Advertisement
ಜನಪ್ರತಿನಿಧಿಗಳು, ಜಿಲ್ಲಾ ಪಂಚಾಯತ್, ಮೂಲ್ಕಿ ನಗರ ಪಂಚಾಯತ್ ಮಾತ್ರವಲ್ಲದೇ ಸ್ಥಳೀಯ ದಾನಿಗಳ ನೆರವಿನಿಂದ ಕೆಲವೊಂದು ಸೌಲಭ್ಯಗಳನ್ನು ಒದಗಿಸಲಾಗಿತ್ತು. ಆದರೆ ಶಾಲೆಯ ಹಿಂಬದಿಯ ಒಂದು ಬದಿಯಲ್ಲಿ ಆವರಣ ಗೋಡೆ ಸರಿಯಾಗಿ ಇಲ್ಲದೇ ಇರುವುದರಿಂದ ಈ ಪರಿಸರದ ಕೆಲವು ವ್ಯಕ್ತಿಗಳು ಗಾಂಜಾ ಮತ್ತು ಅಮಲು ಪದಾರ್ಥಗಳನ್ನು ಉಪಯೋಗಿಸಲು ಶಾಲಾ ಆವರಣವನ್ನೇ ಬಳಸುತ್ತಿದ್ದಾರೆ. ಅಲ್ಲದೇ ರಾತ್ರಿ ವೇಳೆ ಮಲ, ಮೂತ್ರವಿಸರ್ಜನೆಗೆ ಶಾಲಾ ಶೌಚಾಲಯದ ಬಾಗಿಲು ಒಡೆದಿದ್ದಾರೆ. ಇನ್ನೂ ಹಲವಾರು ತೊಂದರೆಗಳನ್ನು ನೀಡಿದ್ದಾರೆ. ಈ ಬಗ್ಗೆ ಶಾಲೆಯ ಆಡಳಿತ ಮಂಡಳಿಯಿಂದ ಮೂಲ್ಕಿ ಪೊಲೀಸ್ ಠಾಣೆಗೆ ದೂರು ನೀಡಿದರೂ ಪ್ರಯೋಜನವಾಗಿಲ್ಲ.
ಶಾಲೆಯ ಹೆಣ್ಣು ಮಕ್ಕಳಿಗಾಗಿ ದಾನಿಗಳ ನೆರವಿನಿಂದ ಕಟ್ಟಿಸಲಾಗಿರುವ ಶೌಚಾಲಯಗಳನ್ನು ಹಾಳು ಕೆಡವಿರುವ ವ್ಯಕ್ತಿಗಳನ್ನು ಬಂಧಿಸಿ ಶಿಕ್ಷೆಗೆ ಒಳಪಡಿಸುವಂತೆ ಶಾಲೆಯ ಆಡಳಿತ ಮಂಡಳಿ ಮುಖ್ಯಸ್ಥರು ಆಗ್ರಹಿಸಿದ್ದಾರೆ. ಶಾಸಕರಿಂದ ಭರವಸೆ
ಇತ್ತೀಚೆಗೆ ಇಲ್ಲಿಗೆ ಆಗಮಿಸಿರುವ ಶಾಸಕ ಉಮಾನಾಥ್ ಕೋಟ್ಯಾನ್ ಕೂಡ ಸಮಸ್ಯೆಗೆ ಪರಿಹಾರ ಸೂಚಿಸುವುದಾಗಿ ಭರವಸೆ ನೀಡಿದ್ದಾರೆ.
Related Articles
ಶಾಲೆಯ ಪರಿಸರದಲ್ಲಿ ನೂರಾರು ಮನೆಗಳಿವೆ. ಶಾಲೆಗೆ ಸರಿಯಾದ ಆವರಣ ಗೋಡೆ ಇಲ್ಲದೇ ಇರುವುದರಿಂದ ಕೆಲವು ಕಿಡಿಗೇಡಿಗಳು ಇಂತಹ ಸಮಸ್ಯೆ ಮಾಡುತ್ತಿದ್ದಾರೆ. ಈ ಬಗ್ಗೆ ಪೊಲೀಸರಿಗೆ ನೀಡಿದ ದೂರಿನಂತೆ ಪರಿಶೀಲನೆ ನೆಡಸಲಾಗಿದೆ. ಸ್ಥಳೀಯರು ಸುಳಿವು ನೀಡಿದರೆ ಆರೋಪಿಗಳನ್ನು ಬಂಧಿಸುವುದು ಸಾಧ್ಯ. ಶಾಲಾ ಆವರಣಕ್ಕೆ ಯಾರೂ ಬಾರದಂತೆ ಸೂಕ್ತ ಬಂದೋ ಬಸ್ತ್ ಕೈಗೊಳ್ಳುವುದು ಉತ್ತಮ. ಬೀಟ್ ಪೊಲೀಸರು ನಿತ್ಯವೂ ಹೋಗಿ ಅಲ್ಲಿ ಇದ್ದವರನ್ನು ಓಡಿಸುತ್ತಾರೆ. ಸ್ಥಳೀಯರು ಸಹಕರಿಸಿದರೆ ಆರೋಪಿಗಳ ವಿರುದ್ಧ ಕ್ರಮಕೈಗೊಳ್ಳುವುದು ಸುಲಭವಾಗುತ್ತದೆ.
– ಅನಂತ ಪದ್ಮನಾಭ, ಇನ್ಸ್‌ಪೆಕ್ಟರ್, ಮೂಲ್ಕಿ
Advertisement