ಮೈಸೂರು: ಸಾಹಿತ್ಯ ಸಮ್ಮೇಳನದ ಪುಸ್ತಕ ಮೇಳದಲ್ಲಿ ಇದೇ ಮೊದಲ ಬಾರಿಗೆ ಅಪ್ಪಟ ಕನ್ನಡ ಪ್ರೇಮಿಯಾದ ವಿದೇಶಿ ಪ್ರಜೆಯೊಬ್ಬರ ಪುಸ್ತಕ ಮಳಿಗೆಯನ್ನು ಸಾಹಿತ್ಯ ಪ್ರೇಮಿಗಳು ಕಾಣಬಹುದು.
ಡೆನ್ಮಾರ್ಕ್ ಪ್ರಜೆಯಾದ ಹೆಂದ್ರಿಕ್ ಹರದಮನ್ ಅವರ ಮಾತೃಭಾಷೆ ಡಚ್. 1965ರಲ್ಲಿ ಬೆಲ್ಜಿಯಂನಲ್ಲಿ ಹುಟ್ಟಿ, ಅಲ್ಲಿಯೇ ಬೆಳೆದ ಹರದಮನ್, ನಂತರದ ವರ್ಷಗಳಲ್ಲಿ ಅಲೆಮಾರಿಯಂತೆ ಬೇರೆ ಬೇರೆ ದೇಶಗಳನ್ನು ಸುತ್ತುತ್ತ ಸದ್ಯ ಮೈಸೂರಿನಲ್ಲಿ ನೆಲೆಸಿದ್ದಾರೆ. ಮೈಸೂರಿಗೆ ಬರುವ ಮುನ್ನ ಹೆಂದ್ರಿಕ್ ಹರದಮನ್, ಹಲವು ವರ್ಷಗಳ ಕಾಲ ಉದ್ಯೋಗ ನಿಮಿತ್ತ ಬೆಂಗಳೂರಿನಲ್ಲೂ ವಾಸವಿದ್ದರು. 2001ರಲ್ಲಿ ಬೆಂಗಳೂರಿನಲ್ಲಿ ಭಾರತದ ಮೊದಲ ಪಜಲ್ ರಚಿಸುವ ಕಂಪನಿಯನ್ನು ಹುಟ್ಟು ಹಾಕಿರುವ ಹರದಮನ್, 2002-08ರ
ಅವಧಿಯಲ್ಲಿ ವಿಶ್ವ ಪಜØಲ್ ಒಕ್ಕೂಟದ ಅಂತಾರಾಷ್ಟ್ರೀಯ ಪಜØಲ್ ಸಂಸ್ಥೆಯ ಪ್ರತಿನಿಧಿಯಾಗಿ ಭಾರತದಲ್ಲಿ ಪಜØಲ್ ಹಾಗೂ ಸುಡೊಕು ಪಂದ್ಯಾವಳಿಗಳನ್ನು ಆಯೋಜಿಸುತ್ತಾ ಬಂದಿದ್ದಾರೆ.
“ಸಾಹಿತ್ಯ ಸಮ್ಮೇಳನದ ಪುಸ್ತಕ ಮೇಳದಲ್ಲಿ ಮಳಿಗೆ ತೆರೆದಿದ್ದು, ಅಲ್ಲಿ ನಾನೇ ಬರೆದಿರುವ ನಮೂನೆ, ಸಣ್ಣಕಥೆ, ಚುಟುಕು ಎಂಬ ಮೂರು ಕನ್ನಡದ ಪುಸ್ತಕಗಳನ್ನು ಕನ್ನಡಿಗರ ಮುಂದೆ ಇಡುತ್ತಿದ್ದೇನೆ. ಇದು ಸ್ವಲ್ಪ ವಿಚಿತ್ರ ಎನಿಸಿದರೂ ಒಂದು ರೀತಿಯಲ್ಲಿ ಈ ಕಾರ್ಯ ನನಗೆ ಹೆಮ್ಮೆ ಹಾಗೂ ಖುಷಿಯನ್ನು ಕೊಡುತ್ತಿದೆ’ ಎನ್ನುತ್ತಾರೆ ಹೆಂದ್ರಿಕ್. 13,500 ಪ್ರತಿನಿಧಿಗಳ ನೋಂದಣಿ ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸಲು ದಾಖಲೆಯ 13,500 ಜನರು ತಮ್ಮ ಹೆಸರು ನೋಂದಾಯಿಸಿಕೊಂಡಿದ್ದಾರೆ. ಇದರೊಂದಿಗೆ ನೋಂದಣಿ ಕಾರ್ಯ ಮುಕ್ತಾಯಗೊಳಿಸಲಾಗಿದೆ ಎಂದು ನೋಂದಣಿ ಸಮಿತಿ ಅಧ್ಯಕ್ಷ ಎಚ್ .ಎ.ವೆಂಕಟೇಶ್ ತಿಳಿಸಿದ್ದಾರೆ.
ನವೆಂಬರ್ 10ಕ್ಕೆ ನೋಂದಣಿ ಮುಕ್ತಾಯಗೊಳಿಸಲಾಗಿತ್ತಾದರೂ ಜನರ ಉತ್ಸಾಹದ ಹಿನ್ನೆಲೆಯಲ್ಲಿ ನೋಂದಣಿಗೆ ಅವಕಾಶ ಕಲ್ಪಿಸಲಾಗಿತ್ತು. ಶುಕ್ರವಾರ ನೋಂದಣಿಗೆ ಅವಕಾಶವಿಲ್ಲ. ಸರ್ಕಾರಿ ನೌಕರರು ಸಮ್ಮೇಳನದಲ್ಲಿ ಭಾಗವಹಿಸಲು ಹಾಜರಾತಿ ಪತ್ರ (ಒಒಡಿ) ನೀಡಲಾಗುವುದು ಎಂದು ಅವರು ತಿಳಿಸಿದ್ದಾರೆ.