Advertisement

ದಾದರ್‌ ಜಿಎಸ್‌ಬಿಎಸ್‌ ಮೆಡಿಕಲ್‌ ಟ್ರಸ್ಟ್‌ ಅಂಗರಕ್ಷಕ್‌ ದಿನಾಚರಣೆ

04:51 PM Apr 27, 2019 | Vishnu Das |

ಮುಂಬಯಿ: ಜಿಎಸ್‌ಬಿಎಸ್‌ ಮೆಡಿಕಲ್‌ ಟ್ರಸ್ಟ್‌ ವತಿಯಿಂದ ದಾದರ್‌ ಪೂರ್ವದ ಶಿಲ್ಪಾ ಅಪಾರ್ಟ್‌ಮೆಂಟ್‌ನಲ್ಲಿರುವ ಟ್ರಸ್ಟ್‌ನ ಮೆಡಿಕಲ್‌ ಸೆಂಟರ್‌ನಲ್ಲಿ ಅಂಗರಕ್ಷಕ್‌ ಎಂಬ ವಿಶೇಷ ವಿಭಾಗವನ್ನು ಪ್ರಾರಂಭಿಸಲಾಗಿದ್ದು, ಇದರ ದ್ವಿತೀಯ ವಾರ್ಷಿಕ ದಿನಾಚರಣೆಯು ಇತ್ತೀಚೆಗೆ ನಡೆಯಿತು.

Advertisement

ತಂಬಾಕು ಸೇವನೆಯಿಂದ ಬಳಲುತ್ತಿರುವ ರೋಗಿಗಳಿಗೆ ಚಿಕಿತ್ಸೆ ಮತ್ತು ಜಾಗೃತಿ ಮೂಡಿಸುವ ಉದ್ದೇಶದಿಂದ ಈ ವಿಶೇಷ ವಿಭಾಗವನ್ನು ಪ್ರಾರಂಭಿಸಲಾಗಿದೆ. ಕಳೆದ ಎರಡು ವರ್ಷಗಳಿಂದ ಈ ವಿಭಾಗವು ಉತ್ತಮ ಸೇವೆಯನ್ನು ಮಾಡುತ್ತಿದ್ದು, ಪ್ರಸ್ತುತ ರೋಗಿಗಳು ಹಾಗೂ ಗುಣಮುಖರಾದ ರೋಗಿ ಗಳಿಗಾಗಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಕಾರ್ಯಕ್ರಮದಲ್ಲಿ ತಂಬಾಕು ಸೇವನೆ ಯಿಂದ ವಿವಿಧ ಕಾಯಿಲೆಗಳಿಗೆ ತುತ್ತಾಗಿ ಗುಣಮುಖರಾದ ರೋಗಿ ಗಳು ಹಾಗೂ ಪ್ರಸ್ತುತ ಚಿಕಿತ್ಸೆ
ಪಡೆಯುತ್ತಿರುವ ರೋಗಿಗಳು ತಮ್ಮ ಅಭಿಪ್ರಾಯಗಳನ್ನು ಹಂಚಿ
ಕೊಂಡರು. ತಂಬಾಕು ಸೇವಿಸಿ ಕಾಯಿಲೆಗೆ ತುತ್ತಾಗಿ ಗುಣಮುಖ
ರಾದ ನಿತಿನ್‌ ರಾವುತ್‌ ಮತ್ತು ಪ್ರೀತಂ ದೋಕೆ ತಂಬಾಕು ಸೇವಿಸಿ ತಾವು ಪಟ್ಟ ಪಾಡನ್ನು ವಿವರಿಸಿ ಇದರ ಬಗ್ಗೆ ಜಾಗೃತಿ ಮೂಡಿಸಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದ ಸಕಾಳ್‌ಪತ್ರಿಕೆಯ ಪತ್ರಕರ್ತ ಸಂಜಯ್‌ ಶಿಂಧೆ ಅವರು ಮಾತನಾಡಿ, ಇಂದಿನ ಕಂಪ್ಯೂಟರೀಕೃತ ಯುಗದಲ್ಲಿ ಯುವ ಪೀಳಿಗೆ ಹೆಚ್ಚಾಗಿ ತಂಬಾಕು ಸೇವನೆಗೆ ಬಲಿಯಾಗುತ್ತಿದ್ದಾರೆ. ಹೆಚ್ಚಾಗಿ ಆತ್ಯಾಧುನಿಕ ಕಾರ್ಪೋರೇಟ್‌ ಕಂಪೆನಿಗಳ ಹೆಚ್ಚಿನ ಉದ್ಯೋಗಿಗಳು ತಂಬಾಕು ಸೇವನೆಯಿಂದ ಬಳಲುತ್ತಿದ್ದಾರೆ. ಅಂಥವರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಇಂತಹ ಕಾರ್ಯಕ್ರಮಗಳು ಪೂರಕವಾಗಿದೆ. ಸಂಸ್ಥೆಯು ಯುವಪೀಳಿಗೆಯಲ್ಲಿ ಇದರ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವಂತೆ ಮಾಡಲು ಮುಂದಾಗಬೇಕು ಎಂದು ಮನವಿ ಮಾಡಿದರು.

ಸಂಸ್ಥೆಯ ಗೀತಾ ಆರ್‌. ಪೈ ಅವರು ಸ್ವಾಗತಿಸಿ, ಕಾರ್ಯಕ್ರಮದ ಉದ್ದೇಶವನ್ನು ವಿವರಿಸಿದರು. ಭಾಗ್ಯಶ್ರೀ ಬಿಲ್ಲಾರೆ ಅವರು ಕಾರ್ಯಕ್ರಮವನ್ನು ಆಯೋಜಿಸಿದ್ದರು. ಡಾ| ಮೀನಾಕ್ಷೀ ದೇಸಾಯಿ ಸಂಸ್ಥೆಯ ಮುಂದಿನ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು. ಶ್ರುತಿ ಮಡ್ಗಾಂವ್ಕರ್‌ ಅವರು ಮಾತನಾಡಿ, ತಂಬಾಕು ಸೇವನೆಗೆ ಬಲಿಯಾದವರಿಗೆ ಧ್ಯಾನದ ಅಗತ್ಯ ವಿದೆ. ಈ ನಿಟ್ಟಿನಲ್ಲಿ ಸಂಸ್ಥೆಯು ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಮುಂದಾ ಗಬೇಕಿದೆ ಎಂದರು. ಡಾ| ದಿಲೀಪ್‌ ಪೈ ವಂದಿಸಿದರು. ಅಂಗರಕ್ಷಕ ವಿಭಾಗದ ಪದಾಧಿಕಾರಿಗಳು, ಸದಸ್ಯರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next