Advertisement
ಅಂತಿಮ ಹಂತದಲ್ಲಿ ಗೆದ್ದ ಮುಂಬೈ 9ನೇ ಸೋಲು ಕಾಣುವ ದುರವಸ್ಥೆಯಿಂದ ಪಾರಾಯಿತು. ಬದಲಿಗೆ 2ನೇ ಗೆಲುವನ್ನು ಕಂಡು ತೃಪ್ತಿಪಟ್ಟಿತು. ಈ ಸೋಲಿನಿಂದ ಗುಜರಾತ್‌ಗೆàನು ಸಮಸ್ಯೆಯಿಲ್ಲ. ಅದರ ಅಗ್ರಸ್ಥಾನ ಹಾಗೆಯೇ ಉಳಿದಿದೆ. ಅದು ಒಟ್ಟು 11 ಪಂದ್ಯಗಳನ್ನಾಡಿದ್ದು 8 ಗೆಲುವು, 3 ಸೋಲಿನೊಂದಿಗೆ ಈಗಾಗಲೇ ಪ್ಲೇಆಫ್ ಸ್ಥಾನವನ್ನು ಬಹುತೇಕ ಖಚಿತಪಡಿಸಿಕೊಂಡಿದೆ.
Related Articles
Advertisement
ಸೂರ್ಯಕುಮಾರ್ ಇಲ್ಲಿ ಉತ್ತಮ ಮೊತ್ತ ಪೇರಿಸಲು ವಿಫಲರಾದರು. ಅವರು 13 ರನ್ ಗಳಿಸಿ ಸಾಂಗ್ವಾನ್‌ಗೆ ವಿಕೆಟ್ ಒಪ್ಪಿಸಿದರು. ಸೂರ್ಯಕುಮಾರ್ ಔಟಾದ ಬಳಿಕ ತಂಡ ಆರಂಭಿಕ ಇಶಾನ್ ಕಿಶನ್ ಮತ್ತು ಅಪಾಯಕಾರಿ ಕೈರನ್ ಪೊಲಾರ್ಡ್ ಅವರನ್ನು ಕಳೆದುಕೊಂಡು ಸಂಕಷ್ಟಕ್ಕೆ ಬಿತ್ತು. ಕಿಶನ್ 29 ಎಸೆತಗಳಿಂದ 5 ಬೌಂಡರಿ ಮತ್ತು 1 ಸಿಕ್ಸರ್ ನೆರವಿನಿಂದ 45 ರನ್ ಗಳಿಸಿದ್ದರೆ ಪೊಲಾರ್ಡ್ ಮತ್ತೆ ಬ್ಯಾಟಿಂಗ್‌ನಲ್ಲಿ ವೈಫಲ್ಯ ಅನುಭವಿಸಿದರು. ಅವರು ಕೇವಲ 4 ರನ್ ಗಳಿಸಲಷ್ಟೇ ಶಕ್ತರಾದರು.
ಕೊನೆ ಹಂತದಲ್ಲಿ ತಿಲಕ್ ವರ್ಮ ಮತ್ತು ಟಿಮ್ ಡೇವಿಡ್ ಸಿಡಿದ ಕಾರಣ ತಂಡದ ಮೊತ್ತ 150ರ ಗಡಿ ದಾಟುವಂತಾಯಿತು. ತಿಲಕ್ ವರ್ಮ 21 ರನ್ ಗಳಿಸಿ ರನೌಟಾದರೆ ಡೇವಿಡ್ 44 ರನ್ ಗಳಿಸಿ ಅಜೇಯರಾಗಿ ಉಳಿದರು. 21 ಎಸೆತ ಎದುರಿಸಿದ ಅವರು 2 ಬೌಂಡರಿ ಮತ್ತು 4 ಭರ್ಜರಿ ಸಿಕ್ಸರ್ ಬಾರಿಸಿ ಮಿಂಚಿದರು. ಬಿಗುದಾಳಿ ಸಂಘಟಿಸಿದ ರಶೀದ್ ಖಾನ್ ತನ್ನ 4 ಓವರ್‌ಗಳ ದಾಳಿಯಲ್ಲಿ 24 ರನ್ ನೀಡಿ ಎರಡು ವಿಕೆಟ್ ಹಾರಿಸಿದರು. ಫರ್ಗ್ಯುಸನ್, ಜೋಸೆಫ್ ಮತ್ತು ಸಂಗವಾನ್ ತಲಾ ಒಂದು ವಿಕೆಟ್ ಪಡೆದರು.
ಸಂಕ್ಷಿಪ್ತ ಸ್ಕೋರ್: ಮುಂಬೈ 20 ಓವರ್, 177/6 (ಇಶಾನ್ ಕಿಶನ್ 45, ರೋಹಿತ್ ಶರ್ಮ 43, ಟಿಮ್ ಡೇವಿಡ್ 44, ರಶೀದ್ ಖಾನ್ 24ಕ್ಕೆ 2). ಗುಜರಾತ್ 20 ಓವರ್, 172/5 (ಸಹಾ 55, ಗಿಲ್ 52, ಎಂ.ಅಶ್ವಿನ್ 29ಕ್ಕೆ 2).