನ ಪಡೆದರು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ಪೊಲೀಸ್‌ ಸಿಬ್ಬಂದಿಗೆ ಎಸ್‌ಪಿ ಎನ್‌.ಶಶಿಕುಮಾರ ಬಹುಮಾನ ವಿತರಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next