Advertisement

ದಕ್ಷಿಣ ಕನ್ನಡ ಜಿಲ್ಲೆ: 4,969 ಅನರ್ಹ ಬಿಪಿಎಲ್‌ ಕಾರ್ಡ್‌ಗಳು ಬಯಲಿಗೆ!

01:20 AM Dec 08, 2019 | Team Udayavani |

ಮಂಗಳೂರು: ತಪ್ಪು ಮಾಹಿತಿ ನೀಡಿ ಬಿಪಿಎಲ್‌ ಪಡಿತರ ಚೀಟಿಗಳನ್ನು ಪಡೆದುಕೊಂಡವರನ್ನು ಪತ್ತೆ ಹಚ್ಚುವ ಕಾರ್ಯ ಮುಂದುವರಿದಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನವೆಂಬರ್‌ ತಿಂಗಳೊಂದರಲ್ಲೇ 2,024 ಬಿಪಿಎಲ್‌ ಚೀಟಿಗಳನ್ನು ಎಪಿಎಲ್‌ಗೆ ಬದಲಾಯಿಸಲಾಗಿದೆ. ಇದರೊಂದಿಗೆ ಈ ವರೆಗೆ 4,969 ಕುಟುಂಬಗಳು ಬಿಪಿಎಲ್‌ನಿಂದ ಎಪಿಎಲ್‌ಗೆ ಬದಲಾಗಿವೆ.

Advertisement

ಬಿಪಿಎಲ್‌ ಪಡಿತರ ಚೀಟಿಗೆ ಅನರ್ಹರಾದರೂ ಆ ಸೌಲಭ್ಯ ಪಡೆಯುತ್ತಿರುವ ಶ್ರೀಮಂತ ವರ್ಗದವರು ಎಪಿಎಲ್‌ಗೆ ಪರಿವರ್ತಿಸಿಕೊಳ್ಳಲು ಸರಕಾರವು ಸೆ. 30ರ ವರೆಗೆ ಗಡುವು ನೀಡಿತ್ತು. ಗಡುವು ದಾಟಿದಡಿಕೊಳ್ಳದ ಹಿನ್ನೆಲೆಯಲ್ಲಿ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯು ಪ್ರಾದೇಶಿಕ ಸಾರಿಗೆ ಇಲಾಖೆಯ ಮೊರೆಹೊಕ್ಕು ಆಧಾರ್‌ ಲಿಂಕ್‌ ಆಧಾರಿತವಾಗಿ ಅನರ್ಹ ಬಿಪಿಎಲ್‌ ಕಾರ್ಡ್‌ದಾರರನ್ನು ಪತ್ತೆಹಚ್ಚುತ್ತಿದೆ.

ಎಪಿಎಲ್‌ಗೆ ಕಾರ್ಡ್‌ ಬದಲಾಯಿಸದವರಿಂದ ದಂಡವನ್ನೂ ಸಂಗ್ರಹಿಸಲಾಗಿತ್ತು. ಇವೆಲ್ಲದರ ಪರಿಣಾಮ ಕಾರ್ಡ್‌ ಬದಲಾವಣೆ ಪ್ರಕ್ರಿಯೆ ವೇಗ ಪಡೆದಿತ್ತು. ಅಕ್ಟೋಬರ್‌ ಅಂತ್ಯಕ್ಕೆ 2,945 ಮಂದಿ ಎಪಿಎಲ್‌ಗೆ ಪರಿವರ್ತಿಸಿಕೊಂಡಿದ್ದರೆ, ನವೆಂಬರ್‌ ಅಂತ್ಯಕ್ಕೆ ಈ ಸಂಖ್ಯೆ 4,969ಕ್ಕೇರಿದೆ.

2,372 ಚತುಷ್ಕಕ್ರ ವಾಹನದ ಕುಟುಂಬ
ಮಂಗಳೂರು ಚ ಪಡಿತರ ಚೀಟಿದಾರರ ಪ್ರದೇಶದಲ್ಲಿ 262, ಮಂಗಳೂರು ತಾಲೂಕು 740, ಬಂಟ್ವಾಳ 1081, ಪುತ್ತೂರು 804, ಬೆಳ್ತಂಗಡಿ 1621, ಸುಳ್ಯ 461 ಕಾರ್ಡ್‌ಗಳನ್ನು ಎಪಿಎಲ್‌ಗೆ ಪರಿವರ್ತಿಸಲಾಗಿದೆ. ಈ ಪೈಕಿ 12 ಮಂದಿ ಸರಕಾರಿ ನೌಕರರು, 4 ಮಂದಿ ಕಾರ್ಪೊರೇಟ್‌ ವಲಯ ಗಳಲ್ಲಿರುವವರು, 2,372 ಮಂದಿ ನಾಲ್ಕು ಚಕ್ರ ವಾಹನ ಹೊಂದಿದವರೂ ಸೇರಿದ್ದಾರೆ.

ಅನರ್ಹ ಬಿಪಿಎಲ್‌
ಕಾರ್ಡ್‌ ಹೊಂದಿದವರು ಸ್ವಯಂ ಪ್ರೇರಿತರಾಗಿಯೇ ಬಿಪಿಎಲ್‌ ಕಾರ್ಡ್‌ಗಳನ್ನು ಎಪಿಎಲ್‌ಗೆ ಪರಿವರ್ತಿಸಿಕೊಳ್ಳುತ್ತಿದ್ದಾರೆ. ಸದ್ಯ ದಂಡ ಸಂಗ್ರಹವನ್ನು ನಿಲ್ಲಿಸಲಾಗಿದೆ. ಮುಂದಿನ ದಿನಗಳಲ್ಲಿ ಕಾರ್ಡ್‌ ಪರಿವರ್ತಿಸಿಕೊಳ್ಳದಿರುವವರ ಮೇಲೆ ಕ್ರಮದ ಬಗ್ಗೆ ಯೋಚಿಸಲಾಗುವುದು.
-ಡಾ| ಮಂಜುನಾಥನ್‌, ಜಂಟಿ ನಿರ್ದೇಶಕರು, ಆಹಾರ, ನಾಗರಿಕ ಪೂರೈಕೆ ಇಲಾಖೆ

Advertisement
Advertisement

Udayavani is now on Telegram. Click here to join our channel and stay updated with the latest news.

Next