Advertisement

ದಕ್ಷಿಣ ಕನ್ನಡ: 68,952 ಕಡತಗಳ ವಿಲೇವಾರಿ: ಸಚಿವ ಸುನಿಲ್‌ ಕುಮಾರ್‌

12:39 AM Feb 27, 2022 | Team Udayavani |

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಫೆ. 19ರಿಂದ 28ರ ವರೆಗೆ ಹಮ್ಮಿಕೊಂಡಿರುವ ಕಡತ ವಿಲೇವಾರಿಯಲ್ಲಿ ಫೆ. 25ರ ವರೆಗೆ ಒಟ್ಟು 68,925ನ್ನು ವಿಲೇವಾರಿ ಮಾಡಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸುನಿಲ್‌ ಕುಮಾರ್‌ ಪತ್ರಿಕಾಗೋಷ್ಠಿ ಯಲ್ಲಿ ತಿಳಿಸಿದರು.

Advertisement

45 ಇಲಾಖೆಗಳಲ್ಲಿ ಒಟ್ಟು 85,384 ಕಡತಗಳು ವಿಲೇವಾರಿ ಬಾಕಿ ಇದ್ದವು. ಈವರೆಗೆ ಶೇ. 81ರಷ್ಟು ವಿಲೇವಾರಿ ಆಗಿವೆ. ಜತೆಗೆ ಪಿಂಚಣಿ, 94ಸಿ ಹಾಗೂ 94ಸಿಸಿ ಸಹಿತ ವಿವಿಧ ಸೌಲಭ್ಯಗಳ 1,700 ಹೊಸ ಅರ್ಜಿಗಳನ್ನೂ ವಿಲೇ ಮಾಡಲಾಗಿದೆ. ಫೆ. 29ರ ವರೆಗೆ ಈ ಪ್ರಕ್ರಿಯೆ ಮುಂದುವರಿಯಲಿದ್ದು ಬಳಿಕ ತಾಲೂಕು ಮಟ್ಟದಲ್ಲಿ ಮೇಳ ಆಯೋಜಿಸಲಾಗುವುದು ಎಂದರು.

ಪ್ರತಿಯೊಂದು ಕಡತಕ್ಕೂ ಜೀವ ಇದೆ. ಅದರ ಹಿಂದೆ ಒಂದು ಜೀವನ ಇದೆ. ಅದುದರಿಂದ ಯಾವುದೇ ಕಡತ ಇನ್ನು ಮುಂದೆ ವಿನಾ ಕಾರಣ ವಿಲೇವಾರಿಯಾಗದೆ ಉಳಿಯ ಬಾರದು ಮತ್ತು ಪ್ರತೀ ವರ್ಷ ಇಂತಹ ಕಡತ ಅಭಿ ಯಾನ ಹಮ್ಮಿಕೊಳ್ಳುವ ಸಂದರ್ಭ ಬರಬಾರದು ಎಂದರು.

ಸಂಸದ ನಳಿನ್‌ ಕುಮಾರ್‌ , ಶಾಸಕ ವೇದವ್ಯಾಸ ಕಾಮತ್‌, ಮೇಯರ್‌ ಪ್ರೇಮಾನಂದ ಶೆಟ್ಟಿ, ಜಿಲ್ಲಾಧಿಕಾರಿ ಡಾ| ಕೆ.ವಿ. ರಾಜೇಂದ್ರ ಉಪಸ್ಥಿತರಿದ್ದರು.

ಮಂಗಳೂರಿನಲ್ಲಿ 400 ಕೆ.ವಿ. ಸಬ್‌ಸ್ಟೇಶನ್‌
ದ.ಕ. ಜಿಲ್ಲೆಯಲ್ಲಿ ವಿದ್ಯುತ್‌ಗೆ ಬೇಡಿಕೆಗಳು ಹೆಚ್ಚುತ್ತಿದ್ದು ಮಂಗಳೂರಿನಲ್ಲಿ 400 ಕೆ.ವಿ. ವಿದ್ಯುತ್‌ ಸಬ್‌ಸ್ಟೇಶನ್‌ ಸ್ಥಾಪಿಸಲಾಗುವುದು. ಮೂರು ಕಡೆ ಜಾಗ ಪರಿಶೀಲಿಸಿದ್ದು ಜಾಗ ಅಂತಿಮಗೊಳಿಸಿ ಶೀಘ್ರ ನಿರ್ಮಾಣ ಕಾರ್ಯ ಆರಂಭಿಸಲಾಗುವುದು. ಜಿಲ್ಲೆಯಲ್ಲಿ ಈವರೆಗೆ 400 ಕೆ.ವಿ. ಸಾಮರ್ಥ್ಯದ ಸಬ್‌ಸ್ಟೇಶನ್‌ ಇರಲಿಲ್ಲ ಎಂದು ಸಚಿವ ಸುನಿಲ್‌ ಕುಮಾರ್‌ ತಿಳಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next