Advertisement

DakshinaKannada Loksabha Constituency:ಇಲ್ಲಿದೆ ವಿಧಾನಸಭಾ ಕ್ಷೇತ್ರವಾರು ಫಲಿತಾಂಶ ವಿವರ

07:54 PM Jun 04, 2024 | Team Udayavani |

ಮಂಗಳೂರು: ಲೋಕಸಭಾ ಚುನಾವಣೆಯ ಫಲಿತಾಂಶ ಹೊರಬಿದ್ದಿದೆ. ಕರ್ನಾಟಕದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿಯ ಎನ್ ಡಿಎ 19 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದರೆ, ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು 9 ಕ್ಷೇತ್ರಗಳಲ್ಲಿ ಗೆಲುವಿನ ನಗೆ ಬೀರಿದ್ದಾರೆ.

Advertisement

ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಕ್ಯಾ.ಬ್ರಿಜೇಶ್ ಚೌಟ ಅವರು ಮೊದಲ ಪ್ರಯತ್ನದಲ್ಲಿಯೇ ಸಂಸತ್ ಪ್ರವೇಶಿಸಿದ್ದಾರೆ. ಸಮೀಪದ ಪ್ರತಿಸ್ಪರ್ಧಿ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್ ಪೂಜಾರಿ ಅವರೆದುರು 1,49,208 ಮತಗಳ ಅಂತರದಿಂದ ಚೌಟ ಗೆಲುವು ಕಂಡಿದ್ದಾರೆ.

ಬಿಜೆಪಿ ಅಭ್ಯರ್ಥಿ ಕ್ಯಾ.ಬ್ರಿಜೇಶ್ ಚೌಟ ಅವರು 7,64,132 ಮತಗಳನ್ನು ಪಡೆದಿದ್ದರೆ, ಕಾಂಗ್ರೆಸ್ ನ ಪದ್ಮರಾಜ್ ಪೂಜಾರಿ ಅವರು 6,14,924 ಮತಗಳನ್ನು ಪಡೆದಿದ್ದಾರೆ. ಮೂರನೇ ಸ್ಥಾನದಲ್ಲಿ ನೋಟಾ ಇದೆ- 23,576 ಮತಗಳು.

ನೋಟಾ ಮತಗಳ ಹೆಚ್ಚಳ: ಕ್ಷೇತ್ರದಲ್ಲಿ ನೋಟಾ (None of the above) ಮತದಾನ ಮಾಡುವಂತೆ ಅಭಿಯಾನ ನಡೆಸಲಾಗಿತ್ತು. ಇದರ ಪರಿಣಾಮ ಕ್ಷೇತ್ರದಲ್ಲಿ 23,576 ಮತಗಳು ನೋಟಾಗೆ ಚಲಾವಣೆಯಾಗಿದೆ. ಅದರಲ್ಲಿಯೂ ಬೆಳ್ತಂಗಡಿ ವಿಧಾನಸಭೆ ಕ್ಷೇತ್ರದಲ್ಲಿ 7691 ನೋಟಾ ಮತ ಚಲಾವಣೆಯಾಗಿರುವುದು ವಿಶೇಷ.

ವಿಧಾನಸಭಾ ಕ್ಷೇತ್ರವಾರು ಪಡೆದ ಮತಗಳು

Advertisement

1 ಬೆಳ್ತಂಗಡಿ

ಬ್ರಿಜೇಶ್: 1,01,408 ಪದ್ಮರಾಜ್: 78,101

2 ಮೂಡಬಿದಿರೆ

ಬ್ರಿಜೇಶ್: 92,496 ಪದ್ಮರಾಜ್: 64,308

3 ಮಂಗಳೂರು ಉತ್ತರ:

ಬ್ರಿಜೇಶ್: 1,08,137 ಪದ್ಮರಾಜ್: 76,716

4 ಮಂಗಳೂರು ದಕ್ಷಿಣ

ಬ್ರಿಜೇಶ್: 95,531 ಪದ್ಮರಾಜ್: 71,187

5 ಮಂಗಳೂರು

ಬ್ರಿಜೇಶ್: 64,870 ಪದ್ಮರಾಜ್: 97,933

6 ಬಂಟ್ವಾಳ

ಬ್ರಿಜೇಶ್: 94,679 ಪದ್ಮರಾಜ್: 88,686

7 ಪುತ್ತೂರು

ಬ್ರಿಜೇಶ್: 100,247 ಪದ್ಮರಾಜ್: 71,557

8 ಸುಳ್ಯ

ಬ್ರಿಜೇಶ್: 1,02,762 ಪದ್ಮರಾಜ್: 63,615

Advertisement

Udayavani is now on Telegram. Click here to join our channel and stay updated with the latest news.

Next