Advertisement

ಡಾ.ಪರಮಶಿವಯ್ಯ ಕನಸು ನನಸಾಗುವವರೆಗೆ ಹೋರಾಟ ನಿಲ್ಲಲ್ಲ

04:01 PM Feb 13, 2017 | Team Udayavani |

ಚಿಕ್ಕಬಳ್ಳಾಪುರ: ಯಾವುದೇ ಶಾಶ್ವತ ನದಿ ನಾಲೆಗಳು ಇಲ್ಲದ ಬರಪೀಡಿತ ಬಯಲುಸೀಮೆ ಜಿಲ್ಲೆಗಳಿಗೆ ಒಳಿತನ್ನು ಬಯಸಿ ನಿಸ್ವಾರ್ಥದಿಂದ ಸಮಗ್ರ ನೀರಾವರಿ ಯೋಜನೆಯ ಪರಿಕಲ್ಪನೆ ನೀಡಿದ ಖ್ಯಾತ ನೀರಾವರಿ ತಜ್ಞ ಡಾ.ಜಿ.ಎಸ್‌.ಪರಮಶಿವಯ್ಯನವರ ಕನಸು ನನಸಾಗುವವರೆಗೂ ಶಾಶ್ವತ ನೀರಾವರಿ ಹೋರಾಟ ನಿಲ್ಲುವುದಿಲ್ಲ ಎಂದು ಶಾಶ್ವತ ನೀರಾವರಿ ಹೋರಾಟ ಸಮಿತಿ ಜಿಲ್ಲಾಧ್ಯಕ್ಷ ಆರ್‌.ಆಂಜನೇಯರೆಡ್ಡಿ ಘೋಷಿಸಿದರು. ನಗರದ ಅಂಬೇಡ್ಕರ್‌ ಭವನದಲ್ಲಿ ಭಾನುವಾರ ಶಾಶ್ವತ ನೀರಾವರಿ ಹೋರಾಟ ಸಮಿತಿ ಹಮ್ಮಿಕೊಂಡಿದ್ದ ಡಾ.ಜಿ.ಎಸ್‌.ಪರಮಶಿವಯ್ಯನವರ 99ನೇ ಜಯಂತ್ಯುತ್ಸವ ಹಾಗೂ ಗೌರವ ಸಮರ್ಪಣಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

Advertisement

ಬಲಿಷ್ಠ ನೀರಾವರಿ ಆಂದೋಲನ: ಡಾ.ಜಿ.ಎಸ್‌. ಪರಮಶಿವಯ್ಯ ಬಯಲುಸೀಮೆ ಜಿಲ್ಲೆಗಳ ಭವಿಷ್ಯದ ನೀರಾವರಿ ಸಂಕಷ್ಟಗಳ ಕುರಿತು ಸಮಗ್ರವಾದ ವೈಜ್ಞಾನಿಕ ವರದಿಯನ್ನು 1974 ರಲ್ಲಿ ಅಂದಿನ ಸರ್ಕಾರಕ್ಕೆ ಸಲ್ಲಿಸಿದ್ದರು. ಆದರೆ, ವರದಿ 20 ವರ್ಷಗಳ ಕಾಲ ಅಧಿಕಾರಿಗಳ ಮಟ್ಟದಲ್ಲಿಯೇ ಧೂಳು ಹಿಡಿಯಬೇಕಾಯಿತು. ಅಂದಿನ ಸಂಸದರಾದ ಜೆ.ವೆಂಕಟಪ್ಪ, ತುಮಕೂರು ಬಸವರಾಜು, ಕ್ಯಾಲನೂರು ತಿಪ್ಪೇನಹಳ್ಳಿಯ ಡಾ.ಟಿ.ಎನ್‌.ಶ್ರೀನಿವಾಸ್‌ ಮತ್ತಿತರರು ಸರ್ಕಾರದ ಮೇಲೆ ಒತ್ತಡ ಹಾಕಿದ್ದರಿಂದ ಪರಮಶಿವಯ್ಯ ವರದಿಗೆ ಒಂದಿಷ್ಟು ಜೀವ ಬಂದಿದೆ. ಹಿಂದೆ ಬಯಲು ಸೀಮೆ ಜಿಲ್ಲೆಗಳ ನೀರಾವರಿಗಾಗಿ ಹಗಲಿರುಳು ಹೋರಾಡಿದ ನಾಯಕರ ಆಶಯಗಳನ್ನು ಶಾಶ್ವತ ನೀರಾವರಿ ಹೋರಾಟ ಸಮಿತಿ ಮುಂದುವರೆಸುತ್ತದೆ. ಸರ್ಕಾರದ ಹುಸಿ ಭರವಸೆಗಳನ್ನು ನಂಬಿ ಕೂರುವುದಿಲ್ಲ. ಬಯಲು ಸೀಮೆ ಜಿಲ್ಲೆಗಳಲ್ಲಿ ಬಲಿಷ್ಠ ನೀರಾವರಿ ಆಂದೋಲನ ರೂಪಿಸಲಾಗುತ್ತಿದೆ ಎಂದು ಎಚ್ಚರಿಕೆ ನೀಡಿದರು.

