Advertisement

Dams Full: ಶೇ.28ರಷ್ಟು ಅಧಿಕ ಮಳೆ, ಬಹುತೇಕ ಅಣೆಕಟ್ಟುಗಳು ಭರ್ತಿ:  ಸಚಿವ ಕೃಷ್ಣ ಬೈರೇಗೌಡ

10:34 PM Jul 27, 2024 | Team Udayavani |

ಶ್ರೀರಂಗಪಟ್ಟಣ: ರಾಜ್ಯದಲ್ಲಿ ಮಳೆ ಪ್ರಮಾಣ ಶೇ. 28ರಷ್ಟು ಹೆಚ್ಚಾಗಿದ್ದು ಬಹುತೇಕ ಜಲಾಶಯಗಳು ಭರ್ತಿಯಾಗಿ ನೀರನ್ನು ಹೊರ ಬಿಡಲಾಗುತ್ತಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು.

Advertisement

ಜಲಾವೃತವಾಗಿರುವ ವೆಲ್ಲೆಸ್ಲಿ ಸೇತುವೆಯನ್ನು ಪರಿಶೀಲಿಸಿ ಮಾತನಾಡಿದ ಅವರು, ರಾಜ್ಯದ ಕರಾವಳಿ ಪ್ರದೇಶಗಳಲ್ಲಿ ಹೆಚ್ಚಿನ ಮಳೆ ಯಾ ಗಿದ್ದು, 6 ಜಿಲ್ಲೆ ಗಳಲ್ಲಿ ಸಾಧಾರಣ ಮಳೆಯಾಗಿದೆ. ಹೇಮಾವತಿ ನದಿ ತುಂಬಿ ಹರಿಯುತ್ತಿದ್ದು ಜಲಾಶಯದಿಂದ ಹೆಚ್ಚುವರಿ ನೀರು ಬಿಡಲಾಗಿದೆ. ಕೆಆರ್‌ಎಸ್‌ನಿಂದ 1.20 ಲಕ್ಷ ಕ್ಯುಸೆಕ್‌ ನೀರು ಬಿಡಲಾಗಿದ್ದು, ತಗ್ಗು ಪ್ರದೇಶ ವಾಸಿಗಳ ಸ್ಥಳಾಂತರಕ್ಕೆ ಸೂಚಿಸಲಾಗಿದೆ.

ಕೇರಳ ವಯನಾಡಿನಲ್ಲಿ ಹೆಚ್ಚು ಮಳೆ ಯಾ ದ ಪರಿಣಾಮ ಕಬಿನಿ ಜಲಾ ಶಯ ತುಂಬಿದ್ದು, 80 ಸಾವಿರ ಕ್ಯುಸೆಕ್‌ ನೀರು ಹರಿಯಬಿಡಲಾಗಿದೆ. ಒಟ್ಟಾರೆಯಾಗಿ ಕೆಆರ್‌ಎಸ್‌ ಮತ್ತು ಕಬಿನಿಯಿಂದ 1.60 ಲಕ್ಷ ಕ್ಯುಸೆಕ್‌ ನೀರು ತಮಿಳುನಾಡಿಗೆ ಹೋಗುತ್ತಿದೆ ಎಂದರು.

“ಪ್ರಧಾನಿ ಕೈ ಹಿಡಿದು ಮೇಕೆದಾಟಿಗೆ ಸಹಿ ಹಾಕಿಸಿದ್ದರೆ ಕೈಮುಗಿಯುತ್ತಿದ್ದೆ’

ಹೊಳೆನರಸೀಪುರ: ನಮ್ಮ ರಾಜ್ಯದ ದೊಡ್ಡ ಯಜಮಾನರು, ಚಿಕ್ಕ ಯಜಮಾನರು ಮೊನ್ನೆ ಗುರುವಾರ ಪ್ರಧಾನ ಮಂತ್ರಿಗಳನ್ನು ಭೇಟಿ ಮಾಡಿದ್ದಾರೆ. ಅದೇ ವೇಳೆ ಪ್ರಧಾನಿಯ ಕೈ ಹಿಡಿದು ಮೇಕೆದಾಟು ಯೋಜನೆಗೆ ಸಹಿ ಹಾಕಿಸುತ್ತಿದ್ದರೆ ನಾವು ನಿಮಗೆ ಧನ್ಯವಾದ ಹೇಳಿ ಕೈಮುಗಿಯುತ್ತಿದ್ದೆವು.

Advertisement

ಯಜಮಾನ್ರೇ ನಿಮಗೆ ಕೈಮುಗಿದು ಕೇಳಿಕೊಳ್ಳುತ್ತೇನೆ, ಮೇಕೆದಾಟು ಹಾಗೂ ಕಳಸಾ ಬಂಡೂರಿ ಯೋಜನೆಗೆ ಅನುಮತಿ ಕೊಡಿಸಿ… ಮಾಜಿ ಪ್ರಧಾನಿ ದೇವೇಗೌಡ, ಕೇಂದ್ರ ಸಚಿವ ಎಚ್‌.ಡಿ. ಕುಮಾರಸ್ವಾಮಿ ಅವರನ್ನು ಕಂದಾಯ ಸಚಿವ ಕೃಷ್ಣ ಬೈರೇಗೌಡ ಒತ್ತಾಯಿಸಿದ ಪರಿ ಇದು. ಹೇಮಾವತಿ ನದಿ ನೀರಿನ ಪ್ರವಾಹದಿಂದಾದ ಹಾನಿಯನ್ನು ಪರಿಶೀಲಿಸಿದ ಬಳಿಕ ಮಾತನಾಡಿ, ಕೇಂದ್ರದ ಬಜೆಟ್‌ನಲ್ಲಿ ರಾಜ್ಯಕ್ಕೆ ಅನ್ಯಾಯವಾಗಿದೆ ಎಂದು ಆರೋಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next