ಹೊಸದಿಲ್ಲಿ : ದಲಿತ ನಾಯಕ ಜಿಗ್ನೇಶ್ ಮೇವಾನಿ ಅವರು ಮುಂಬರುವ ಗುಜರಾತ್ ಚುನಾವಣೆಯಲ್ಲಿ ಬನಾಸ್‌ಕಾಂತ್ ಜಿಲ್ಲೆಯ ವಡಗಾಂವ್ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಲಿದ್ದಾರೆ.
36ರ ಹರೆಯದ ವಕೀಲ-ಕಾರ್ಯಕರ್ತ ಜಿಗ್ನೇಶ್ ಅವರು ರಾಷ್ಟ್ರೀಯ ದಲಿತ ಅಧಿಕಾರಿ ಮಂಚ್‌ನ ಮುಖ್ಯಸ್ಥರು ಮತ್ತು 2016ರಲ್ಲಿ ಉನಾದಲ್ಲಿ ನಡೆದಿದ್ದ ಕೊರಡೆಯೇಟಿನ ಪ್ರಕರಣದಿಂದ ಪ್ರಾಮುಖ್ಯ ಪಡೆದವರು.
ವಡಗಾಂವ್ ಕ್ಷೇತ್ರದಿಂದ ತಾನು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿವ ನಿರ್ಧಾರವನ್ನು ಇಂದು ಸೋಮವಾರ ಜಿಗ್ನೇಶ್ ಟ್ವಿಟರ್ ಮೂಲಕ ಬಹಿರಂಗಪಡಿಸಿದರು.
ಬಿಜೆಪಿ ವಿರುದ್ಧ ದಲಿತ ಸಮುದಾಯವನ್ನು ಎತ್ತಿ ಕಟ್ಟಿರುವ ಮೂವರು ನಾಯಕರಲ್ಲಿ ಮೇವಾನಿ ಅವರೂ ಒಬ್ಬರು. ಉಳಿದಿಬ್ಬರೆಂದರೆ ಪಾಟಿದಾರ್ ನಾಯಕ ಹಾರ್ದಿಕ್ ಪಟೇಲ್ ಮತ್ತು ಒಬಿಸಿ ನಾಯಕ ಅಲ್ಪೇಶ್ ಠಾಕೂರ್.
ಗ್ರಾಮಾಂತರಣ ಭಾಗಗಳಲ್ಲಿ ದಲಿತರನ್ನು ಒಗ್ಗೂಡಿಸುವಲ್ಲಿ ಮೇವಾನಿ ಅವರು ಮುಂಚೂಣಿಯಲ್ಲಿದ್ದಾರೆ.
ಮೇವಾನಿ ಅವರು ಈ ಮೊದಲು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಭೇಟಿಯಾಗಿದ್ದರು. ಆದರೆ ಕಾಂಗ್ರೆಸ್‌ಗೆ ಬೇಷರತ್ ಬೆಂಬಲ ನೀಡುವಲ್ಲಿ ಹಿಂದೆ ಸರಿದಿದ್ದರು.