Advertisement

ಅರುಣ್‌ ಈಸ್‌ ಬ್ಯಾಕ್‌! ದಾದಾ ಜೊತೆಗೆ ಚಿಕ್ಕ ಹೆಜ್ಜೆ

02:17 PM Jul 20, 2017 | Team Udayavani |

“ಗೊಂಬೆಗಳ ಲವ್‌’ನ ಸಂತು ಮತ್ತೆ ಹೊಸ ಚಿತ್ರದೊಂದಿಗೆ ಬಂದಿದ್ದಾರೆ. ಅವರು ಬರುವುದಷ್ಟೇ ಅಲ್ಲ, ಆ ಚಿತ್ರದ ನಾಯಕ ಅರುಣ್‌ರನ್ನೂ “ದಾದಾ ಈಸ್‌ ಬ್ಯಾಕ್‌’ ಚಿತ್ರದ ಮೂಲಕ ವಾಪಸ್ಸು ಕರೆತಂದಿದ್ದಾರೆ. ಈ ಚಿತ್ರ ನಾಳೆ 160ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುವುದಕ್ಕೆ ಸಜ್ಜಾಗಿದೆ.

Advertisement

“ಗೊಂಬೆಗಳ ಲವ್‌’ಗೆ ಹೋಲಿಸಿದರೆ, ಇದು ತದ್ವಿರುದ್ಧವಾದ ಸಿನಿಮಾ ಎನ್ನುತ್ತಾರೆ ಅರುಣ್‌. “ಇದೊಂದು ಪಕ್ಕಾ ಕಮರ್ಷಿಯಲ್‌ ಚಿತ್ರ. ಇಲ್ಲಿ ಗ್ಯಾಂಗ್‌ ವಾರ್‌ ಇದ್ದರೂ ಸಾಕಷ್ಟು ಮಾನವೀಯತೆ ಇರುವ ಸಿನಿಮಾ. ಚಿತ್ರದಲ್ಲಿ ಪಾರ್ಥಿಬನ್‌, ದಾದಾ ಅವರ ಪಾತ್ರ ಮಾಡುತ್ತಿದ್ದು, ಅವರ ಜೊತೆಗೆ ನಾನು ಮತ್ತು ಅಜಯ್‌ ರಾಜ್‌ ಸಹ ಪ್ರಮುಖ ಪಾತ್ರ ಮಾಡಿದ್ದೇವೆ. ಈ ಚಿತ್ರಕ್ಕೆ ನಾವು ಮೂವರೂ ನಾಯಕರೇ. ಪಾರ್ಥಿಬನ್‌ ಅವರು ಚಿತ್ರದಲ್ಲಿ ದಾದಾ ಪಾತ್ರವನ್ನ ನಿರ್ವಹಿಸಿದರೆ, ನಾನು ಅವರ ಜೊತೆಗೆ ಇರುವ ಚಿಕ್ಕ ಎಂಬ ಪಾತ್ರ ನಿರ್ವಹಿಸಿದ್ದೇನೆ. ಪಾತ್ರ ಬಹಳ ಚೆನ್ನಾಗಿದೆ’ ಎನ್ನುತ್ತಾರೆ ಅರುಣ್‌. “ದಾದಾ ಈಸ್‌ ಬ್ಯಾಕ್‌’ನ ಕಥೆಯೇ ಹೈಲೈಟ್‌ ಎನ್ನುತ್ತಾರೆ ಅರುಣ್‌.

“ಚಿತ್ರದಲ್ಲಿ ತುಂಬಾ ಒಳ್ಳೆಯ ಕಥೆ ಇದೆ. ಇನ್ನು ಎಲ್ಲರಿಗೂ ಒಳ್ಳೆಯ ಪಾತ್ರಗಳಿವೆ. ಉದಯ್‌ಗೆ ಇದು ಕೊನೆಯ ಚಿತ್ರ. ಅವರು ಇಲ್ಲಿ ಡಬ್ಬಿಂಗ್‌ ಮಾಡುವುದಕ್ಕೆ ಸಾಧ್ಯವಾಗಲಿಲ್ಲ. ಅವರಲ್ಲದೆ ದತ್ತಣ್ಣ, ಸುಧಾರಾಣಿ, ಶ್ರಾವ್ಯ ಮುಂತಾದವರು ನಟಿಸಿದ್ದಾರೆ. ಗ್ಯಾಂಗ್‌ ವಾರ್‌ ಇದ್ದರೂ,ಎಮೋಷನಲ್‌ ಸ್ಪರ್ಶವಿರುವಂತಹ ಚಿತ್ರ ಇದು’ ಎನ್ನುತ್ತಾರೆ ಅರುಣ್‌. „

Advertisement

Udayavani is now on Telegram. Click here to join our channel and stay updated with the latest news.

Next