Advertisement

ಡೊಂಬಿವಲಿ ಕರ್ನಾಟಕ ಸಂಘದ  ದಂಗಾಲ್‌-2019 ಸಮಾರೋಪ

05:43 PM Feb 20, 2019 | |

ಮುಂಬಯಿ: ಸಮಾಜದ ಯಾವುದೇ ಮಗುವು ಶಿಕ್ಷಣದಿಂದ ವಂಚಿತವಾಗಬಾರದು ಎಂಬ ಮಹತ್ತರವಾದ ಉದ್ದೇಶದಿಂದ  ಇಂದು ಸಹಸ್ರಾರು ವಿದ್ಯಾರ್ಥಿಗಳಿಗೆ ಜ್ಞಾನದಾಸೋಹ ನೀಡುವ ಮೂಲಕ ಗಮನ ಸೆಳೆಯುತ್ತಿರುವ ಡೊಂಬಿವಲಿ ಕರ್ನಾಟಕ ಸಂಘವು ಕಳೆದ 12 ವರ್ಷಗಳಿಂದ ಡೊಂಬಿವಲಿ, ಠಾಕೂರ್ಲಿ ಪರಿಸರದ ತುಳು-ಕನ್ನಡಿಗರನ್ನು ಒಗ್ಗೂಡಿಸಿ ಅವರಲ್ಲಿ ಕ್ರೀಡಾ ಮನೋಭಾವ ಬೆಳೆಸುವ ಉದ್ದೇಶದಿಂದ ಕ್ರೀಡೋತ್ಸವ ಆಯೋಜಿಸುತ್ತಿದೆ ಎಂದು ಡೊಂಬಿವಲಿ ಕರ್ನಾಟಕ ಸಂಘದ ಕಾರ್ಯಾಧ್ಯಕ್ಷ ಸುಕುಮಾರ್‌ ಎನ್‌. ಶೆಟ್ಟಿ 
ಅವರು ಹೇಳಿದರು.

Advertisement

ಫೆ. 17 ರಂದು ಸಂಜೆ ಡೊಂಬಿವಲಿ ಜಿಮಾVನ ಮೈದಾನದಲ್ಲಿ ಡೊಂಬಿವಲಿ ಕರ್ನಾಟಕ ಸಂಘ ಆಯೋಜಿಸಿರುವ ವಾರ್ಷಿಕ ಕ್ರೀಡೋತ್ಸವ ದಂಗಾಲ್‌-2019 ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಇಂತಹ ಕ್ರೀಡೋತ್ಸವ ಆಯೋಜನೆಯಿಂದ ತುಳು-ಕನ್ನಡಿಗರ ಸುಪ್ತ ಪ್ರತಿಭೆಗಳಿಗೆ ಪುರಸ್ಕಾರ ಸಿಗುತ್ತಿದ್ದು, ಶಿಕ್ಷಣದ ಜೊತೆಗೆ ನಮ್ಮ ಶ್ರೀಮಂತ ಸಂಸ್ಕೃತಿ, ಸಂಸ್ಕಾರ, ಕಲೆ, ಸಾಹಿತ್ಯ ಹಾಗೂ ಭಾಷೆಯನ್ನು ಉಳಿಸಿ-ಬೆಳೆಸಲು ಡೊಂಬಿವಲಿ ಕರ್ನಾಟಕ ಸಂಘವು ಬದ್ಧವಾಗಿದೆ ಎಂದರು.

ಅತಿಥಿಯಾಗಿ ಆಗಮಿಸಿದ ಬಹುಜನ ಸಮಾಜದ ಮುಖಂಡ, ಗಿರಿಧರ ಕನ್‌ಸ್ಟ್ರಕ್ಷನ್‌ ಇದರ ದಯಾನಂದ ಕಿರಾಟ್ಕರ್‌ ಮಾತನಾಡಿ, ಜೀವನದಲ್ಲಿ ಕ್ರೀಡಾಪಟುಗಳಿಗೆ ಮಹತ್ತರ ಸ್ಥಾನಮಾನವಿದ್ದು, ಇಂತಹ ಕ್ರೀಡಾಸ್ಪರ್ಧೆಗಳನ್ನು ಆಯೋಜಿಸುವುದು ಅತ್ಯಾವಶ್ಯಕ ಂದರು.

