ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸೋಮವಾರ 12 ಮಂದಿಗೆ ಕೋವಿಡ್ ದೃಢಪಟ್ಟಿದೆ. ಸೋಂಕು ಪೀಡಿತರ ಪೈಕಿ 11 ಮಂದಿ ಕೊಲ್ಲಿ ರಾಷ್ಟ್ರಗಳಿಂದ ಆಗಮಿಸಿದವರು. ಕತಾರ್‌ನಿಂದ ಜೂ. 19ರಂದು ಆಗಮಿಸಿದ್ದ 64 ವರ್ಷದ ವ್ಯಕ್ತಿ, 65 ವರ್ಷದ ಮಹಿಳೆ, ಕುವೈಟ್‌ನಿಂದ ಜೂ. 17ರಂದು ಆಗಮಿಸಿದ್ದ 42 ವರ್ಷದ ವ್ಯಕ್ತಿ, 25 ವರ್ಷದ ಯುವಕ, 23 ವರ್ಷದ ಯುವಕ, 33 ವರ್ಷದ ವ್ಯಕ್ತಿ, 45 ವರ್ಷದ ವ್ಯಕ್ತಿ, 41 ವರ್ಷದ ವ್ಯಕ್ತಿ, ಮಸ್ಕತ್‌ನಿಂದ ಜೂ. 17ರಂದು ಆಗಮಿಸಿದ್ದ 37 ವರ್ಷದ ವ್ಯಕ್ತಿ, ಸೌದಿ ಅರೇಬಿಯಾದಿಂದ ಜೂ. 15ರಂದು ಆಗಮಿಸಿದ್ದ 37 ವರ್ಷದ ವ್ಯಕ್ತಿ, ಶಾರ್ಜಾದಿಂದ ಜೂ. 16ರಂದು ಆಗಮಿಸಿದ್ದ 44 ವರ್ಷದ ವ್ಯಕ್ತಿಯನ್ನು ಸೋಂಕು ಬಾಧಿಸಿದೆ. ಇನ್ನೋರ್ವ ಬಾಧಿತ 27 ವರ್ಷದ ವ್ಯಕ್ತಿ ಮಂಗಳೂರು ನಿವಾಸಿಯಾಗಿದ್ದು, ಇನ್‌ಫ್ಲೂಯೆನಾl ಲೈಕ್ ಇಲ್‌ನೆಸ್ (ಐಎಲ್‌ಐ)ಯಿಂದ ಬಳಲುತ್ತಿದ್ದ ಪ್ರಕರಣವಾಗಿದೆ.
12 ಮಂದಿ ಬಿಡುಗಡೆ ವೆನ್ಲಾಕ್ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 12 ಮಂದಿ ಗುಣಮುಖರಾಗಿ ಸೋಮವಾರ ಬಿಡುಗಡೆಗೊಂಡಿದ್ದಾರೆ. 70 ವರ್ಷದ ವೃದ್ಧ ಮಧುಮೇಹ ಹಾಗೂ ನ್ಯೂಮೋನಿಯಾದಿಂದ ಬಳಲುತ್ತಿದ್ದು, ಐಸಿಯುವಿನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ. 56 ವರ್ಷದ ವ್ಯಕ್ತಿ ಅಧಿಕ ರಕ್ತದೊತ್ತಡ, ಮೇದೋಜೀರಕ ಗ್ರಂಥಿಯ ಉರಿಯೂತದಿಂದ ಬಳಲುತ್ತಿದ್ದು, ಅವರಿಗೂ ಐಸಿಯುವಿನಲ್ಲಿ ಚಿಕಿತ್ಸೆ ಮುಂದುವರಿಸಲಾಗಿದೆ.
35 ವರದಿ ಬಾಕಿ
ವೆನ್ಲಾಕ್ ನಲ್ಲಿ ಸೋಮವಾರ ಸ್ವೀಕರಿಸಲಾದ ಒಟ್ಟು 269 ಮಂದಿಯ ಗಂಟಲ ದ್ರವ ಮಾದರಿ ಪರೀಕ್ಷಾ ವರದಿ ಪೈಕಿ 257 ನೆಗೆಟಿವ್, 12 ಪಾಸಿಟಿವ್ ಆಗಿವೆ. ಇನ್ನು 35 ಮಂದಿಯ ವರದಿ ಬರಲು ಬಾಕಿ ಇದ್ದು, ಹೊಸದಾಗಿ 76 ಮಂದಿಯ ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಲಾಗಿದೆ.