ಪಿರಿಯಾಪಟ್ಟಣ: ಟಿಬೇಟಿಯನ್ ಧರ್ಮಗುರು ದಲೈಲಾಮ ಅವರು ತಾಲೂಕಿಗೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಬೈಲಕುಪ್ಪೆ ಪೊಲೀಸ್ ಠಾಣೆಯಲ್ಲಿ ಸಾರ್ವಜನಿಕರು, ಟಿಬೇಟಿಯನ್ ಮತ್ತು ಆಟೋ ಚಾಲಕರು, ಹೋಟೆಲ್ ಮಾಲಿಕರ ಸಭೆ ಜರುಗಿತು.
ಠಾಣಾಧಿಕಾರಿ ಪಿ.ಲೊಕೇಶ್ ಮಾತನಾಡಿ, ಪೊಲೀಸ್ ಇಲಾಖೆಯಲ್ಲಿ ಕಾರ್ಯ ನಿರ್ವಹಿಸಬೇಕಾದರೆ ಸಾರ್ವಜನಿಕರ ಸಹಕಾರ ಅತ್ಯವಶ್ಯಕ. ಟಿಬೇಟಿಯನ್ ಬಂಧುಗಳು, ಸಾರ್ವಜನಿಕರು, ಅಂದಿನಿಂದ ಇಂದಿನವರೆಗೆ ಶಾಂತಿ ಸೌಹಾರ್ಧತೆಯಿಂದ ಜೀವನ ನಡೆಸುತ್ತಿದ್ದು ಮುಂದೆಯೂ ಸಹಕರಿಸಬೇಕೆಂದು ಮನವಿ ಮಾಡಿದರು.
ಟಿಬೇಟಿಯನ್ ಧರ್ಮಗುರುಗಳಾದ ದಲೈಲಾಮ ಅವರು ಡಿ.18ರಿಂದ 23ರ ವರೆಗೆ ಲಾಮಾ ಕ್ಯಾಂಪ್‌ನಲ್ಲಿ ವಾಸ್ತವ್ಯ ಹೂಡಿ ಬೌದ್ಧ ಸನ್ಯಾಸಿಗಳಿಗೆ ಪ್ರವಚನ ಬೋಧಿಸಲಿದ್ದಾರೆ. ನಮ್ಮ ದೇಶದ ಪ್ರಧಾನಮಂತ್ರಿಯವರಿಗೆ ಎಷ್ಟು ಪೊಲೀಸ್ ಬಂದೋಬಸ್ತ್ ಮಾಡಲಾಗುತ್ತದೋ ಅಷ್ಟೇ ದಲೈಲಾಮರಿಗೂ ಬಂದೋಬಸ್ತ್ ಏರ್ಪಡಿಸಲು ಪೊಲೀಸ್ ಇಲಾಖೆಯಿಂದ 600ಕ್ಕೂ ಹೆಚ್ಚು ಸಿಬ್ಬಂದಿ 100ಕ್ಕೂ ಹೆಚ್ಚು ಹಿರಿಯ ಅಧಿಕಾರಿಗಳು ಬರುತ್ತಿದ್ದಾರೆ ಎಂದು ತಿಳಿಸಿದರು.
ಬೌದ್ಧ ಧರ್ಮಗುರು ಬರುತ್ತಿರುವುದರಿಂದ ಅವರ ಅನುಯಾಯಿಗಳು ಹೊರ ರಾಜ್ಯ ಹಾಗೂ ರಾಷ್ಟ್ರಗಳಿಂದ ಬರುವ ಪ್ರವಾಸಿಗರಿಗೆ ಸಾರ್ವಜನಿಕ ಬಂಧುಗಳು ಸಹಕರಿಸಬೇಕೆಂದು ತಿಳಿಸಿದರು. ಓಲ್ಡ್ ಸೆಟ್ಲಮೆಂಟ್‌ನ ಗೆಲಕ್, ನೊಬೆಲ್ ಪ್ರಶಸ್ತಿ ಪಡೆದ ದಲೈಲಾಮ ಗುರೂಜಿಯವರು ಡಿ.21ರಂದು ಸೆರಾ ಲಾಮಕ್ಯಾಂಪ್‌ನಲ್ಲಿ ಬೌದ್ಧ ಸನ್ಯಾಸಿಗಳು ಹಾಗೂ ಟಿಬೇಟಿಯನ್ ಬಂಧುಗಳಿಗೆ ಬೌದ್ಧ ಪ್ರವಚನ ನೀಡಲಿದ್ದು 15ಸಾವಿರಕ್ಕೂ ಹೆಚ್ಚು ಜನ ಸೇರಲಿದ್ದಾರೆಂದರು.
ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಚಂದ್ರಶೇಖರ್, ಗ್ರಾಪಂ ಉಪಾಧ್ಯಕ್ಷ ಯಶ್ವಂತ್‌ಕುಮಾರ್, ಸದಸ್ಯರಾದ ಮುಖುºಲ್, ರೇಣುಕಾಸ್ವಾಮಿ, ನಾಗರಾಜು, ದಿನೇಶ್, ಭರತ್‌ರಾಜೆ ಅರಸ್, ಟಿಬೇಟಿಯನ್ ಮಹಿಳಾ ಸಂಘದ ಅಧ್ಯಕ್ಷೆ ಟೆಂಜಿನ್ ಡೊಲ್ಮಾ, ಲಕಾ ಸಿರಿಂಗ್, ಆಟೋ ಚಾಲಕರಾದ ಮಹೇಶ, ಅರುಣ, ದೇವರಾಜು, ಗ್ರಾಮಸ್ಥರಾದ ಮಹದೇಶ, ದೇವರಾಜ್, ಸಿಬ್ಬಂದಿಗಳಾದ ಎಎಸ್‌ಐ ವಿಜೇಂದ್ರ ನಂದೀಶ್, ಇರ್ಫಾನ್, ಅಶೋಕ್, ಹೋಟೆಲ್ ಮಾಲಿಕರು ಇದ್ದರು.