Advertisement
ಒಟ್ಟಾರೆ ರಾಜ್ಯ ಮಟ್ಟದಲ್ಲೂ ಇಲಾಖೆಯಲ್ಲಿ ಇದೇ ಸ್ಥಿತಿಯಿದ್ದು, 1,569 ಹುದ್ದೆಗಳ ಪೈಕಿ 730 ಖಾಲಿ ಯಿವೆ. 15 ಕಡೆ ಉಪನಿರ್ದೇಶಕ ಹುದ್ದೆಗಳೇ ಖಾಲಿಯಿವೆ. ಅನರ್ಹ ಬಿಪಿಎಲ್ ಪಡಿತರ ಚೀಟಿ ಪತ್ತೆ ಸಹಿತ ಎಲ್ಲ ಕೆಲಸಗಳನ್ನು ಸೀಮಿತ ಸಿಬಂದಿ ನಡೆಸ ಬೇಕಿದ್ದು,ಒತ್ತಡಕ್ಕೆ ಸಿಲುಕಿದ್ದಾರೆ.
ಸಮಾಜದ ಕಟ್ಟಕಡೆಯ ವ್ಯಕ್ತಿ ಜತೆ ನೇರ ಸಂಪರ್ಕ ಹೊಂದಿ ಬಡವನ ಹಸಿವು ನೀಗಿಸುವ ಇಲಾಖೆಯಿದು. ಇತರ ಇಲಾಖೆಗಳಿಗೆ ಆದಾಯ ಹರಿದು ಬಂದಂತೆ ಈ ಇಲಾಖೆಗೆ ಬರುವುದಿಲ್ಲ. ಪಡೆಯುವುದಕ್ಕಿಂತ ಹೆಚ್ಚು ಹಂಚುವುದೇ ಇದರ ಕಾರ್ಯಶೈಲಿ. ಇಲಾಖೆ ಆರ್ಥಿಕವಾಗಿ ಅಷ್ಟು ಸದೃಢವಾಗಿಲ್ಲ, ಸಿಬಂದಿ ಕೊರತೆಯೂ ಇದ್ದು, ಬಡವರ ಇಲಾಖೆ ಸ್ವತಃ ಬಡವಾಗಿದೆ.