ಮುಂಬಯಿ: ಜಾಗತಿಕ ಷೇರುಮಾರುಕಟ್ಟೆಯಲ್ಲಿನ ನೆಗೆಟಿವ್ ಟ್ರೆಂಡ್ ಪರಿಣಾಮ ಸೋಮವಾರ (ಜನವರಿ 24) ಮುಂಬಯಿ ಷೇರುಪೇಟೆಯ ಸೆನ್ಸೆಕ್ಸ್ ಬರೋಬ್ಬರಿ 1,546 ಅಂಕಗಳಷ್ಟು ಕುಸಿತದೊಂದಿಗೆ ದಿನಾಂತ್ಯದ ವಹಿವಾಟು ಮುಕ್ತಾಯಗೊಂಡಿದೆ.
ಇದನ್ನೂ ಓದಿ:500 ರೂ. ವಿಷಯದಲ್ಲಿ ಜುಟ್ಟು ಹಿಡಿದು ಹೊಡೆದಾಡಿಕೊಂಡ ನರ್ಸ್ ಮತ್ತು ಆಶಾ ಕಾರ್ಯಕರ್ತೆ
ವಿದೇಶಿ ಬಂಡವಾಳದ ಹೊರಹರಿವು ಮುಂದುವರಿದ ಪರಿಣಾಮ ಷೇರುಪೇಟೆ ವಹಿವಾಟಿನ ಮೇಲೆ ಪರಿಣಾಮ ಬೀರಿದೆ. ಇಂದು ಬೆಳಗ್ಗೆಯಿಂದಲೇ ವಹಿವಾಟು ಆರಂಭಗೊಂಡಾಗಲೇ ಸೆನ್ಸೆಕ್ಸ್ ಇಳಿಕೆಯಾಗಿದ್ದು, ಮಧ್ಯಂತರದ ವೇಳೆ ಸೆನ್ಸೆಕ್ಸ್ 1,900ಕ್ಕೂ ಅಧಿಕ ಅಂಕಗಳಷ್ಟು ಪತನ ಕಂಡಿತ್ತು.
ಮುಂಬಯಿ ಷೇರುಪೇಟೆ ಸಂವೇದಿ ಸೂಚ್ಯಂಕ 1545.65 ಅಂಕಗಳಷ್ಟು ಕುಸಿತಗೊಂಡಿದ್ದು, 57,491.51 ಅಂಕಗಳಲ್ಲಿ ದಿನಾಂತ್ಯದ ವಹಿವಾಟು ಕೊನೆಗೊಂಡಿದೆ. ಅದೇ ರೀತಿ ಎನ್ ಎಸ್ ಇ ನಿಫ್ಟಿ 468.05 ಅಂಕ ಇಳಿಕೆಯಾಗಿದ್ದು, 17,149.10 ಅಂಕಗಳ ಮಟ್ಟ ತಲುಪಿದೆ.
ಬಜಾಜ್ ಫೈನಾನ್ಸ್ ಷೇರು ಅತೀ ಹೆಚ್ಚು ನಷ್ಟ ಕಂಡಿದ್ದು, ಇನ್ನುಳಿದಂತೆ ಟಾಟಾ ಸ್ಟೀಲ್, ಬಜಾಜ್ ಫೈನಾನ್ಸ್, ವಿಪ್ರೋ, ಟೆಕ್ ಮಹೀಂದ್ರ, ಟೈಟಾನ್, ರಿಲಯನ್ಸ್ ಇಂಡಸ್ಟ್ರೀಸ್ ಮತ್ತು ಎಚ್ ಸಿಎಲ್ ಟೆಕ್ ಷೇರುಗಳು ನಷ್ಟ ಕಂಡಿದೆ.