Advertisement
ಜಿಲ್ಲೆಯಲ್ಲಿ ಈ ಬಾರಿ ಗರಿಷ್ಠ ಮತದಾನವಾಗಬೇಕು ಎಂಬ ನೆಲೆಯಲ್ಲಿ ಜಿಲ್ಲಾಡಳಿತ ಚುನಾವಣೆಗೆ ಕೆಲವು ತಿಂಗಳ ಮೊದಲೇ ಇದಕ್ಕೆ ಪೂರಕವಾಗಿ ಪ್ರಕ್ರಿಯೆಗಳನ್ನು ಆರಂಭಿಸಿತ್ತು. ಸ್ವೀಪ್ ಮೂಲಕ ಜಿಲ್ಲೆಯಾದ್ಯಂತ ಮತದಾರರಲ್ಲಿ ಅರಿವು ಕಾರ್ಯಕ್ರಮಗಳನ್ನು ವ್ಯಾಪಕವಾಗಿ ನಡೆಸಿತ್ತು.
ಬೆಳ್ತಂಗಡಿಯಲ್ಲಿ ಒಟ್ಟು 2,18,880 ಮತದಾರರಲ್ಲಿ 1,78,162 ಮತದಾರರು ಮತ ಚಲಾಯಿಸಿದ್ದು ಶೇ.81.40 ಮತದಾನವಾಗಿದೆ. ಮೂಡಬಿದಿರೆಯಲ್ಲಿ ಒಟ್ಟು 2,00,045 ಮತದಾರರಲ್ಲಿ 1,50,917 ಮತದಾರರು ಮತ ಚಲಾಯಿಸಿದ್ದು ಶೇ. 75.44 ಮತದಾನವಾಗಿದೆ. ಮಂಗಳೂರು ನಗರ ಉತ್ತರದಲ್ಲಿ 2,34,826 ಮತದಾರರಲ್ಲಿ 1,75,071 ಮತದಾರರು ಮತ ಚಲಾಯಿಸಿದ್ದು, ಶೇ. 74.55 ಮತದಾನ ದಾಖಲಾಗಿದೆ.
Related Articles
Advertisement
ಬಂಟ್ವಾಳದಲ್ಲಿ 2,21,735 ಮತದಾರರ ಪೈಕಿ 1,81,590 ಮಂದಿ ಮತ ಹಾಕಿದ್ದು, ಶೇ.81.89 ಮತದಾನವಾಗಿದೆ. ಪುತೂರಲ್ಲಿ 2,01,884 ಮತದಾರರಲ್ಲಿ 1,64,938 ಮಂದಿ ಮತ ಚಲಾಯಿಸಿದ್ದು, ಶೇ. 81.70 ಮತದಾನ ದಾಖಲಾಗಿದೆ. ಸುಳ್ಯದಲ್ಲಿ 1,98,686 ಮತದಾರರಲ್ಲಿ 1,66,854 ಮಂದಿ ಮತ ಚಲಾಯಿಸಿದ್ದು ಶೇ. 83.98 ಮತದಾನ ಆಗಿದೆ.
ಈ ಬಾರಿಯೂ ಸುಳ್ಯ ಪ್ರಥಮಈ ಬಾರಿಯ ವಿಧಾನಸಭಾ ಚುನಾವಣೆಯಲ್ಲೂ ಗರಿಷ್ಠ ಮತದಾನದ ಮೂಲಕ ಸುಳ್ಯ ಕ್ಷೇತ್ರವು ಜಿಲ್ಲೆಯಲ್ಲಿ ಪ್ರಥಮ ಸ್ಥಾನ ಪಡೆದಿದೆ. ಇಲ್ಲಿ ಈ ಬಾರಿ ಶೇ. 83.98 ಮತದಾನವಾಗಿದೆ. 2013ರ ವಿಧಾನಸಭಾ ಚುನಾವಣೆಯಲೂ ಶೇ. 80.63 ಮತದಾನ ಆಗುವ ಮೂಲಕ ಸುಳ್ಯ ಪ್ರಥಮ ಸ್ಥಾನ ಗಳಿಸಿತ್ತು. ಜಿಲ್ಲೆಯಲ್ಲಿ ಚುನಾವಣೆ ಶಾಂತಿಯುತವಾಗಿ ನಡೆದಿದ್ದು, ಉತ್ತಮ ಮತದಾನ ದಾಖಲಾಗಿದೆ. ಇದರ ಹಿಂದೆ ಜಿಲ್ಲೆಯ ಎಲ್ಲ ಅಧಿಕಾರಿಗಳು ಹಾಗೂ ಸಿಬಂದಿಗಳ ಬಹುದೊಡ್ಡ ಶ್ರಮವಿದೆ. ಒಟ್ಟು ಚುನಾವಣೆ ಪ್ರಕ್ರಿಯೆ ಸುಗಮವಾಗಿ ನಡೆದಿರುವುದು ಸಂತಸ ತಂದಿದೆ.
– ಶಶಿಕಾಂತ್ ಸೆಂಥಿಲ್, ಜಿಲ್ಲಾ ಮುಖ್ಯ ಚುನಾವಣಾಧಿಕಾರಿ