Advertisement
ಪಜಿರಡ್ಕ ಎಂಬಲ್ಲಿ ಮೃತ್ಯುಂಜಯ- ನೇತ್ರಾವತಿ ನದಿಗಳು ಸಂಗಮಗೊಂಡು ಇಲ್ಲಿಂದ ನೇತ್ರಾವತಿ ನದಿಯು ಮುಂದುವರಿಯುತ್ತದೆ. ಸಂಗಮ ಸ್ಥಳದಿಂದ 100ಮೀ. ಕೆಳಭಾಗದಲ್ಲಿ ಇದೀಗ ಈ ಕಾಮಗಾರಿ ನಡೆಯುತ್ತಿದೆ. ಇದರಿಂದಾಗಿ ನದಿಯ ಇನ್ನೊಂದು ಬದಿಯಲ್ಲಿರುವ ಇದೇ ಗ್ರಾಮದ ಆನಂಗಳ್ಳಿ, ಪರಾರಿ, ಸಿದ್ದಬೈಲು, ಕರಿಯನೆಲ, ಪರಿಸರ ಸಹಿತ ಉಜಿರೆ, ಧರ್ಮಸ್ಥಳಕ್ಕೆ ಸಂಪರ್ಕ ಹತ್ತಿರವಾಗಲಿದೆ.
Related Articles
Advertisement
ಕಿಂಡಿ ಅಣೆಕಟ್ಟು ನಿರ್ಮಾಣಗೊಳ್ಳುವ ಪ್ರದೇಶದ ಸಮೀಪ ಸಂಗಮ ಪಜಿರಡ್ಕ ಶ್ರೀ ಸದಾಶಿವೇಶ್ವರ ದೇವಸ್ಥಾನವಿದ್ದು, ಇಲ್ಲಿನ ನದಿಯಲ್ಲಿ ದೇವರ ಮೀನುಗಳಿವೆ. ಕಿಂಡಿ ಅಣೆಕಟ್ಟಲ್ಲಿ ಸಂಗ್ರಹಗೊಳ್ಳುವ ನೀರು ಈ ಮೀನುಗಳಿಗೆ ಅನುಕೂಲವಾಗಲಿದೆ.
ಯೋಜನೆಯ ವಿವರ :
4.5 ಕೋಟಿ ರೂ. ವೆಚ್ಚದಲ್ಲಿ 76.3 ಉದ್ದದ ಸೇತುವೆ ಹಾಗೂ ಅಣೆಕಟ್ಟು, 2.5 ಮಿ ಎತ್ತರ ನೀರು ಸಂಗ್ರಹಣ ಸಾಮರ್ಥ್ಯ ದೊಂದಿಗೆ ಸುಮಾರು 30 ಕಿಂಡಿಗಳು ಇರಲಿವೆ. 8 ಪಿಲ್ಲರ್‌ಗಳುಳ್ಳ 5 ಮೀ. ಎತ್ತರದ 2.5 ಮೀ. ಅಗಲದ ಸಂಪರ್ಕ ಸೇತುವೆ ಕಿಂಡಿ ಅಣೆಕಟ್ಟಿನ ಮೇಲ್ಭಾಗದಲ್ಲಿ ರಚನೆಯಾಗಲಿದೆ.
ಅನುಮೋದನೆ :
ಎರಡು ವರ್ಷಗಳ ಹಿಂದೆ ಬೇಸ ಗೆಯಲ್ಲಿ ಧರ್ಮಸ್ಥಳ ಗ್ರಾಮಕ್ಕೆ ನೀರಿನ ಅಭಾವ ಉಂಟಾಗಿತ್ತು. ಹೆಚ್ಚಿನ ಪ್ರಮಾಣದಲ್ಲಿ ನೀರು ಸಂಗ್ರಹಿಸುವ ಉದ್ದೇಶದಿಂದ ಧರ್ಮಾಧಿಕಾರಿ ಡಾ|ಡಿ.ವೀರೇಂದ್ರ ಹೆಗ್ಗಡೆ ಅವರು ಬದಲಿ ವ್ಯವಸ್ಥೆ ಕಲ್ಪಿಸುವ ಕುರಿತು ಗಮನ ಸೆಳೆದಿದ್ದರು. ಯಾತ್ರಾರ್ಥಿಗಳ ಅನುಕೂಲತೆಯನ್ನು ಮನಗಂಡು ಶಾಸಕ ಹರೀಶ್ ಪೂಂಜ ಅವರ ಬೇಡಿಕೆ ಮೇರೆಗೆ ಸಣ್ಣನೀರಾವರಿ ಇಲಾಖೆಯಡಿ ಸ್ಥಳ ಪರಿಶೀಲಿಸಿ ನೇತ್ರಾ ವತಿ ಸ್ನಾನ ಘಟ್ಟದಿಂದ ಮೇಲ್ಭಾ ಗದಲ್ಲಿ ಕಿಂಡಿ ಅಣೆಕಟ್ಟು ಸ್ಥಾಪ ನೆಗೆ ಸರಕಾರದಿಂದ ರೂಪುರೇಷೆ ಸಿದ್ಧ ಪಡಿಸಲು ಅನುಮೋದನೆ ದೊರೆ ತಿತ್ತು. ಅದರಂತೆ ಪಜಿರಡ್ಕ ಸಹಿತ ಮುಳಿಕ್ಕಾರು ಪ್ರದೇಶದಲ್ಲಿ ಕಿಂಡಿ ಅಣೆ ಕಟ್ಟು ನಿರ್ಮಾಣಕ್ಕೆ ಹಸುರು ನಿಶಾನೆ ದೊರೆ ತಿತ್ತು. ಮುಳಿಕ್ಕಾರು ಕಿಂಡಿ ಅಣೆ ಕಟ್ಟು ಕಾಮಗಾರಿ ಬಹುತೇಕ ಮುಗಿದಿದೆ.
ತಾಲೂಕಿನಲ್ಲಿ ನಿರ್ಮಾಣಗೊಳ್ಳಲಿರುವ ನೂತನ ಕಿಂಡಿ ಅಣೆಕಟ್ಟುಗಳ ಟೆಂಡರ್ ಪ್ರಕ್ರಿಯೆ ಚಾಲ್ತಿಯಲ್ಲಿದೆ. -ಗೋಕುಲ್ ದಾಸ್, ಎಇಇ, ಸಣ್ಣನೀರಾವರಿ ಇಲಾಖೆ ಮಂಗಳೂರು ವಿಭಾಗ