Advertisement

ದಲಿತನ ಮುಖಂಡನ ಬರ್ಬರ ಹತ್ಯೆ: ಬಿಜೆಪಿ ಪ್ರತಿಭಟನೆ

03:48 PM Mar 17, 2017 | |

ಉಡುಪಿ: ಬೊಮ್ಮಸಂದ್ರ ನಗರಸಭೆಯ ಸದಸ್ಯ ದಲಿತ ಮುಖಂಡ ಶ್ರೀನಿವಾಸ ಪ್ರಸಾದ್‌ ಅವರ ಬರ್ಬರ ಹತ್ಯೆಯನ್ನು ಖಂಡಿಸಿ ಉಡುಪಿ ಜಿಲ್ಲಾ ಬಿಜೆಪಿ ಮಾ. 16ರಂದು ಗಾಂಧಿ ವೃತ್ತದ ಬಳಿ ಪ್ರತಿಭಟನೆ ನಡೆಸಿತು.

Advertisement

ಹಿಂದುಳಿದ ವರ್ಗದವರ ಮೇಲೆ ಅಪಾರ ಅಭಿಮಾನ ಉಳ್ಳ ರಾಜ್ಯದ ಮುಖ್ಯಮಂತ್ರಿಗಳು ದಲಿತ ಮುಖಂಡ ಶ್ರೀನಿವಾಸ್‌ ಪ್ರಸಾದ್‌ ಅವರ ಬರ್ಬರ ಹತ್ಯೆಯ ಬಗ್ಗೆ ಮೌನವಾಗಿರುವುದು ಸರ್ವಥಾ ಸರಿಯಲ್ಲವೆಂದು ಜಿಲ್ಲಾ ಬಿಜೆಪಿ ಅಧ್ಯಕ್ಷ ಮಟ್ಟಾರ್‌ ರತ್ನಾಕರ ಹೆಗ್ಡೆ ಹೇಳಿದರು.

ದಲಿತ ಮುಖಂಡರೋರ್ವರು ಬಿಜೆಪಿಗೆ ಬೆಂಬಲವಾಗಿದ್ದೇ ಅವರಿಗೆ ಮುಳುವಾಯಿತೇ ಎಂದು ಪ್ರಶ್ನಿಸಿದ ಅವರು ಈ ಬಗ್ಗೆ ನಿಷ್ಪಕ್ಷಪಾತ ತನಿಖೆಯಾಗಬೇಕು ಎಂದು ಅವರು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ  ಬಿಜೆಪಿಯ ಪ್ರಮುಖರಾದ ಲಾಲಾಜಿ ಮೆಂಡನ್‌, ರಘುಪತಿ ಭಟ್‌, ಯಶಪಾಲ ಸುವರ್ಣ, ಉದಯಕುಮಾರ ಶೆಟ್ಟಿ, ನವೀನ್‌ ಶೆಟ್ಟಿ ಕುತ್ಯಾರು, ಸುಪ್ರಸಾದ ಶೆಟ್ಟಿ, ಕುಯಿಲಾಡಿ ಸುರೇಶ್‌ ನಾಯಕ್‌, ಮಿಥುನ್‌ ಹೆಗ್ಡೆ, ಪ್ರಭಾಕರ ಪೂಜಾರಿ, ಶೀಲಾ ಕೆ ಶೆಟ್ಟಿ, ಶ್ಯಾಮಲಾ ಕುಂದರ್‌, ನಯನಾ ಗಣೇಶ್‌, ಸಂಧ್ಯಾ ರಮೇಶ್‌, ಪೂರ್ಣಿಮಾ ಸುರೇಶ್‌, ಪ್ರಕಾಶ್‌ ಶೆಟ್ಟಿ, ಶಿವಪ್ರಸಾದ್‌, ಶಿವಕುಮಾರ್‌, ರಾಜು ಖಾರ್ವಿ, ಹೇಮಂತ್‌ ಕುಮಾರ್‌ ಮತ್ತಿತರರು ಭಾಗವಹಿಸಿದ್ದರು.
 

Advertisement

Udayavani is now on Telegram. Click here to join our channel and stay updated with the latest news.

Next