Advertisement

ದಕ್ಷಿಣ ಕನ್ನಡ, ಉಡುಪಿ: 17 ಖಾಸಗಿ ಪ.ಪೂ. ಕಾಲೇಜುಗಳಲ್ಲಿ ಶೂನ್ಯ ದಾಖಲಾತಿ

01:41 AM Jul 14, 2022 | Team Udayavani |

ಉಡುಪಿ: ದಕ್ಷಿಣ ಕನ್ನಡದ 10 ಹಾಗೂ ಉಡುಪಿಯ 7 ಸೇರಿದಂತೆ ಉಭಯ ಜಿಲ್ಲೆಗಳ 17 ಖಾಸಗಿ ಅನುದಾನರಹಿತ ಪದವಿ ಪೂರ್ವ ಕಾಲೇಜುಗಳಲ್ಲಿ ಶೂನ್ಯ ದಾಖಲಾತಿ ವರದಿಯಾಗಿದೆ. ಸತತ ಮೂರು ವರ್ಷಗಳಿಂದ ಶೂನ್ಯ ದಾಖಲಾತಿಯಿದ್ದರೆ ಅಂತಹ ಕಾಲೇಜು ಗಳಿಗೆ ವಿದ್ಯಾರ್ಥಿಗಳ ಸೇರ್ಪಡೆಗೆ ಅವಕಾಶ ನೀಡುವುದಿಲ್ಲ.

Advertisement

ರಾಜ್ಯದ 541 ಖಾಸಗಿ ಪಿಯು ಕಾಲೇಜು ಗಳ‌ಲ್ಲಿ ಶೂನ್ಯ ದಾಖಲೆಯಿದ್ದು, ಬೆಂಗಳೂರು ದಕ್ಷಿಣ ಮೊದಲು (93), ಬೆಂಗಳೂರು ಉತ್ತರ 2ನೇ (61) ಸ್ಥಾನದಲ್ಲಿದೆ. ಶಿರಸಿಯ 3 ಕಾಲೇಜುಗಳಲ್ಲಿ ಶೂನ್ಯ ದಾಖಲಾತಿಯಿದ್ದು, ಕೊನೆ ಸ್ಥಾನದಲ್ಲಿದೆ ಎಂದು ಇಲಾಖೆ ತಿಳಿಸಿದೆ.

2019-20, 2020-21 ಹಾಗೂ 2021- 22ನೇ ಸಾಲಿನಲ್ಲಿ ಶೂನ್ಯ ದಾಖಲಾತಿಯಾಗಿದ್ದು, ಶೈಕ್ಷಣಿಕ ಚಟುವಟಿಕೆ ನಡೆಯದೆ ಸ್ಥಗಿತ ಗೊಂಡಿರುವ ಕಾಲೇಜುಗಳು 2022-23ನೇ ಸಾಲಿಗೆ ವಿದ್ಯಾರ್ಥಿಗಳ ಸೇರ್ಪಡೆ ಮಾಡಿ
ಕೊಳ್ಳಲು ಅಥವಾ ಎಸ್‌ಎಟಿಎಸ್‌ನಲ್ಲಿ ವಿದ್ಯಾರ್ಥಿ ಗಳ ಮಾಹಿತಿ ಅಪ್‌ಲೋಡ್‌ ಮಾಡಲು ಅವಕಾಶ ಇರುವುದಿಲ್ಲ.

ಪ್ರಸಕ್ತ ಸಾಲಿಗೆ ವಿನಾಯಿತಿ
ಶೂನ್ಯ ದಾಖಲಾತಿ ಹೊಂದಿರುವ ಖಾಸಗಿ ಪ.ಪೂ. ಕಾಲೇಜುಗಳು ಕೊರೊನಾ ಹಿನ್ನೆಲೆ ಯಲ್ಲಿ ಸ್ಥಗಿತಗೊಂಡಿದ್ದಲ್ಲಿ ವಿಶೇಷ ಪ್ರಕರಣದಡಿ ವಿನಾಯಿತಿ ಕಲ್ಪಿಸಿ 2022-23ನೇ ಸಾಲಿಗೆ ವಿದ್ಯಾರ್ಥಿಗಳನ್ನು ದಾಖಲಿಸಿಕೊಳ್ಳಲು ಸರಕಾರ ಅವಕಾಶ ಕೊಟ್ಟಿದೆ. ಕಾಲೇಜನ್ನು ಪುನಃ ಆರಂಭಿಸಲು ಇಚ್ಛಿಸಿದಲ್ಲಿ ಕಾಲೇಜಿನ ಮಂಜೂರಾತಿ ಆದೇಶ ಪ್ರತಿ, ಶೈಕ್ಷಣಿಕ ಮಾನ್ಯತೆ ಆದೇಶಪ್ರತಿ, 2016-17ನೇ ಸಾಲಿನ ಮಾನ್ಯತೆ ನವೀಕರಣ ಪ್ರತಿ, 2022-23ರಲ್ಲಿ ಮಾನ್ಯತೆ ಶುಲ್ಕ ಪಾವತಿಸಿರುವ ಚಲನ್‌, ಮಂಜೂರಾದ ಸಂಯೋ ಜನೆ ಮತ್ತು ವಿಭಾಗದ ಆದೇಶ ಪ್ರತಿ, 2017-18, 2018-19ರಲ್ಲಿ ಸಂಯೋಜನೆ, ವಿಭಾಗವಾರು ವಿದ್ಯಾರ್ಥಿಗಳ ದಾಖಲಾತಿ, ಫ‌ಲಿತಾಂಶದ ವಿವರ ಸಹಿತ ಅಗತ್ಯ ದಾಖಲೆಗಳನ್ನು ಜು. 16ರೊಳಗೆ ಇಲಾಖೆಗೆ ಸಲ್ಲಿಸ ಬೇಕು ಎಂದು ಇಲಾಖೆಯ ಅಧಿ ಕಾರಿಯೊಬ್ಬರು ತಿಳಿಸಿದ್ದಾರೆ.

 

Advertisement
Advertisement

Udayavani is now on Telegram. Click here to join our channel and stay updated with the latest news.

Next