Advertisement

ಬೆಂಗಳೂರಿನಲ್ಲಿ ನಿತ್ಯದ ಕೋವಿಡ್ ಕೇಸ್ ಸಾವಿರಕ್ಕೆ ಇಳಿಕೆ ;ಇಂದು 27 ಸಾವು

07:53 PM Feb 13, 2022 | Team Udayavani |

ಬೆಂಗಳೂರು : ರಾಜ್ಯದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಗಣನೀಯವಾಗಿ ಇಳಿಕೆಯಾಗುತ್ತಿದ್ದು, ಭಾನುವಾರ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ದಿನನಿತ್ಯದ ಹೊಸ ಪ್ರಕರಣಗಳ ಸಂಖ್ಯೆ ಇಂದು 1 ಸಾವಿರಕ್ಕೆ ಇಳಿಕೆಯಾಗಿದೆ.

Advertisement

ರಾಜ್ಯದಲ್ಲಿ ಇಂದು ಒಟ್ಟು 2,372 ಹೊಸ ಪ್ರಕರಣಗಳು ದೃಢಪಟ್ಟಿವೆ. ಬೆಂಗಳೂರಿನಲ್ಲಿ 1,059 ಹೊಸ ಪ್ರಕರಣಗಳು ವರದಿಯಾಗಿದೆ. ರಾಜ್ಯದಲ್ಲಿ ಪಾಸಿಟಿವಿಟಿ ದರ 2.31% ಕ್ಕೆ ಇಳಿದಿದ್ದು, ಬೆಂಗಳೂರಿನಲ್ಲಿ 2.09% ಆಗಿದೆ. ಇಂದು 5,395 ಸೋಂಕಿತರು ಡಿಸ್ಚಾರ್ಜ್‌ ಆಗಿದ್ದಾರೆ.

ರಾಜ್ಯದಲ್ಲಿ 35,697 ಸಕ್ರಿಯ ಪ್ರಕರಣಗಲಿದ್ದು, ಬೆಂಗಳೂರಿನಲ್ಲಿ 14 ಸಾವಿರ ಪ್ರಕರಣಗಳಿವೆ.ಇಂದು ರಾಜ್ಯದಲ್ಲಿ 27 ಮಂದಿ ಸಾವನ್ನಪ್ಪಿದ್ದು, ಆ ಪೈಕಿ 7 ಸೋಂಕಿತರ ಸಾವುಗಳು ಬೆಂಗಳೂರಿನಲ್ಲಿ ವರದಿಯಾಗಿದೆ. ಇಂದು ರಾಜ್ಯದಲ್ಲಿ ಒಟ್ಟು 1,02,279 ಮಂದಿಗೆ ಪರೀಕ್ಷೆಗಳನ್ನು ನಡೆಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next