Advertisement

ದಕ್ಷಿಣ ಕನ್ನಡ: ಬೆಳಗ್ಗೆಯೇ ಪ್ರಥಮ ಪಿಯುಸಿ ಪರೀಕ್ಷೆ

01:16 AM Feb 14, 2022 | Team Udayavani |

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರಥಮ ಪಿಯುಸಿ ಪರೀಕ್ಷಾ ಸಮಯ ಬದಲಿಸಲು ಪಿಯು ಇಲಾಖೆ ಚಿಂತನೆ ನಡೆಸಿದ್ದು, ಮಧ್ಯಾಹ್ನದ ಬಳಿಕ ನಡೆಯಬೇಕಿದ್ದ ಪರೀಕ್ಷೆಗಳನ್ನು ಬೆಳಗ್ಗೆ ನಡೆಸಲು ಸಿದ್ಧತೆ ಆರಂಭವಾಗಿದೆ.

Advertisement

ಪರೀಕ್ಷಾ ವೇಳಾಪಟ್ಟಿ, ಪ್ರಶ್ನೆಪತ್ರಿಕೆ ಸಿದ್ಧತೆ ಸಹಿತ ಪ್ರತಿಯೊಂದು ವಿಚಾರವನ್ನು ಜಿಲ್ಲಾ ಮಟ್ಟದಲ್ಲಿಯೇ ನಿರ್ಧರಿಸುವ ಸ್ವಾತಂತ್ರ್ಯವನ್ನು ಜಿಲ್ಲಾಮಟ್ಟದ ಉಪನಿರ್ದೇಶಕರಿಗೆ ಈ ಬಾರಿ ನೀಡಲಾಗಿದೆ. ಪ್ರಥಮ ಪಿಯುಸಿ ಪರೀಕ್ಷೆಯನ್ನು ಇಲಾಖೆ ಮೊದಲ ಬಾರಿಗೆ ಮಧ್ಯಾಹ್ನದ ಬಳಿಕ ನಡೆಸಲು ಸೂಚಿಸಿತ್ತು.

ಆದರೆ ದ.ಕ. ಪ್ರಾಂಶುಪಾಲರ ಅಸೋಸಿಯೇಶನ್‌ ಮತ್ತು ವಿದ್ಯಾರ್ಥಿಗಳ ಹೆತ್ತವರು ಪರೀಕ್ಷೆಯನ್ನು ಬೆಳಗ್ಗೆ ನಡೆಸಲು ಕೋರಿದ್ದರು. ಅದರಲ್ಲೂ ಎಸೆಸೆಲ್ಸಿ ಪರೀಕ್ಷೆಯ ವಿರಾಮದ ಸಮಯದಲ್ಲಿ ನಡೆಸುವಂತೆ ಇಲಾಖೆಗೆ ಮನವಿ ಮಾಡಿದ್ದರು. ಈಗ ಇಲಾಖೆ ನಿರ್ದೇಶಕರು ಕೂಡ ಬೆಳಗ್ಗೆಯೇ ಪರೀಕ್ಷೆ ನಡೆಸುವ ಬಗ್ಗೆ ಸೂಚನೆ ನೀಡಿದ್ದು, ಅಧಿಕೃತ ವೇಳಾಪಟ್ಟಿ ಪ್ರಕಟವಾಗಲಿದೆ.

ದ.ಕ. ಪಿಯು ಇಲಾಖೆ ಉಪ ನಿರ್ದೇಶಕ ಜಯಣ್ಣ ಮಾತನಾಡಿ, ತಾತ್ಕಾಲಿಕ ವೇಳಾಪಟ್ಟಿ ಸಿದ್ಧಪಡಿಸಲಾಗಿದೆ. ಎಲ್ಲ ಪರೀಕ್ಷೆಗಳನ್ನು ಎಸೆಸೆಲ್ಸಿ ಪರೀಕ್ಷೆಗಳು ನಡೆಯದ ದಿನಗಳಲ್ಲೇ, ಬೆಳಗ್ಗೆ 9.30ರಿಂದ 12.45ರ ವರೆಗೆ ನಡೆಯುವ ಬಗ್ಗೆ ಚಿಂತಿಸಲಾಗಿದೆ. ಈ ಬಗ್ಗೆ ಅಧಿಕೃತ ತೀರ್ಮಾನ ಶೀಘ್ರ ಕೈಗೊಳ್ಳಲಾಗುವುದು ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next