Advertisement

ಸ್ವಾಮೀಜಿಗಳಿಂದಲೇ ಧರ್ಮಕ್ಕೆ ಧಕ್ಕೆ: ಬರಗೂರು

07:17 AM Jun 09, 2019 | Lakshmi GovindaRaj |

ಬಳ್ಳಾರಿ: ನಿಜವಾದ ಧರ್ಮಕ್ಕೆ ಧಕ್ಕೆ ತರುವ ಕೆಲಸವನ್ನು ಸ್ವಾಮೀಜಿಗಳು ಮಾಡುತ್ತಿದ್ದು, ಉತ್ತರ ಪ್ರದೇಶವೇ ಇದಕ್ಕೊಂದು ಉತ್ತಮ ನಿದರ್ಶನ ಎಂದು ಹಿರಿಯ ಸಾಹಿತಿ ಪ್ರೊ| ಬರಗೂರು ರಾಮಚಂದ್ರಪ್ಪ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ವಿರುದ್ಧ ಪರೋಕ್ಷವಾಗಿ ಕುಟುಕಿದರು.

Advertisement

ಇಲ್ಲಿನ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಅಂಬೇಡ್ಕರ್‌ ಸಭಾಂಗಣದಲ್ಲಿ ಬಂಡಾಯ ಸಾಹಿತ್ಯ ಕರ್ನಾಟಕ ವತಿಯಿಂದ ಶನಿವಾರ ಏರ್ಪಡಿಸಿದ್ದ “ಜನ ಚಳವಳಿ ಮತ್ತು ಕನ್ನಡ ಸಾಹಿತ್ಯ’ ರಾಜ್ಯಮಟ್ಟದ ಕಾರ್ಯಾಗಾರದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ದೇಶದಲ್ಲಿ ಸೈದ್ಧಾಂತಿಕ ರಾಜಕಾರಣದ ಕೊರತೆಯಿದೆ. ಸನ್ಯಾಸಿಗಳು ರಾಜಕಾರಣ ಮಾಡುತ್ತಿದ್ದಾರೆ. ಅಂತಹುದರಲ್ಲಿ ಸಾಹಿತಿಗಳು ರಾಜಕಾರಣ ಮಾಡುವುದರಲ್ಲಿ ತಪ್ಪೇನಿದೆ ಎಂದು ಪ್ರಶ್ನಿಸಿದರು. ನಿಜವಾದ ಧರ್ಮಕ್ಕೆ ಧಕ್ಕೆ ತರುವ ಕೆಲಸವನ್ನು ಸ್ವಾಮೀಜಿಗಳು ಮಾಡುತ್ತಿದ್ದಾರೆ. ಇದಕ್ಕೆ ಉತ್ತರ ಪ್ರದೇಶವೇ ತಾಜಾ ನಿದರ್ಶನ ಎಂದರು.

ಪ್ರಸ್ತುತ ದಿನಗಳಲ್ಲಿ ನಾವೆಲ್ಲ ಅಪಾಯದ ವಾತಾವರಣದಲ್ಲಿ ಇದ್ದೇವೆ. ಗೋಡ್ಸೆ ವಾದವೇ ರಾಷ್ಟ್ರವಾದವಲ್ಲ. ಗೋಡ್ಸೆ ರಾಷ್ಟ್ರವಾದಕ್ಕೆ ನಮ್ಮ ಧಿಕ್ಕಾರ. ನಿಜವಾದ ನೆಲದ ಮಕ್ಕಳು ಗೋಡ್ಸೆ ವಾದವನ್ನು ಒಪ್ಪುವುದಿಲ್ಲ. ಶ್ರೀರಾಮನನ್ನು ನಾಮ ಭಕ್ತಿಗೆ ಬಳಸಬೇಕೇ ಹೊರತು, ಬೀದಿಯಲ್ಲಿ ಇನ್ನೊಬ್ಬರನ್ನು ಅಣಕಿಸಲು ಘೋಷಣೆಯಾಗಿ ಕೂಗುವುದಲ್ಲ. ರಾಷ್ಟ್ರವಾದಿಗಳನ್ನು ಮೂಲೆಗೆ ಸರಿಸುವ ಕೆಲಸವಾಗುತ್ತಿದೆ ಎಂದು ವಿಷಾದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next