ಇದೇ ಸಂದರ್ಭದಲ್ಲಿ ವಿಶೇಷ ಅತಿಥಿಗಳಾಗಿ ಆಗಮಿಸಿದ ಡೊಂಬಿವಲಿ ಹೊಟೇಲ್‌ ಓನರ್ ಅಸೋಸಿಯೇಶನ್‌ನ ಜತೆ ಕೋಶಾಧಿಕಾರಿ ವೇಣುಗೋಪಾಲ್‌ ರೈ, ಬಂಟರ ಸಂಘ ಡೊಂಬಿವಲಿ ಪ್ರಾದೇಶಿಕ ಸಮಿತಿಯ ಉಪಕಾ ರ್ಯಾಧ್ಯಕ್ಷ ಆನಂದ ಡಿ. ಶೆಟ್ಟಿ, ಬಂಟ್ಸ್‌ ಸಂಘ ಡೊಂಬಿವಲಿ ಪ್ರಾದೇಶಿಕ ಸಮಿತಿಯ ಗೌರವ ಕಾರ್ಯದರ್ಶಿ ದಿನೇಶ್‌ ಎನ್‌. ಶೆಟ್ಟಿ, ಹೊಟೇಲ್‌ ಉದ್ಯಮಿ ವಿರಾಜ್‌ ಜೆ. ಶೆಟ್ಟಿ ಹಾಗೂ ಇತರ ಗಣ್ಯರುಗಳನ್ನು ಸಂಸ್ಥೆಯ ವತಿಯಿಂದ ಸಮ್ಮಾನಿಸಿ ಗೌರವಿಸಲಾಯಿತು.

ವೇದಿಕೆಯಲ್ಲಿ ಸಂಘದ ಪದಾಧಿಕಾರಿಗಳಾದ ಸುಕುಮಾರ್‌ ಶೆಟ್ಟಿ, ರಾಜೀವ ಭಂಡಾರಿ, ಲೋಕನಾಥ್‌ ಶೆಟ್ಟಿ, ನ್ಯಾಯವಾದಿ ಆರ್‌. ಎಂ. ಭಂಡಾರಿ, ಜಗತ್ಪಾಲ ಶೆಟ್ಟಿ, ದಯಾನಂದ ಕಿರಾಟ್ಕರ್‌, ಜಗನ್ನಾಥ ಶೆಟ್ಟಿ, ಡಾ| ವಿ. ಎಂ. ಶೆಟ್ಟಿ, ವೇಣುಗೋಪಾಲ್‌ ರೈ, ಆನಂದ ಡಿ. ಶೆಟ್ಟಿ, ದಿನೇಶ್‌ ಎಂ. ಶೆಟ್ಟಿ, ವಿರಾಜ್‌ ಶೆಟ್ಟಿ, ದೇವದಾಸ್‌ ಕುಲಾಲ್‌, ಸುಷ್ಮಾ ಡಿ. ಶೆಟ್ಟಿ, ಮಾಧುರಿಕಾ ಬಂಗೇರ ಮೊದಲಾದವರು ಉಪಸ್ಥಿತರಿದ್ದರು. ಕ್ರೀಡೋತ್ಸವದಲ್ಲಿ ವಿಜೇತರಾದವರಿಗೆ ಗಣ್ಯರು ಬಹುಮಾನ ವಿತರಿಸಿ ಶುಭಹಾರೈಸಿದರು. ಕಾರ್ಯದರ್ಶಿ ದೇವದಾಸ್‌ ಕುಲಾಲ್‌ ಕಾರ್ಯಕ್ರಮ ನಿರ್ವಹಿಸಿದರು.

