Advertisement

ಮೊದಲ ಬಾರಿ ರಾಮನಗರಕ್ಕೆ ಆಗಮಿಸಿದ ಸಿಎಂ; ಕಪ್ಪು ಪಟ್ಟಿ ಪ್ರದರ್ಶಿಸಿ ಪ್ರತಿಭಟನೆ

01:39 PM Jan 03, 2022 | Team Udayavani |

ರಾಮನಗರ: ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಆರಂಭಿಸಲು ಸಿಎಂ ವೇದಿಕೆಗೆ ಬರುತ್ತಿದ್ದಂತೆ ದಲಿತ ಮುಖಂಡರು ಕಪ್ಪು ಪಟ್ಟಿ ಪ್ರದರ್ಶನ ಮಾಡಿ, ಡಿಕೆ ಸಹೋದರರ ಪರ ಘೋಷಣೆ ಕೂಗಿದ ಘಟನೆ ನಡೆಯಿತು.

Advertisement

ಪ್ರತಿಭಟನಾಕಾರರು ಜಿಲ್ಲಾಡಳಿತ ಹಾಗು ಬಿಜೆಪಿ ಸರ್ಕಾರದ ವಿರುದ್ದ ಘೋಷಣೆ ಕೂಗಿದರು. ಇನ್ನೊಂದೆಡೆ ವೇದಿಕೆ ಕಾರ್ಯಕ್ರಮ ಆರಂಭವಾಗಿ,ನಾಡ ಗೀತೆ ಶುರುವಾದರೂ, ಪ್ರತಿಭಟನೆಯ ಘೋಷಣೆ ಕಡಿಮೆಯಾಗಿರಲಿಲ್ಲ‌. ಬಳಿಕ ಕೆಲ ಹೊತ್ತು ಸುಮ್ಮನಾದ ಪ್ರತಿಭಟನಾಕಾರರು ನಾಡ ಗೀತೆ ಬಳಿಕ ಮತ್ತೆ ಪ್ರತಿಭಟನೆ ಮುಂದುವರೆಸಿದರು.

ಇದನ್ನೂ ಓದಿ: ಲಖೀಂಪುರ್ ಖೇರಿ ಹಿಂಸಾಚಾರ: 5,000 ಪುಟಗಳ ಆರೋಪಪಟ್ಟಿ ಸಲ್ಲಿಕೆ, ಸಚಿವರ ಪುತ್ರ ಪ್ರಮುಖ ಆರೋಪಿ

ವೇದಿಕೆಯಲ್ಲೇ ಸಚಿವ ಅಶ್ವತ್ಥ ನಾರಾಯಣ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಕ್ಲಾಸ್ ತೆಗೆದುಕೊಂಡರು.

ಕಾರ್ಯಕ್ರಮ ಉದ್ಘಾಟನೆಗೂ ಮುನ್ನ ಕಾಂಗ್ರೆಸ್ ನ ಎಂಎಲ್ಸಿ ರಸ್.ರವಿ ಮಧ್ಯ ಪ್ರವೇಶಿಸಿ, ಪ್ರತಿಭಟನಾಕಾರರನ್ನು ಸಮಾಧಾನ ಪಡಿಸಲು ಪ್ರಯತ್ನಿಸಿದರೂ, ಅದು ಸಾಧ್ಯವಾಗಲಿಲ್ಲ.

Advertisement

ಈ ವೇಳೆ ಡಿ.ಕೆ. ಸುರೇಶ್ ನಿಮ್ಮ ನೋವನ್ನು ಸಿಎಂ ಗೆ ಹೇಳುತ್ತೆನೆ. ನಡೀರಿ ನಡೀರಿ ಎಂದರು. ಇದು ಕಾಂಗ್ರೆಸ್ ಕಾರ್ಯಕ್ರಮ ಅಲ್ಲ. ಮುಖ್ಯಮಂತ್ರಿಗ ಕಾರ್ಯಕ್ರಮ . ಕೆಳಗಡೆ ಇಳೀರಿ. ಸಿಎಂ ಮೊದಲ ಬಾರಿಗೆ ಬಂದಿದ್ದಾರೆ. ವೇದಿಕೆಗೆ ಅಗೌರವ ತರಬೇಡಿ ಎಂದರು.  ಸುರೇಶ್ ಮಧ್ಯ ಪ್ರವೇಶಿಸಿದ ಬಳಿಕವೇ ಕಾರ್ಯಕರ್ತರು ಹಾಗು ಪ್ರತಿಭಟನಾಕಾರರು ತಣ್ಣಾಗಾದರು.

Advertisement

Udayavani is now on Telegram. Click here to join our channel and stay updated with the latest news.

Next