Advertisement
ಕೊರೊನಾ ಕಾಲದಲ್ಲಿ ಸರಕಾರಿ ಆಸ್ಪತ್ರೆಗಳ ಅವಲಂಬನೆ ಹೆಚ್ಚಾಗಿದೆ. ಈ ಸಂದರ್ಭದಲ್ಲಿ “ರಾಷ್ಟ್ರೀಯ ಗುಣಮಟ್ಟ ಖಾತರಿ ಪ್ರಮಾಣಪತ್ರ’ (ಎನ್‌ಕ್ಯುಎಎಸ್-ನ್ಯಾಷನಲ್ ಕ್ವಾಲಿಟಿ ಅಶ್ಯೂರೆನ್ಸ್ ಸ್ಟಾಂಡರ್ಡ್ಸ್) ಸರಕಾರಿ ಆಸ್ಪತ್ರೆಗಳ ಮೇಲಿನ ವಿಶ್ವಾಸ ಹೆಚ್ಚಲು ಸಹಕಾರಿಯಾಗಲಿದೆ. ಗುಣಮಟ್ಟ ಸುಧಾರಣೆಗೂ ಪೂರಕವಾಗಲಿದೆ.
ಎನ್‌ಕ್ಯುಎಎಸ್ ಎಂಬುದು ಗುಣಮಟ್ಟ ಪ್ರಮಾಣೀಕರಣ ಮಾನದಂಡ. ಆರೋಗ್ಯ ಸೇವಾ ಸಂಸ್ಥಾಪನೆಗಳ ಗುಣಮಟ್ಟಕ್ಕಾಗಿ ವಿವಿಧ ಹಂತಗಳಲ್ಲಿ ನೀಡಲಾಗುತ್ತದೆ. “ಎನ್‌ಕ್ಯುಎಎಸ್’ಗೆ ನಾಮ ನಿರ್ದೇಶನ ಸಂದರ್ಭದಲ್ಲಿ ವಿವಿಧ ಹಂತಗಳಲ್ಲಿ ಒಟ್ಟು ಆರೋಗ್ಯ ಸೇವಾ ಕೇಂದ್ರಗಳ ಶೇ. 10ನ್ನು ನಾಮನಿರ್ದೇಶನ ಮಾಡಲಾಗುತ್ತದೆ. ನಾಮನಿರ್ದೇಶನಗೊಂಡ ಆಸ್ಪತ್ರೆ/ ಕೇಂದ್ರ ಗಳು ಒಮ್ಮೆ ಈ ಪ್ರಮಾಣೀಕರಣ ಪಡೆಯಲು ವಿಫಲವಾದರೆ ಗುಣಮಟ್ಟ ವೃದ್ಧಿಸಿಕೊಳ್ಳಲು ಸಮಯ ನೀಡಲಾಗುತ್ತದೆ. ಪ್ರಮಾಣೀಕರಣ ಪಡೆದಾಗ ಪ್ರಶಸ್ತಿನಿಧಿ ದೊರಕುತ್ತದೆ.
Related Articles
ದಕ್ಷಿಣ ಕನ್ನಡ ಜಿಲ್ಲೆ
- ವೆನ್ಲಾಕ್ ಜಿಲ್ಲಾಸ್ಪತ್ರೆಯ 10 ವಿಭಾಗಗಳು
- ಲೇಡಿಗೋಶನ್ ಆಸ್ಪತ್ರೆಯ 6 ವಿಭಾಗಗಳು
- ಮೂಲ್ಕಿ ಸಮುದಾಯ ಆರೋಗ್ಯ ಕೇಂದ್ರ (ಸಿಎಚ್‌ಸಿ)
- ಮೂಡುಬಿದಿರೆ ಸಿಎಚ್‌ಸಿ
- ಶಿರ್ತಾಡಿ ಪ್ರಾಥಮಿಕ ಆರೋಗ್ಯ ಕೇಂದ್ರ (ಪಿಎಚ್‌ಸಿ)
- ಜೆಪ್ಪು ನಗರ ಪ್ರಾ.ಆ. ಕೇಂದ್ರ (ಯುಪಿಎಚ್‌ಸಿ)
- ನಾರಾವಿ ಪಿಎಚ್‌ಸಿ
Advertisement
ಉಡುಪಿ ಜಿಲ್ಲೆ- ಉಡುಪಿ ಅಜ್ಜರಕಾಡು ಜಿಲ್ಲಾಸ್ಪತ್ರೆ
- ಮಹಿಳೆ ಮತ್ತು ಮಕ್ಕಳ ಆಸ್ಪತ್ರೆಯ ವಿಭಾಗಗಳು
- ಶಂಕರನಾರಾಯಣ ಪ್ರಾ.ಆ. ಕೇಂದ್ರ
