Advertisement

ಢಾಣಕಶಿರೂರ: ಈಟಿ ಫೌಂಡೇಶನ್‌ ನೆರವು

05:50 AM May 09, 2020 | Suhan S |

ಬಾಗಲಕೋಟೆ: ಒಂದೇ ಗ್ರಾಮದಲ್ಲಿ 16 ಜನರಿಗೆ ಕೋವಿಡ್ ಸೋಂಕು ಪತ್ತೆಯಾಗಿರುವ ಬಾದಾಮಿ ತಾಲೂಕಿನ ಢಾಣಕಶಿರೂರ ಗ್ರಾಮಸ್ಥರ ಆರೋಗ್ಯ ಹಿತರಕ್ಷಣೆಗಾಗಿ ಬಾಗಲಕೋಟೆಯ ಎಂ.ಎಸ್‌. ಈಟಿ ಫೌಂಡೇಶನ್‌ ನೆರವಿಗೆ ಧಾವಿಸಿದೆ.

Advertisement

ಕ್ವಾರಂಟೈನ್‌ನಲ್ಲಿರುವ ಢಾಣಕಶಿರೂರ ಗ್ರಾಮದ 300 ಕುಟುಂಬಗಳಿವೆ. ಎಂ.ಎಸ್‌. ಈಟಿ ಫೌಂಡೇಶನ್‌ನಿಂದ ಸ್ಯಾನಿಟೈಜರ್‌ ಉಚಿತವಾಗಿ ನೀಡಲಾಯಿತು. ಫೌಂಡೇಶನ್‌ ಕಾರ್ಯದರ್ಶಿಯೂ ಆಗಿರುವ ಆಗಿರುವ ಜಿಲ್ಲಾ ಮಹಿಳಾ ಕಾಂಗ್ರೆಸ್‌ ಅಧ್ಯಕ್ಷೆ ರಕ್ಷಿತಾ ಭರತಕುಮಾರ ಈಟಿ, ಬಾದಾಮಿಯ ತಹಶೀಲ್ದಾರ್‌ ಸುಹಾಸ ಇಂಗಳೆ ಅವರಿಗೆ 300 ಕುಟುಂಬಕ್ಕೂ ವಿತರಿಸಲು ಸ್ಯಾನಿಟೈಜರ್‌ ಹಸ್ತಾಂತರಿಸಿದರು.

ಢಾಣಕಶಿರೂರ ಗ್ರಾಮಸ್ಥರು ಕೋವಿಡ್ ಕುರಿತು ಭಯಬೀಳದೇ ಎಚ್ಚರಿಕೆ ವಹಿಸಬೇಕು. ತಾಲೂಕು ಆಡಳಿತದ ಸೂಚನೆಯಂತೆ ಕಡ್ಡಾಯವಾಗಿ ಹೋಮ್ ಕ್ವಾರಂಟೈನ್‌ನಲ್ಲಿರಬೇಕು. ಮನೆಯಿಂದ ಹೊರಬರದೇ, ಕೊರೊನಾ ತೊಲಗಿಸಲು ಕೈ ಜೋಡಿಸಬೇಕು ಎಂದು ರಕ್ಷಿತಾ ಈಟಿ ಮನವಿ ಮಾಡಿದರು.

ಬಾದಾಮಿಯ ಪ್ರಮುಖರಾದ ಆರ್‌.ಎಫ್‌. ಬಾಗವಾನ, ಮಲ್ಲಣ್ಣ ಯಲಿಗಾರ, ಚಲವಾದಿ, ರಂಗು ಗೌಡರ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next