Advertisement

ಹೈನುರಾಸು ನಿರ್ವಹಣೆ ಕಾರ್ಯಾಗಾರ

02:04 PM Dec 18, 2017 | |

ಕಡಬ: ಹೈನುಗಾರಿಕೆ ಲಾಭದಾಯಕವಲ್ಲ ಎನ್ನುವುದು ತಪ್ಪು ಅಭಿಪ್ರಾಯ. ವೈಜ್ಞಾನಿಕ ರೀತಿಯ ವ್ಯವಸ್ಥಿತ ಹೈನು
ಗಾರಿಕೆಯಿಂದ ಹೆಚ್ಚಿನ ಲಾಭ ಪಡೆಯಬಹುದು ಎಂದು ದ.ಕ. ಸಹಕಾರ ಹಾಲು ಉತ್ಪಾದಕರ ಒಕ್ಕೂಟದ ನಿರ್ದೇಶಕ ಕೆ.
ಸೀತಾರಾಮ ರೈ ಸವಣೂರು ಅವರು ಅಭಿಪ್ರಾಯಪಟ್ಟರು.

Advertisement

ರವಿವಾರ ಕಡಬದ ಸರಸ್ವತೀ ವಿದ್ಯಾಲಯದ ಸಭಾಂಗಣದಲ್ಲಿ ಕೆಎಂಎಫ್‌ ತರಬೇತಿ ಕೇಂದ್ರ ಮೈಸೂರು, ದ.ಕ. ಸಹಕಾರ ಹಾಲು ಉತ್ಪಾದಕರ ಒಕ್ಕೂಟ ಮಂಗಳೂರು, ಸರಸ್ವತೀ ವಿದ್ಯಾಲಯ ಗ್ರಾಮ ವಿಕಾಸ ಸಮಿತಿ ಕೋಡಿಂಬಾಳ ಹಾಗೂ ಕಡಬ ಹಾಲು ಉತ್ಪಾದಕರ ಸಹಕಾರ ಸಂಘದ ಸಂಯುಕ್ತ ಆಶ್ರಯದಲ್ಲಿ ಜರಗಿದ ಹೈನುರಾಸು ನಿರ್ವಹಣೆ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

ಈ ಆಧುನಿಕ ಯುಗದಲ್ಲಿ ಹೈನುಗಾರಿಕೆ ಒಂದು ಉತ್ತಮ ಉದ್ಯೋಗ. ಆಧುನಿಕ ರೀತಿಯಲ್ಲಿ ಹೈನುಗಾರಿಕೆ ನಡೆಸುವುದಕ್ಕೆ ಸರಕಾರವೂ ಎಲ್ಲ ರೀತಿಯ ಸಹಕಾರ ನೀಡುತ್ತದೆ. ಹಾಲು ಒಕ್ಕೂಟದ ವತಿಯಿಂದಲೂ ಮಾರ್ಗದರ್ಶನ ಹಾಗೂ ನೆರವು ಸಿಗುತ್ತದೆ. ಆದರೆ ನಾವು ಮಾಡುವ ಕೆಲಸದ ಮೇಲೆ ಶ್ರದ್ಧೆ, ಪ್ರೀತಿಯೊಂದಿಗೆ ಪ್ರಾಮಾಣಿಕ ದುಡಿಮೆ ಮಾಡಿದಾಗ ಮಾತ್ರ ನಾವು ಯಶಸ್ಸು ಸಾಧಿಸಬಹುದು ಎಂದು ಹೇಳಿದರು. ಕಡಬ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಜಯಚಂದ್ರ ರೈ ಕುಂಟೋಡಿ ಅಧ್ಯಕ್ಷತೆ ವಹಿಸಿದ್ದರು.

ನೆರವು ವಿತರಣೆ
ಅತಿಥಿಗಳಾಗಿ ಮೈಸೂರು ಕೆಎಂಎಫ್‌ ತರಬೇತಿ ಕೇಂದ್ರದ ಅಪರ ನಿರ್ದೇಶಕ ಡಾ| ಕೆ.ಪಿ. ಶಿವಶಂಕರ್‌, ಉಪನ್ಯಾಸಕ ಎಚ್‌.ಎಂ. ಮಹಾದೇವ ಸ್ವಾಮಿ, ದ.ಕ. ಹಾಲು ಒಕ್ಕೂಟದ ಉಪ ವ್ಯವಸ್ಥಾಪಕ ಡಾ| ರಾಮಕೃಷ್ಣ ಭಟ್‌, ವಿಸ್ತರಣಾಧಿಕಾರಿ ಮಂಜುನಾಥ್‌, ಕಡಬ ಹಾ.ಉ.ಸ. ಸಂಘದ ಕಾರ್ಯದರ್ಶಿ ಕುಂಞಣ್ಣ ಕುದ್ರಡ್ಕ ಉಪಸ್ಥಿತರಿದ್ದರು. ರೈತ ಕಲ್ಯಾಣ ಟ್ರಸ್ಟ್‌ನ ವತಿಯಿಂದ ಮರ್ದಾಳ ಸಂಘದ ಸದಸ್ಯ ಬೆಳಿಯಪ್ಪ ಗೌಡ ಅವರಿಗೆ 15 ಸಾವಿರ ರೂ. ಗಳ ನೆರವು ವಿತರಿಸಲಾಯಿತು.

ಸರಸ್ವತೀ ವಿದ್ಯಾಲಯದ ಕೋಡಿಂಬಾಳ ಗ್ರಾಮ ವಿಕಾಸ ಸಮಿತಿಯ ಸಂಯೋಜಕ ಮಂಜುನಾಥ ಶೆಟ್ಟಿ ಸ್ವಾಗತಿಸಿ, ಸರಸ್ವತೀ ವಿದ್ಯಾಲಯ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕ ಮಾಧವ ಕೋಲ್ಪೆ ವಂದಿಸಿ ದರು. ಶಿಕ್ಷಕ ವಸಂತ ಕರ್‌ಂಬೋಡಿ ನಿರೂಪಿಸಿದರು.

Advertisement

ಹೈನುಗಾರಿಕೆ ಮಹತ್ವ ತಿಳಿಸಿ
ಸರಸ್ವತೀ ವಿದ್ಯಾಲಯದ ಸಂಚಾಲಕ ಮಂಕುಡೆ ವೆಂಕಟ್ರಮಣ ರಾವ್‌ ಮಾತನಾಡಿ, ಶಿಕ್ಷಣದ ಜತೆಗೆ ವಿದ್ಯಾರ್ಥಿಗಳಿಗೆ ಹೈನುಗಾರಿಕೆಯ ಮಹತ್ವವನ್ನು ತಿಳಿಸಬೇಕು. ಹಾಗೆಯೇ ಔಷಧೀಯ ಗುಣಗಳನ್ನು ಹೊಂದಿರುವ ಸ್ವದೇಶಿ
ತಳಿಯ ದನಗಳನ್ನು ಸಾಕುವಂತೆ ಪ್ರೇರೇಪಿಸಬೇಕು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next