Advertisement

ಪಥ ಸಂಚಲನದಲ್ಲಿ ಶ್ರೀ ಅಯ್ಯಪ್ಪ ಮಿತ್ರ ಮಂಡಳ ಆಜೆªಪಾಡಾ ಪ್ರಥಮ, ಶ್ರೀ ಮೂಕಾಂಬಿಕಾ ವೆಲ್ಫೆàರ್‌ ಟ್ರಸ್ಟ್‌ ಡೊಂಬಿ ವಲಿ ದ್ವಿತೀಯ, ಸಿರಿನಾಡ ವೆಲ್ಫೆàರ್‌ ಅಸೋ. ತೃತೀಯ ಬಹುಮಾನ ಪಡೆದರು. ಹಗ್ಗ-ಜಗ್ಗಾಟ ಪುರುಷರ ವಿಭಾಗದಲ್ಲಿ ಬಂಟ್ಸ್‌ ಸಂಘ ಡೊಂಬಿವಲಿ ಪ್ರಾದೇಶಿಕ ಸಮಿತಿ ಪ್ರಥಮ, ಅಯ್ಯಪ್ಪ ಮಿತ್ರ ಮಂಡಳಿ ಆಜೆªಪಾಡಾ ದ್ವಿತೀಯ, ಮಹಿಳೆಯರ ವಿಭಾಗದಲ್ಲಿ ಬಂಟರ ಸಂಘ ಡೊಂಬಿವಲಿ ಪ್ರಾದೇಶಿಕ ಸಮಿತಿ ಪ್ರಥಮ, ಶ್ರೀ ಅಯ್ಯಪ್ಪ ಮಿತ್ರ ಮಂಡಳಿ ಆಜೆªಪಾಡಾ ಡೊಂಬಿವಲಿ ದ್ವಿತೀಯ ಬಹುಮಾನ ಪಡೆಯಿತು. ತ್ರೋಬಾಲ್‌ ಸ್ಪರ್ಧೆಯಲ್ಲಿ ಸಿರಿನಾಡ ವೆಲ್ಫೆàರ್‌ ಅಸೋಸಿಯೇಶನ್‌ ಪ್ರಥಮ, ಬಂಟ್ಸ್‌ ಸಂಘ ಡೊಂಬಿವಲಿ ಪ್ರಾದೇಶಿಕ ಸಮಿತಿ ದ್ವಿತೀಯ ಪ್ರಶಸ್ತಿ ಗಳಿಸಿತು.

4ರಿಂದ 6 ವರ್ಷದೊಳಗಿನ ಮಕ್ಕಳ ವಿಭಾಗದಲ್ಲಿ ಪುನೀತ್‌ ಶೆಟ್ಟಿ ಚಾಂಪಿಯನ್‌, 6ರಿಂದ 8 ವರ್ಷದೊಳಗಿನವರ ವಿಭಾಗದಲ್ಲಿ ಪಲಕಾ ಶೆಟ್ಟಿ 9 ರಿಂದ 11 ವರ್ಷದೊಳಗಿನವರ ವಿಭಾಗದಲ್ಲಿ ಸಾರಾ ಪೂಜಾರಿ, 12ರಿಂದ 16 ವರ್ಷದೊಳಗಿನವರ ವಿಭಾಗದಲ್ಲಿ ದಿಶಾ ಸುವರ್ಣ, 17ರಿಂದ 21 ವರ್ಷದೊಳಗಿನವರ ವಿಭಾಗದಲ್ಲಿ ಪವನ್‌ ಪೂಜಾರಿ ಮತ್ತು ಋತಿಕಾ ಪೂಜಾರಿ, 31ರಿಂದ 40 ವರ್ಷದೊಳಗಿನ ವಿಭಾಗದಲ್ಲಿ  ಜಯಲಕ್ಷ್ಮೀ ಪ್ರಭು, 40ರಿಂದ 50 ವರ್ಷದೊಳಗಿನವರ ವಿಭಾಗದಲ್ಲಿ ಶಿವಾನಂದ ಪೂಜಾರಿ ಮತ್ತು ಸುಜಾತಾ ಶೆಟ್ಟಿ, 27ರಿಂದ 31 ವರ್ಷದೊಳಗಿನ ವಿಭಾಗದಲ್ಲಿ  ರಾಘವೇಂದ್ರ ಶೆಟ್ಟಿ ಅವರು ಚಾಂಪಿಯನ್‌ ಪ್ರಶಸ್ತಿ ಪಡೆದರು.

ನೂರಾರು ಮಂದಿ ಕ್ರೀಡಾಪಟುಗಳು ಕ್ರೀಡೋತ್ಸವದಲ್ಲಿ ಭಾಗವಹಿಸಿದ್ದರು. ರಮೇಶ್‌ ಸುವರ್ಣ, ಕಾಂತಿಲಾಲಾ ಪಾಟೀಲ್‌, ಪವಿತ್ರಾ ಶೆಟ್ಟಿ, ಚಂಚಲಾ ಸಾಲ್ಯಾನ್‌ ಸಹಕರಿಸಿದರು. 

ಚಿತ್ರ-ವರದಿ : ಗುರುರಾಜ ಪೋತನೀಸ್‌.

Advertisement

Udayavani is now on Telegram. Click here to join our channel and stay updated with the latest news.

Next