Advertisement
ಉಡುಪಿ: 10 ಮನೆಗಳಿಗೆ ಭಾಗಶಃ ಹಾನಿಉಡುಪಿ ತಾಲೂಕಿನಲ್ಲಿ ರವಿವಾರ ರಾತ್ರಿ ಮತ್ತು ಸೋಮವಾರ ಮತ್ತೆ ಮಳೆ ಬಿರುಸಾಗಿದೆ. ಉಡುಪಿ ನಗರವೂ
ಸೇರಿದಂತೆ ತಾಲೂಕಿನ ವಿವಿಧೆಡೆ ಸೋಮವಾರ ನಿರಂತರ ಮಳೆ ಸುರಿದಿದೆ. ಕುಂದಾಪುರ ಗ್ರಾಮೀಣ ಭಾಗದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮಳೆಯಾಗಿದೆ. ಉಡುಪಿ ಮತ್ತು ಸುತ್ತಮುತ್ತ ಸೋಮವಾರ ಮಧ್ಯಾಹ್ನದವರೆಗೆ ಹಾಗೂ ಸಂಜೆಯ ಅನಂತರ ಮಳೆ ಅಬ್ಬರವಿತ್ತು. ಕಾರ್ಕಳ ಭಾಗದಲ್ಲಿ ಸಾಧಾರಣ ಪ್ರಮಾಣದಲ್ಲಿ ಮಳೆಯಾಗಿದೆ. ನೆರೆ ಸಮಸ್ಯೆ ಉಂಟಾಗಿಲ್ಲವಾದರೂ ರಸ್ತೆ ಗುಂಡಿಗಳು ಅಲ್ಲಲ್ಲಿ ಅಪಾಯ ಆಹ್ವಾನಿಸುತ್ತಲೇ ಇವೆ. ನೀರು ನಿಂತ ರಸ್ತೆ ಹೊಂಡಗಳು ಅಪಘಾತಕ್ಕೂ ಕಾರಣವಾಗುತ್ತಿವೆ.
ರಾಷ್ಟ್ರೀಯ ಹೆದ್ದಾರಿ 66ರ ಒತ್ತಿನೆಣೆಯಲ್ಲಿ ರವಿವಾರ ಗುಡ್ಡ ಕುಸಿತ ನಡೆದ ಸ್ಥಳದಲ್ಲಿ ಸೋಮವಾರ ಐಆರ್‌ಬಿ ಅಧಿಕಾರಿಗಳು ಸಿಮೆಂಟ್ ಚೀಲಗಳನ್ನು ಜೋಡಿ ಸಿಟ್ಟು, ಮಣ್ಣು ಮತ್ತಷ್ಟು ಕುಸಿಯದಂತೆ ತಡೆಯುವ
ಕೆಲಸ ಮಾಡಿದ್ದಾರೆ.
ರವಿವಾರ ಶಾಸಕ ಸುಕುಮಾರ ಶೆಟ್ಟ, ಕುಂದಾಪುರ ಎಸಿ ಭೂಬಾಲನ್ ಅವರು ಕೂಡ ಭೇಟಿ ನೀಡಿ ತುರ್ತು ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದರು.