Advertisement

ದ.ಕ. ಜಿಲ್ಲೆ: 7 ಸಾವು, 217 ಮಂದಿಗೆ ಪಾಸಿಟಿವ್‌

11:10 PM Sep 28, 2020 | mahesh |

ಮಂಗಳೂರು: ಸಮಾನ ಕೆಲಸಕ್ಕೆ ಸಮಾನ ವೇತನ ಸಹಿತ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಎನ್‌ಎಚ್‌ಎಂ ನೌಕರರು ಹಮ್ಮಿಕೊಂಡಿರುವ ಮುಷ್ಕರ ಸೋಮವಾರ 7ನೇ ದಿನಕ್ಕೆ ಕಾಲಿಟ್ಟಿದೆ. ಕಳೆದೈದು ದಿನಗಳಿಂದ ಕೆಲಸಕ್ಕೆ ಹಾಜರಾಗದೆ ಮನೆ ಯಲ್ಲೇ ಕುಳಿತು ಎನ್‌ಎಚ್‌ಎಂ ನೌಕರರು ಪ್ರತಿಭಟನೆ ನಡೆಸುತ್ತಿದ್ದಾರೆ. ಎನ್‌ಎಚ್‌ಎಂ ನೌಕರರ ಪ್ರತಿಭಟನೆ ಹಿನ್ನೆಲೆಯಲ್ಲಿ ಜಿಲ್ಲಾ ಮಟ್ಟದ ಕೊರೊನಾ ದೈನಂದಿನ ವರದಿ ಲಭ್ಯವಾಗಿಲ್ಲ. ಆದರೆ ರಾಜ್ಯ ಮಟ್ಟದ ವರದಿ ಪ್ರಕಾರ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸೋಮವಾರ 217 ಮಂದಿಗೆ ಕೊರೊನಾ ದೃಢಪಟ್ಟಿದ್ದು, 7 ಮಂದಿ ಸಾವನ್ನಪ್ಪಿದ್ದಾರೆ. 190 ಮಂದಿ ಗುಣಮುಖರಾಗಿ ವಿವಿಧ ಆಸ್ಪತ್ರೆಗಳಿಂದ ಬಿಡುಗಡೆಗೊಂಡಿದ್ದಾರೆ.

Advertisement

ಗ್ರಾ.ಪಂ. ವ್ಯಾಪ್ತಿಯಲ್ಲಿ ಪರೀಕ್ಷೆ
ದ.ಕ. ಜಿ.ಪಂ. ಸೋಮವಾರದಿಂದ ಪ್ರತಿ ಗ್ರಾ.ಪಂ. ಮಟ್ಟದಲ್ಲಿ ಕೊರೊನಾ ಪರೀಕ್ಷೆ ಹಮ್ಮಿ ಕೊಂಡಿದ್ದು, ಈ ಪರೀಕ್ಷೆಯಲ್ಲಿ ಜಿಲ್ಲೆಯಲ್ಲಿ 199 ಮಂದಿಗೆ ಕೋವಿಡ್ ದೃಢಪಟ್ಟಿದೆ. ಸೋಮವಾರ ವಿವಿಧ ಗ್ರಾ.ಪಂ.ಗಳ ವ್ಯಾಪ್ತಿ, ವೆನ್ಲಾಕ್ ಆಸ್ಪತ್ರೆ ಮತ್ತು ಖಾಸಗಿ ಲ್ಯಾಬ್‌ಗಳಲ್ಲಿ ಒಟ್ಟು 4,262 ಮಂದಿ ಪರೀಕ್ಷೆ ಮಾಡಿಸಿಕೊಂಡಿದ್ದರು. ಈ ಪೈಕಿ ಮಂಗಳೂರು ತಾಲೂಕಿನ ಗ್ರಾ.ಪಂ. ವ್ಯಾಪ್ತಿಯಲ್ಲಿ 1,095 ಮಂದಿಗೆ ರ್ಯಾಟ್‌ (92 ದೃಢ), 309 ಮಂದಿಗೆ ಆರ್‌ಟಿಪಿಸಿಆರ್‌ ಪರೀಕ್ಷೆ ಮಾಡಲಾಗಿದೆ. ಸುಳ್ಯದಲ್ಲಿ 354 ಮಂದಿ ರ್ಯಾಟ್‌ (20 ದೃಢ), 28 ಆರ್‌ಟಿಪಿಸಿಆರ್‌, ಬೆಳ್ತಂಗಡಿಯಲ್ಲಿ 233 ರ್ಯಾಟ್‌ (36 ದೃಢ), 195 ಆರ್‌ಟಿಪಿಸಿಆರ್‌, ಪುತ್ತೂರಿನಲ್ಲಿ 315 ರ್ಯಾಟ್‌ (33 ದೃಢ), 113 ಆರ್‌ಟಿಪಿಸಿಆರ್‌, ಬಂಟ್ವಾಳದಲ್ಲಿ 73 ರ್ಯಾಟ್‌ (15 ದೃಢ), 196 ಆರ್‌ಟಿಪಿಸಿಆರ್‌ ಪರೀಕ್ಷೆ ನಡೆಸಲಾಗಿದೆ.

ಇದಲ್ಲದೆ ವೆನ್ಲಾಕ್ ಆಸ್ಪತ್ರೆಯಲ್ಲಿ 17 ರ್ಯಾಟ್‌ (3 ದೃಢ), 50 ಆರ್‌ಟಿಪಿಸಿಆರ್‌, ಎಲ್‌ಜಿಎಚ್‌ಗಳಲ್ಲಿ 31 ರ್ಯಾಟ್‌ (0 ದೃಢ) ಪರೀಕ್ಷೆ ನಡೆಸಲಾಗಿದೆ. ಅಲ್ಲದೆ ಕೆಲವು ಖಾಸಗಿ ಲ್ಯಾಬ್‌ಗಳಲ್ಲಿಯೂ ಪರೀಕ್ಷೆ ಮಾಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next