Advertisement

Danger Dengue: ಡೆಂಗ್ಯೂ ನಿರ್ಮೂಲನೆಗೆ ದೇಶೀಯ ಔಷಧ ಸಿದ್ಧ!

12:00 AM Aug 15, 2024 | Team Udayavani |

ಹೊಸದಿಲ್ಲಿ: ಈ ಬಾರಿ ದೇಶಾದ್ಯಂತ ಕಾಣಿಸಿಕೊಂಡು ಸಾವು ನೋವಿಗೆ ಕಾರಣವಾಗಿರುವ ಡೆಂಗ್ಯೂ ಕಾಯಿಲೆಯನ್ನು ನಿರ್ಮೂಲನೆ ಮಾಡಲು ಕೇಂದ್ರ ಸರಕಾರ ಬಲವಾದ ಹೆಜ್ಜೆಯಿಟ್ಟಿದೆ.

Advertisement

ಐಸಿಎಂಆರ್‌ ಸಹಭಾಗಿತ್ವದಲ್ಲಿ ಪ್ಯಾನಸೀಯ ಬಯೋಟೆಕ್‌ ಸಂಸ್ಥೆಯು ದೇಶೀಯವಾಗಿಯೇ ಔಷಧವೊಂದನ್ನು ಸಿದ್ಧಪಡಿಸಿದೆ. ಈ ಔಷಧದ 3ನೇ ಹಂತದ ಪ್ರಾಯೋಗಿಕ ಪರೀಕ್ಷೆ ಸದ್ಯ ಜಾರಿಯಲ್ಲಿದೆ ಎಂದು ಕೇಂದ್ರ ಆರೋಗ್ಯ ಸಚಿವ ಜೆ.ಪಿ.ನಡ್ಡಾ ಹೇಳಿದ್ದಾರೆ.

ಡೆಂಗ್ಯೂಆಲ್‌ ಎಂದು ಹೆಸರಿಸಲ್ಪಟ್ಟಿ ರುವ ಔಷಧವನ್ನು ಹರಿಯಾಣದಲ್ಲಿ 3ನೇ ಹಂತದ ಪರೀಕ್ಷೆ ನಡೆಸಲಾಗಿದೆ. ದೇಶದ 18 ರಾಜ್ಯಗಳ 19 ಪ್ರದೇಶಗಳಲ್ಲಿ 10335 ಮಂದಿಗೆ ರೋಗನಿರೋಧಕ ಚುಚ್ಚುಮದ್ದನ್ನು ನೀಡಲಾಗುತ್ತದೆ ಎಂದು ನಡ್ಡಾ ಹೇಳಿದ್ದಾರೆ.

ವಿಶೇಷವೇನು?: ಸದ್ಯ ಭಾರತದಲ್ಲಿ 4 ಡೆಂಗ್ಯೂ ತಳಿಗಳು ತೀವ್ರವಾಗಿವೆ. ಅವುಗಳಿಗೆ ಯಾವುದೇ ದೇಶೀಯ ಚಿಕಿತ್ಸೆಗಳೂ ಭಾರತದಲ್ಲಿ ಲಭ್ಯವಿಲ್ಲ. ಈ ನಾಲ್ಕೂ ತಳಿಗಳಿಗೆ ಸಡ್ಡು ಹೊಡೆಯಬಲ್ಲ ಸಾಮರ್ಥ್ಯವನ್ನು ಡೆಂಗ್ಯೂಆಲ್‌ ಹೊಂದಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ನಡ್ಡಾ, ಡೆಂಗ್ಯೂ ವಿರುದ್ಧ ಭಾರತದಲ್ಲಿ ಮೊದಲ ಬಾರಿಗೆ ಔಷಧ ಸಿದ್ಧಪಡಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next