- ಬ್ರಹ್ಮಾವರ ಸಿಎಚ್‌ಸಿ
- ಕೋಟ ಸಿಎಚ್‌ಸಿ ಗುಣಮಟ್ಟ ಕಾಯ್ದುಕೊಳ್ಳಲು ನಿಗಾ
2018-19ರಲ್ಲಿ ವೆನ್ಲಾಕ್ ನ ಬ್ಲಿಡ್‌ಬ್ಯಾಂಕ್, ಐಸಿಯು ಸಹಿತ 5 ವಿಭಾಗಗಳು ರಾಷ್ಟ್ರ ಮಟ್ಟದ ಈ ಪ್ರಮಾಣಪತ್ರ ಪಡೆದಿದ್ದವು. ಪಿಎಚ್‌ಸಿಗಳ ಸಹಿತ ಇತರ 44 ಸರಕಾರಿ ಆರೋಗ್ಯ ಸಂಸ್ಥೆಗಳು ರಾಜ್ಯ ಮಟ್ಟದ ಪ್ರಮಾಣಪತ್ರ ಪಡೆದಿದ್ದವು. ಉಡುಪಿ ಜಿಲ್ಲೆಯಲ್ಲಿ ಈ ಹಿಂದೆ 11 ಸರಕಾರಿ ಆಸ್ಪತ್ರೆಗಳು ರಾಜ್ಯ ಪ್ರಮಾಣೀಕರಣಕ್ಕೆ ಆಯ್ಕೆಯಾಗಿದ್ದವು. ಒಮ್ಮೆ ಪ್ರಮಾಣಪತ್ರ ನೀಡಿದರೆ 3 ವರ್ಷಗಳ ಮಾನ್ಯತೆ ಇದೆ. ಅದನ್ನು ಕಾಯ್ದುಕೊಳ್ಳಲು ನಿಗಾ ವಹಿಸಲಾಗುತ್ತದೆ. 24ಗಿ7 ಸೇವೆಯ 3 ಪ್ರಾ.ಆ. ಕೇಂದ್ರಗಳು
ನಾಮನಿರ್ದೇಶಿತ ವಿಭಾಗಗಳು ಮತ್ತು ಆರೋಗ್ಯ ಕೇಂದ್ರಗಳು 2019-20ನೇ ಸಾಲಿನಲ್ಲಿ ಎನ್‌ಕ್ಯುಎಎಸ್ ರಾಜ್ಯಮಟ್ಟದ ಪರಿಶೀಲನೆಯಲ್ಲಿ ತೇರ್ಗಡೆಯಾಗಿ ರಾಷ್ಟ್ರ ಮಟ್ಟಕ್ಕೆ ನಾಮನಿರ್ದೇಶನಗೊಂಡಿವೆ. ಇದರಲ್ಲಿ 24ಗಿ7 ಸೇವೆ ಸಲ್ಲಿಸುವ ದ.ಕ. ಜಿಲ್ಲೆಯ 2, ಉಡುಪಿ ಜಿಲ್ಲೆಯ 1 ಪಿಎಚ್‌ಸಿ ಸೇರಿವೆ. ಪ್ರಸ್ತುತ ರಾಷ್ಟ್ರೀಯ ಮಟ್ಟದ ಗುಣಮಟ್ಟ ಖಾತರಿಯ ಪ್ರಮಾಣೀಕರಣಕ್ಕೆ ಅಂತಿಮ ಪರಿಶೀಲನೆ ನಡೆಯುತ್ತಿದೆ. ಎನ್‌ಎಚ್‌ಆರ್‌ಸಿ (ನ್ಯಾಷನಲ್ ಹೆಲ್ತ್ ಸಿಸ್ಟಂ ಆ್ಯಂಡ್ ರಿಸೋರ್ಸ್ ಸೆಂಟರ್) ಇದನ್ನು ನಡೆಸುತ್ತದೆ. ಎನ್‌ಕ್ಯುಎಎಸ್ ಪ್ರಮಾಣೀಕರಣ ಸರಕಾರಿ ಆಸ್ಪತ್ರೆಗಳ ಸೇವೆ ಮತ್ತಷ್ಟು ಉತ್ತಮಗೊಳ್ಳಲು ಪ್ರೇರಣೆ ನೀಡುತ್ತಿದೆ. ಸುಧಾರಣೆಗಳಿಗೂ ಕಾರಣವಾಗಿದೆೆ.
-ಡಾ| ರಾಜೇಶ್ವರಿ, ಎನ್‌ಕ್ಯುಎಎಸ್ ಜಿಲ್ಲಾ ಸಲಹೆಗಾರರು, ದ.ಕ ಜಿಲ್ಲೆ
-ಗುರುರಾಜ್, ಎನ್‌ಕ್ಯುಎಎಸ್ ಜಿಲ್ಲಾ ಸಂಯೋಜಕರು, ಉಡುಪಿ