Advertisement

Dandeli: ಚಾಲಕನ‌ ನಿಯಂತ್ರಣ ತಪ್ಪಿ‌ ಮನೆಯೊಳಗೇ ನುಗ್ಗಿದ ಟ್ರ್ಯಾಕ್ಟರ್

08:02 PM Aug 18, 2023 | Team Udayavani |

ದಾಂಡೇಲಿ‌: ಮಣ್ಣು ಹೇರಿಕೊಂಡು ಹೋಗುತ್ತಿದ್ದ ಟ್ರ್ಯಾಕ್ಟರೊಂದು ಚಾಲಕನ ನಿಯಂತ್ರಣ ತಪ್ಪಿ, ಮನೆಯೊಳಗಡೆ ನುಗ್ಗಿದ ಘಟನೆ ದಾಂಡೇಲಿ ನಗರದ ಮಾರುತಿ ನಗರದಲ್ಲಿ ಶುಕ್ರವಾರ ನಡೆದಿದೆ.

Advertisement

ನಗರದಲ್ಲಿ ಯುಜಿಡಿ ಗುತ್ತಿಗೆ ಸಂಸ್ಥೆಯಡಿ ಕಾರ್ಯನಿರ್ವಹಿಸುತ್ತಿರುವ ಟ್ರ್ಯಾಕ್ಟರೊಂದು ಯುಜಿಡಿ ಗುತ್ತಿಗೆ ಸಂಸ್ಥೆಯಿಂದ ನಡೆಯುತ್ತಿರುವ ರಸ್ತೆ ಕಾಮಗಾರಿಗೆ ಸಂಬಂಧಿಸಿದಂತೆ, ಮಣ್ಣನ್ನು ಹೇರಿಕೊಂಡು ಬರುತ್ತಿದ್ದಾಗ ಸ್ಥಳೀಯ ಮಾರುತಿ ನಗರದ ದುರಸ್ತಿಯಲ್ಲಿರುವ ಏರು ರಸ್ತೆಯಲ್ಲಿ ಹೋಗುತ್ತಿದ್ದಾಗ ಮುಂದಕ್ಕೆ ಚಲಿಸಲಾಗದೆ, ಚಾಲಕನ ನಿಯಂತ್ರಣ ತಪ್ಪಿ ಹಿಮ್ಮುಖವಾಗಿ ಚಲಿಸಿದ ಪರಿಣಾಮವಾಗಿ ಮಾರುತಿನಗರದ ಈರಪ್ಪ ಕಿನ್ನಾಳ ಎಂಬವರ ಮನೆಗೆ ನುಗ್ಗಿದೆ.

ಈ ಸಂದರ್ಭದಲ್ಲಿ ಮನೆಯ ಮುಂಭಾಗದಲ್ಲಿ ಯಾರು ಇಲ್ಲದಿದ್ದ ಕಾರಣಕ್ಕೆ ಯಾವುದೇ ಜೀವ ಹಾನಿ ಸಂಭವಿಸಿಲ್ಲ. ಆದರೆ ಮನೆಯ ಮುಂಭಾಗದ ಗೋಡೆ ಸಂಪೂರ್ಣ ಕುಸಿದಿದ್ದು, ಸಾಕಷ್ಟು ಪ್ರಮಾಣದಲ್ಲಿ ಹಾನಿಯಾಗಿದೆ.

ಘಟನೆ ನಡೆದ ತಕ್ಷಣವೇ ನಗರಸಭಾ ಸದಸ್ಯರಾದ ಶಾಹಿದಾ ಪಠಾಣ್, ನಗರ ಸಭೆಯ ವ್ಯವಸ್ಥಾಪಕರಾದ ಪರಶುರಾಮ ಶಿಂಧೆ ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದರು. ಈ ಸಂದರ್ಭದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸ್ಥಳೀಯರು ಜಮಾಯಿಸಿದ್ದರು. ಕಾರ್ಮಿಕ ಮುಖಂಡ ಶಿವಾನಂದ ಗಗ್ಗರಿ, ಮಾಜಿ ನಗರಸಭಾ ಸದಸ್ಯರಾದ ಉಮರ್ ಶೇಖ್ ಮತ್ತಿತರರು ಸ್ಥಳದಲ್ಲಿದ್ದು ಸೂಕ್ತ ಪರಿಹಾರಕ್ಕೆ ಆಗ್ರಹಿಸಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿದ ಯುಜಿಡಿ ಗುತ್ತಿಗೆ ಸಂಸ್ಥೆಯ ಅಧಿಕಾರಿ ಕುಸಿದಿರುವ ಮನೆಯನ್ನು ದುರಸ್ತಿ ಮಾಡಿ ಕೊಡುವ ಭರವಸೆಯನ್ನು ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next