ಶಾಶ್ವತ ನೀರಾವರಿ ಹೋರಾಟ ನಿಲ್ಲಬಾರದು: ಮಾಜಿ ಶಾಸಕ ಕೆ.ಪಿ.ಬಚ್ಚೇಗೌಡ ಮಾತನಾಡಿ, ರಾಜ್ಯದಲ್ಲಿ ಒಂದೊಂದು ಪಕ್ಷ ಅಧಿಕಾರದ ಚುಕ್ಕಾಣಿ ಹಿಡಿದಾಗ ತಮ್ಮ ಮೂಗಿನ ನೇರಕ್ಕೆ ಹಲವು ನೀರಾವರಿ ಯೋಜನೆಗಳನ್ನು ರೂಪಿಸಿವೆ. ಒಂದು ಸರಕಾರ ಜಾರಿ ಮಾಡಿದ ನೀರಾವರಿ ಯೋಜನೆಗಳನ್ನು ಮತ್ತೂಂದು ಸರ್ಕಾರ ಮಾರ್ಪಾಟು ಮಾಡಿದ ಉದಾಹರಣೆಗಳೇ ಹೆಚ್ಚಾಗಿವೆ. ಕಾಂಗ್ರೆಸ್‌ ಸರಕಾರ ತರಾತುರಿಯಲ್ಲಿ ಎತ್ತಿನಹೊಳೆ ಯೋಜನೆಯನ್ನು ಜಾರಿ ಮಾಡಿದೆಯೇ ಹೊರತು ಇಚ್ಛಾಶಕ್ತಿಯಿಂದಲ್ಲ. ಇತ್ತೀಚೆಗೆ ಸರಕಾರ ಬೆಂಗಳೂರಿನ ಕೊಳಚೆ ನೀರನ್ನು ಸಂಸ್ಕರಿಸಿ ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲೆಗಳ ಕೆರೆಗಳನ್ನು ತುಂಬಿಸಲು ಹೊರಟಿದೆ. ವೈಜ್ಞಾನಿಕ ಸಂಸ್ಕರಣೆಯನ್ನು ಒಪ್ಪಬಹುದಾದರೂ ನೀರಿನ ಶುದ್ಧತೆ ಬಗ್ಗೆ ಅನುಮಾನವಿದೆ. ಬಯಲುಸೀಮೆ ಜಿಲ್ಲೆಗಳಿಗೆ ಸಮಗ್ರ ಶಾಶ್ವತ ನೀರಾವರಿ ಯೋಜನೆ ಜಾರಿಯಾಗುವವರೆಗೂ ಹೋರಾಟ ನಿಲ್ಲಬಾರದು ಎಂದು ಮನವಿ ಮಾಡಿದರು.

ಹೋರಾಟ ಜೆಡಿಎಸ್‌ ಪ್ರಯೋಜಕತ್ವ ಇಲ್ಲ: ಕೋಚಿಮುಲ್‌ ನಿರ್ದೇಶಕ ಕೆ.ವಿ.ನಾಗರಾಜ್‌ ಮಾತನಾಡಿ, ನೀರಾವರಿ ಹೋರಾಟ, ಪ್ರತಿಭಟನೆ ಪ್ರಶ್ನೆ ಬಂದಾಗ ಪಕ್ಷದ ಬಾವುಟವಿಲ್ಲದೆ ಜೆಡಿಎಸ್‌ ಮುಕ್ತ ಮನಸಿನಿಂದ ಬೆಂಬಲಿಸುತ್ತಾ ಬಂದಿದೆ. ಆದರೆ, ಕೆಲವರು ಕ್ಷುಲ್ಲಕ ರಾಜಕೀಯ ಮತ್ತು ಸ್ವಹಿತಾಸಕ್ತಿಗಾಗಿ ಶಾಶ್ವತ ನೀರಾವರಿ ಹೋರಾಟ ಸಮಿತಿ ಮತ್ತು ಜೆಡಿಎಸ್‌ ನಡುವೆ ರಾಜಕೀಯ ತಳಕು ಹಾಕಲು ಯತ್ನಿಸುತ್ತಿರುವುದು ಖಂಡನೀಯ ಎಂದರು.

