Advertisement

ಅಪಾಯ ಆಹ್ವಾನಿಸುತ್ತಿದೆ ಅಪಾಯಕಾರಿ ತಿರುವು

06:06 PM Oct 24, 2021 | Team Udayavani |

ಹೆಮ್ಮಾಡಿ: ಕೊಲ್ಲೂರು – ಹೆಮ್ಮಾಡಿ ಮುಖ್ಯ ರಸ್ತೆಯ ಕಟ್‌ಬೆಲ್ತೂರಿನಲ್ಲಿರುವ ರೈಲ್ವೇ ಮೇಲ್ಸೆತುವೆಯ ತಿರುವು ಅಪಾಯಕಾರಿಯಾಗಿದ್ದು, ಅಪಾಯವನ್ನು ಆಹ್ವಾನಿಸುವಂತಿದೆ. ಈ ತಿರುವನ್ನು ಸರಿಪಡಿಸಿ, ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕು ಎನ್ನುವುದಾಗಿ ಸಾರ್ವಜನಿಕರು ಆಗ್ರಹಿಸಿದ್ದಾರೆ.

Advertisement

ಹೆಮ್ಮಾಡಿಯಿಂದ ಕೊಲ್ಲೂರುವರೆಗಿನ ಜಿಲ್ಲಾ ಮುಖ್ಯ ರಸ್ತೆಯ ದ್ವಿಪಥ ಹಾಗೂ ಇನ್ನಿತರ ಅಭಿವೃದ್ಧಿ ಕಾಮಗಾರಿ ನಡೆಯುತ್ತಿದ್ದು, ಈ ಕಾಮಗಾರಿಯೊಂದಿಗೆ ಈ ತಿರುವನ್ನು ಸಹ ಅಭಿವೃದ್ಧಿಪಡಿಸಿ, ಮುಕ್ತ ಸಂಚಾರಕ್ಕೆ ಅವಕಾಶ ಮಾಡಿಕೊಡಬೇಕು ಎನ್ನುವ ಬೇಡಿಕೆ ನಾಗರಿಕರದ್ದಾಗಿದೆ.

ಆದಷ್ಟು ಬೇಗ ಈ ತಿರುವಿನ ಬಗ್ಗೆ ಸಂಬಂಧಪಟ್ಟ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು, ಜನಪ್ರತಿನಿಧಿಗಳು ಗಮನಹರಿಸಿ, ಅವಘಢ ಸಂಭವಿಸುವ ಮುನ್ನ ಎಚ್ಚೆತ್ತುಕೊಂಡು ಈ ತಿರುವನ್ನು ಸರಿಪಡಿಸಬೇಕು ಎನ್ನುವುದಾಗಿ ಸ್ಥಳೀಯರು ಒತ್ತಾಯಿಸಿದ್ದಾರೆ.

ಇದನ್ನೂ ಓದಿ:ದಾಂಡೇಲಿ: ಕಾಳಿ ನದಿ ದಂಡೆಯ ಮೇಲೆ ಮೀನು ಹಿಡಿಯುತ್ತಿದ್ದ ಬಾಲಕನನ್ನು ಎಳೆದೊಯ್ದ ಮೊಸಳೆ.!

ಅಪಾಯವೇನು ?
ಹೆಮ್ಮಾಡಿ ಕಡೆಯಿಂದ ಕೊಲ್ಲೂರು ಕಡೆಗೆ ಸಂಚರಿಸುವಾಗ ಈ ರೈಲ್ವೇ ಮೇಲ್ಸೆತುವೆಯ ತಿರುವಿನಲ್ಲಿ ಹೆಮ್ಮಾಡಿ ಕಡೆಯಿಂದ ಸಂಚರಿಸುವವರಿಗೆ ಕೊಲ್ಲೂರು ಕಡೆಯಿಂದ ವಾಹನಗಳು ಬರುತ್ತಿರುವುದು ಕಾಣಿಸುವುದಿಲ್ಲ. ಇದಲ್ಲದೆ ಮೇಲ್ಸೆತುವೆಯ ಮೇಲೆ ಹುಲ್ಲು, ಗಿಡ ಗಂಟಿ ಬೆಳೆದಿದೆ. ಇದು ಅಪಘಾತಕ್ಕೂ ದಾರಿ ಮಾಡಿಕೊಟ್ಟಂತಿದೆ. ಈ ಹಿಂದೆ ಇಲ್ಲಿ ಸಾಕಷ್ಟು ಅವಘಢಗಳು ಸಂಭವಿಸಿದ್ದು, ಪ್ರಾಣಿಹಾನಿ ಸಹ ಉಂಟಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next