Advertisement

RRR, Kashmir Filesಗೆ ದಾದಾಸಾಹೇಬ್ ಅಂತಾರಾಷ್ಟ್ರೀಯ ಪ್ರಶಸ್ತಿ,ರಿಷಬ್ ಅತ್ಯುತ್ತಮ ಭರವಸೆ ನಟ

12:14 PM Feb 21, 2023 | Team Udayavani |

ನವದೆಹಲಿ: ಖ್ಯಾತ ನಿರ್ದೇಶಕ ಎಸ್.ಎಸ್.ರಾಜಮೌಳಿಯ “ಆರ್ ಆರ್ ಆರ್” ಹಾಗೂ ವಿವೇಕ್ ಅಗ್ನಿಹೋತ್ರಿಯ “ದಿ ಕಾಶ್ಮೀರ್ ಫೈಲ್ಸ್” ಪ್ರತಿಷ್ಠಿತ ದಾದಾಸಾಹೇಬ್ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಪ್ರಶಸ್ತಿಗೆ ಭಾಜನವಾಗಿದೆ.

Advertisement

ಇದನ್ನೂ ಓದಿ:ಸಿ.ಟಿ.ರವಿ ಮನೆಗೆ ಜೆ.ಪಿ.ನಡ್ಡಾ ಭೇಟಿ; ಲಿಂಗಾಯತ ಮಠಾಧೀಶರಿಂದ ಸನ್ಮಾನ

RRR ವರ್ಷದ ಅಂತಾರಾಷ್ಟ್ರೀಯ ಸಿನಿಮಾ ಪ್ರಶಸ್ತಿ ಹಾಗೂ ದಿ ಕಾಶ್ಮೀರ್ ಫೈಲ್ಸ್ ಅತ್ಯುತ್ತಮ ಸಿನಿಮಾ ಪ್ರಶಸ್ತಿಯನ್ನು ಪಡೆದಿರುವುದಾಗಿ ವರದಿ ತಿಳಿಸಿದೆ. ಪ್ರತಿಷ್ಠಿತ ದಾದಾಸಾಹೇಬ್ ಅಂತಾರಾಷ್ಟ್ರೀಯ ಪ್ರಶಸ್ತಿಯ ಸುದ್ದಿ ಕುರಿತು  ನಿರ್ಮಾಪಕ ವಿವೇಕ್ ಅಗ್ನಿಹೋತ್ರಿ ಫೋಟೋ ಮತ್ತು ಪ್ರಶಸ್ತಿ ವಿತರಣಾ ಸಮಾರಂಭದ ವಿಡಿಯೋವನ್ನು ಟ್ವೀಟರ್ ನಲ್ಲಿ ಶೇರ್ ಮಾಡಿ ಸಂತಸ ಹಂಚಿಕೊಂಡಿದ್ದಾರೆ.

“ ಈ ಪ್ರಶಸ್ತಿಯನ್ನು ಭಯೋತ್ಪಾದನೆಯಲ್ಲಿ ಸಂತ್ರಸ್ತರಾದವರಿಗೆ ಹಾಗೂ ನಿಮ್ಮೆಲ್ಲರ ಆಶೀರ್ವಾದಕ್ಕಾಗಿ ಭಾರತದ ಎಲ್ಲಾ ಜನರಿಗೆ ಸಮರ್ಪಿಸುವುದಾಗಿ” ಅಗ್ನಿಹೋತ್ರಿ ಟ್ವೀಟ್ ಮಾಡಿದ್ದಾರೆ.

Advertisement

ಸೋಮವಾರ ಮುಂಬೈನ ಪಂಚತಾರಾ ಹೋಟೆಲ್ ನಲ್ಲಿ ನಡೆದ ದಾದಾಸಾಹೇಬ್ ಅಂತಾರಾಷ್ಟ್ರೀಯ ಸಿನಿಮಾ ಪ್ರಶಸ್ತಿ ವಿತರಣಾ ಸಮಾರಂಭ ನಡೆದಿದ್ದು, ಸಂಜಯ್ ಲೀಲಾ ಬನ್ಸಾಲಿ ಅವರ “ಗಂಗೂಬಾಯಿ ಕಾಥಿಯಾವಾಡಿ” ಸಿನಿಮಾದಲ್ಲಿ ಗಂಗೂಬಾಯಿ ಪಾತ್ರಕ್ಕಾಗಿ ಅಲಿಯಾ ಭಟ್ ಅತ್ಯುತ್ತಮ ನಟಿ ಪ್ರಶಸ್ತಿಯನ್ನು ಪಡೆದರು. ಬ್ರಹ್ಮಾಸ್ತ್ರ ಚಿತ್ರದಲ್ಲಿನ ನಟನೆಗಾಗಿ ರಣಬೀರ್ ಕಪೂರ್ ಅತ್ಯುತ್ತಮ ನಟ ಪ್ರಶಸ್ತಿಗೆ ಭಾಜನರಾಗಿದ್ದು, ಕಾಂತಾರಾ ಸಿನಿಮಾ ಖ್ಯಾತಿಯ ರಿಷಬ್ ಶೆಟ್ಟಿ ಅವರನ್ನು “ಅತ್ಯುತ್ತಮ ಭರವಸೆ ನಟ”ರಾಗಿ ಆಯ್ಕೆಯಾಗಿದ್ದಾರೆ.

ಪ್ರಶಸ್ತಿ ಪಡೆದುಕೊಂಡವರ ವಿವರ:

ಅತ್ಯುತ್ತಮ ನಿರ್ದೇಶಕ- ಆರ್.ಬಾಲ್ಕಿ(ಚುಪ್-ರಿವೇಂಜ್ ಆಫ್ ದಿ ಆರ್ಟಿಸ್ಟ್)

ಅತ್ಯುತ್ತಮ ವೆಬ್ ಸರಣಿ-ರುದ್ರ- ದಿ ಎಡ್ಜ್ ಆಫ್ ಡಾರ್ಕ್ ನೆಸ್

ವರ್ಷದ ಟಿವಿ ಸೀರೀಸ್-ಅನುಪಮಾ

ಕ್ರಿಟಿಕ್ಸ್ ಅತ್ಯುತ್ತಮ ನಟ-ವರುಣ್ ಧವನ್ (ಭೇಡಿಯಾ)

ವರ್ಷದ ಅತ್ಯುತ್ತಮ ಪ್ರತಿಭಾವಂತ ನಟ-ಅನುಪಮ್ ಖೇರ್ (ದಿ ಕಾಶ್ಮೀರ್ ಫೈಲ್ಸ್)

Advertisement

Udayavani is now on Telegram. Click here to join our channel and stay updated with the latest news.

Next