ನೀರಾವರಿ ಹೋರಾಟಗಾರರಿಗೆ ಗೌರವ: ಕಾರ್ಯಕ್ರಮದದ ಆರಂಭದಲ್ಲಿ ದಿ.ಡಾ.ಜಿ.ಎಸ್‌.ಪರಮಶಿವಯ್ಯನವರ ಭಾವಚಿತ್ರಕ್ಕೆ ಗಣ್ಯರು ಪುಷ್ಪ ನಮನ ಸಲ್ಲಿಸಿದರು. ಶಾಶ್ವತ ನೀರಾವರಿ ಹೋರಾಟಕ್ಕೆ ಶ್ರಮಿಸಿದ ರೈತ ಸಂಘದ ಮುಖಂಡ ದೊಡ್ಡಬಳ್ಳಾಪುರದ ದಿ.ಡಾ.ವೆಂಕಟರೆಡ್ಡಿ ಅವರ ಪತ್ನಿ ಸುಲೋಚನಾ, ರಾಧಾ ಹೈಟೆಕ್‌ ಶ್ರೀನಾಥ್‌, ಗೌತಮ್‌ ಶ್ರೀನಿವಾಸ್‌ ಹಾಗೂ ಶಿಡ್ಲಘಟ್ಟದ ಜೆ.ಸದಾಶಿವ ಅವರನ್ನು ಗೌರವಿಸಲಾಯಿತು. ಡಾ.ಜಿ.ಎಸ್‌.ಪರಮಶಿವಯ್ಯನವರ ಪುತ್ರ ಜಿ.ಜ್ಞಾನೇಶ್ವರ್‌,  ಎಸ್‌.ಲಕ್ಷಯ್ಯ, ಕೊಳವನಹಳ್ಳಿ ಡಿ.ಮಾರಪ್ಪ,  ಭಕ್ತರಹಳ್ಳಿ ಬೈರೇಗೌಡ, ಅಗಲಗುರ್ಕಿ ಚಲಪತಿ,  ಸುಷ್ಮಾ ಶ್ರೀನಿವಾಸ್‌, ಆಯಿಷಾ ಸುಲ್ತಾನ, ಉಷಾರೆಡ್ಡಿ, ಯಲುವಹಳ್ಳಿ ಸೊಣ್ಣೇಗೌಡ, ಮಳ್ಳೂರು ಹರೀಶ್‌,  ಎಂ.ಜಯರಾಮ್‌, ನಾಗದೇನಹಳ್ಳಿ ನಾರಾಯಣಸ್ವಾಮಿ, ಆನೂರು ದೇವರಾಜ್‌ ಭಾಗವಹಿಸಿದ್ದರು.

Advertisement

ಶಾಶ್ವತ ನೀರಾವರಿ ಹೋರಾಟ ಪûಾತೀತವಾಗಿದ್ದರೂ ಕೆಲವು ಸಂಕುಚಿತ ಮನಸುಗಳು ಹೋರಾಟ ಜೆಡಿಎಸ್‌ ಪ್ರಾಯೋಜಿತ ಎಂದು ಬಿಂಬಿಸಲು ಹೊರಟಿರುವುದು ಸರಿಯಲ್ಲ. ಜೆಡಿಎಸ್‌ ಪಕ್ಷದ ಮುಖಂಡರು ಯಾವುದೇ ರಾಜಕೀಯ ಹಿತಾಸಕ್ತಿ ಇಲ್ಲದೇ ನೀರಾವರಿ ಹೋರಾಟಕ್ಕೆ ಸಹಕರಿಸುತ್ತಿ¨ªಾರೆ. ಇದರಲ್ಲಿ ವಿನಾಕಾರಣ ರಾಜಕೀಯ ಬೆರೆಸುವುದು ಯಾರಿಗೂ ಒಳಿತಲ್ಲ. ಬಯಲು ಸೀಮೆಯ ಕೃಷಿಗೆ ನೀರಿನ ಭದ್ರತೆ ಹಾಗೂ ಜನಸಾಮಾನ್ಯರಿಗೆ ಶುದ್ಧ ಕುಡಿಯುವ ನೀರು ಒದಗಿಸುವ ಡಾ.ಜಿ.ಎಸ್‌.ಪರಮಶಿವಯ್ಯ ವರದಿ ಆಧಾರಿತ ಸಮಗ್ರ ಶಾಶ್ವತ ನೀರಾವರಿ ಯೋಜನೆ ಜಾರಿಗೆ ಸರ್ಕಾರ ಮುಂದಾಗಬೇಕು.
-ಕೆ.ವಿ.ನಾಗರಾಜ್‌, ಕೋಚಿಮುಲ್‌ ನಿರ್ದೇಶಕರು

Advertisement

Udayavani is now on Telegram. Click here to join our channel and stay updated with the latest news.

Next