Advertisement

ದಕ್ಷಿಣ ಕನ್ನಡ: ಕೆಎಸ್ಸಾರ್ಟಿಸಿ  ಬಸ್‌ ಸಂಚಾರ ಆರಂಭ

10:29 PM Jun 23, 2021 | Team Udayavani |

ಮಂಗಳೂರು: ಜಿಲ್ಲೆಯಲ್ಲಿ ಲಾಕ್‌ಡೌನ್‌ ಸಡಿಲಗೊಂಡಿದ್ದು, ಬುಧವಾರ ವಿವಿಧ ಕಡೆಗಳಿಗೆ ಸುಮಾರು 200 ಬಸ್‌ ಸಂಚರಿಸಿವೆ.

Advertisement

ಮಂಗಳೂರು ಮತ್ತು ಪುತ್ತೂರು ಕೆಎಸ್ಸಾರ್ಟಿಸಿ ವಿಭಾಗದಿಂದ ಉಪ್ಪಿನಂಗಡಿ, ಧರ್ಮಸ್ಥಳ, ವಿಟ್ಲ, ಸುಬ್ರಹ್ಮಣ್ಯ ಸಹಿತ ಹೊರ ಜಿಲ್ಲೆಗಳಾದ ಉಡುಪಿ, ಬೆಂಗಳೂರು, ಬಾಗಲಕೋಟೆ, ಹುಬ್ಬಳ್ಳಿ, ಮೈಸೂರು ಸೇರಿದಂತೆ ವಿವಿಧ ಕಡೆಗಳಿಗೆ ಬಸ್‌ ಕಾರ್ಯಾಚರಣೆ ನಡೆಸಿವೆ. ದ.ಕ. ಜಿಲ್ಲೆಯೊಳಗೆ ಬೆಳಗ್ಗೆ 7 ಗಂಟೆಗೆ ಆರಂಭಗೊಂಡ ಬಸ್‌ ಸೇವೆ ಅಪರಾಹ್ನ 1 ಗಂಟೆಯವರೆಗೆ ಮುಂದುವರಿದಿತ್ತು. ಅಂತರ್‌ ಜಿಲ್ಲೆಗಳಿಗೆ ರಾತ್ರಿಯವರೆಗೂ ಸೀಮಿತ ಸಂಖ್ಯೆಯಲ್ಲಿ ಬಸ್‌ ಓಡಾಟ ನಡೆಸಿದವು.

ಅಂತಾರಾಜ್ಯ ಬಸ್‌ ಸಂಚಾರಕ್ಕೆ ಅನುಮತಿ ದೊರೆಯದ ಕಾರಣ ಕಾಸರಗೋಡು ಕಡೆಗೆ ತೆರಳುವ ಬಸ್‌ಗಳು ತಲಪಾಡಿ ಗಡಿಯವರೆಗೆ ಮಾತ್ರ ಸಂಚರಿಸಿತ್ತು. ಪ್ರಯಾಣಿಕರ ಅಗತ್ಯತೆಗೆ ಅನುಗುಣವಾಗಿ ಮಂಗಳೂರು ನಗರದಲ್ಲಿ ಸೀಮಿತ ಸಂಖ್ಯೆಯ ನರ್ಮ್ ಬಸ್‌ ಸಂಚರಿಸಿತ್ತು. ಬೆಳಗ್ಗೆಯಿಂದಲೇ ಬಸ್‌ ಸಂಚಾರ ಆರಂಭಗೊಂಡರೂ, ಕೆಎಸ್ಸಾರ್ಟಿಸಿ ಬಸ್‌ ನಿಲ್ದಾಣಕ್ಕೆ ಆಗಮಿಸುವವರ ಸಂಖ್ಯೆ ಕಡಿಮೆ ಇತ್ತು.

ಆರಂಭಗೊಳ್ಳದ ಖಾಸಗಿ ಬಸ್‌ ಸಂಚಾರ :

ಮಂಗಳೂರು ನಗರ ಸೇರಿದಂತೆ ದ.ಕ. ಜಿಲ್ಲೆಯಲ್ಲಿ ನಿರೀಕ್ಷೆಯಂತೆ ಖಾಸಗಿ ಬಸ್‌ ಸಂಚಾರ ಆರಂಭಗೊಂಡಿಲ್ಲ. ಈಗಾಗಲೇ ಹಲವಾರು ಖಾಸಗಿ ಬಸ್‌ಗಳನ್ನು ಆರ್‌ಟಿಒಗೆ ಸರಂಡರ್‌ ಮಾಡಲಾಗಿದ್ದು, ಈ ತಿಂಗಳಾಂತ್ಯದವರೆಗೆ ಖಾಸಗಿ ಬಸ್‌ಗಳು ರಸ್ತೆಗಿಳಿಯುವುದು ಅನುಮಾನವಾಗಿದೆ.

Advertisement

ಉಡುಪಿ: ಇಂದಿನಿಂದ ಹೆಚ್ಚುವರಿ ಬಸ್‌ :

ಉಡುಪಿ: ಲಾಕ್‌ಡೌನ್‌ ತೆರವು ಬಳಿಕ ಜಿಲ್ಲೆಯಲ್ಲಿ ಜನ ಸಂಚಾರ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಜೂ.24ರಿಂದ ಹೆಚ್ಚುವರಿ ಬಸ್‌ ಓಡಾಟ ನಡೆಸಲು ಉಡುಪಿ ಕೆಎಸ್ಸಾರ್ಟಿಸಿ ಘಟಕ ನಿರ್ಧರಿಸಿದೆ. ಉಡುಪಿ -ಕುಂದಾಪುರ ಮಾರ್ಗವಾಗಿ 12, ಕಾರ್ಕಳ ಮಾರ್ಗವಾಗಿ 7, ಮಂಗಳೂರು ಮಾರ್ಗವಾಗಿ 4 ಬಸ್‌ ಸೇರಿದಂತೆ ಒಟ್ಟು 53 ಕೆಎಸ್ಸಾರ್ಟಿಸಿ ಬಸ್‌ಗಳು ಸಂಚಾರ ನಡೆಸಲಿವೆ.

Advertisement

Udayavani is now on Telegram. Click here to join our channel and stay updated with the latest news.

Next