Advertisement

ದಲಿತರ ವಿವಾಹ: ಆದಾಯ ಮಿತಿ ರದ್ದು

06:50 AM Dec 07, 2017 | Team Udayavani |

ಹೊಸದಿಲ್ಲಿ: ದಲಿತ ಸಮುದಾಯದ ಯುವಕ ಅಥವಾ ಯುವತಿಯರ ಜತೆಗೆ ವಿವಾಹವಾಗುವವರಿಗೆ ಪ್ರೋತ್ಸಾಹ ಧನ ನೀಡಲು ವಿಧಿಸಲಾಗಿದ್ದ ವಾರ್ಷಿಕ ಆದಾಯ ಮಿತಿ ತೆಗೆದು ಹಾಕಲಾಗಿದೆ. ಅಕ್ಟೋಬರ್‌ನಲ್ಲಿ ಈ ಬಗ್ಗೆ ಪರಿಷ್ಕೃತ ಆದೇಶ ಹೊರಡಿಸಲಾಗಿತ್ತು. ಅದರಲ್ಲಿ ಆದಾಯ ಮಿತಿ ವಿವರಣೆ ಪ್ರಸ್ತಾಪಿಸಿರಲಿಲ್ಲ. ಈ ರೀತಿ ವಿವಾಹವಾಗುವವರಿಗೆ 2.5 ಲಕ್ಷ ರೂ. ನೀಡಲಾಗುತ್ತದೆ.

Advertisement

 2013ರಲ್ಲಿ ಆರಂಭಿಸಲಾಗಿದ್ದ “ಡಾ.ಅಂಬೇಡ್ಕರ್‌ ಸಾಮಾಜಿಕ ಏಕೀಕರಣಕ್ಕಾಗಿ ಅಂತರ್ಜಾತೀಯ ವಿವಾಹ ಯೋಜನೆ’ ವ್ಯಾಪ್ತಿಯಲ್ಲಿ ಈ ಪ್ರಸ್ತಾಪ ಬರುತ್ತದೆ. ಅದರ ಅನ್ವಯ ಪ್ರತಿ ವರ್ಷ 500 ಅಂತರ್‌ ಜಾತಿ ವಿವಾಹ ನಡೆಸಲು ಗುರಿ ಹಾಕಿಕೊಳ್ಳ ಲಾಗಿತ್ತು. 3 ವರ್ಷಗಳಲ್ಲಿ ಕೇವಲ 116 ಜೋಡಿಗಳಿಗೆ ಮಾತ್ರ ಇದರ ಅನ್ವಯ ನೆರವು ಸಿಕ್ಕಿದೆ. ಹಾಲಿ ವರ್ಷ 499 ಪ್ರಸ್ತಾಪಗಳು ಸಲ್ಲಿಕೆಯಾಗಿವೆ.

ವಂಚನೆ ತಪ್ಪಿಸುವ ನಿಟ್ಟಿನಲ್ಲಿ ಎರಡು ಕಂತುಗಳಲ್ಲಿ ಹಣಕಾಸಿನ ನೆರವು ನೀಡಲಾಗುತ್ತದೆ. ಹೊಸ ನಿಯಮ ಪ್ರಕಾರ, ನವಜೋಡಿಗೆ 1.5 ಲಕ್ಷ ರೂ. ಸಿಗುತ್ತದೆ. ಅದಕ್ಕಾಗಿ ಸಾಮಾಜಿಕ ನ್ಯಾಯ ಖಾತೆಯ ಡಾ.ಅಂಬೇಡ್ಕರ್‌ ಪ್ರತಿಷ್ಠಾನ ಪರಿಶೀಲಿಸಿ ಅನುಮೋದನೆ ನೀಡಬೇಕು. 1 ಲಕ್ಷ ರೂ.ಮೊತ್ತವನ್ನು ದಂಪತಿ ಹೆಸರಲ್ಲಿರುವ ಜಂಟಿ ಖಾತೆಯಲ್ಲಿ ಠೇವಣಿ ಇರಿಸಲಾಗುತ್ತದೆ. ಮೂರು ವರ್ಷಗಳ ಬಳಿಕ ಅದನ್ನು ವಿಥ್‌ಡ್ರಾ ಮಾಡಲು ಅವಕಾಶ ಉಂಟು. ಅದಕ್ಕೆ ಕೂಡ ಆಧಾರ್‌ ಸಂಖ್ಯೆಯನ್ನು ಬ್ಯಾಂಕ್‌ ಖಾತೆಗೆ ಲಿಂಕ್‌ ಮಾಡಬೇಕು.

Advertisement

Udayavani is now on Telegram. Click here to join our channel and stay updated with the latest news.

Next