Advertisement
ಅಂಗನವಾಡಿಯಲ್ಲಿ 3 ವರ್ಷ ಮೇಲ್ಪಟ್ಟು ಮಕ್ಕಳನ್ನು ದಾಖಲಿಸಿಕೊಳ್ಳಲಾಗುತ್ತಿದ್ದು ಅದಕ್ಕಿಂತ ಚಿಕ್ಕ ವಯಸ್ಸಿನ ಮಕ್ಕಳ ಪಾಲನೆ ಸವಾಲಾಗಿತ್ತು. ಈ ನೆಲೆಯಲ್ಲಿ ನರೇಗಾ ದಿನಗೂಲಿ ಮಹಿಳೆಯರಮಕ್ಕಳ ಪಾಲನೆಗಾಗಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ರಾಜ್ಯದ ಗ್ರಾ.ಪಂ.ಗಳಲ್ಲಿ 4 ಸಾವಿರ ಶಿಶುಪಾಲನ ಕೇಂದ್ರಗಳಾದ “ಕೂಸಿನ ಮನೆ’ ಗಳನ್ನು ಪ್ರಾರಂಭಿಸಲು ಯೋಜಿಸಿದೆ.
Related Articles
Advertisement
ಬಯಲು ಸೀಮೆಯಲ್ಲಿ ಕೂಲಿಗಾಗಿ ಮಹಿಳೆಯರು ದೂರ ದೂರ ಸಂಚರಿಸುವುದರಿಂದ ಇದು ಪರಿಣಾಮಕಾರಿ. ಆದರೆ ಕರಾವಳಿಯಲ್ಲಿ ಸಾರ್ವಜನಿಕ ಕಾಮಗಾರಿಗಳು ಬಹಳ ಕಡಿಮೆ. ಇದ್ದರೂ ಮಹಿಳೆಯರು ದೂರ ಕೂಲಿಗೆ ಹೋಗಲಾರರು. ಪುಟ್ಟ ಮಕ್ಕಳಿರುವ ತಾಯಂದಿರು ಕೆಲಸಕ್ಕೆ ಹೋಗಲು ಮನೆಮಂದಿ ನಿರಾಕರಿಸುವುದೇ ಹೆಚ್ಚು. ಹೋದರೂ ಮಕ್ಕಳನ್ನು ಮನೆಯಲ್ಲಿರುವ ಹಿರಿಯರು ಪಾಲನೆ ಮಾಡುತ್ತಾರೆ. ಅಲ್ಲದೆ ಈ ಕೇಂದ್ರವನ್ನು ನರೇಗಾ ಕೂಲಿಕಾರರ ಮಕ್ಕಳಿಗೆ ಮಾತ್ರ ಸೀಮಿತಗೊಳಿಸಲಾಗಿದೆ. ಇತರ ಕೂಲಿ ಕಾರ್ಮಿಕರ ಮಕ್ಕಳಿಗೂ ಅವಕಾಶ ಸಿಕ್ಕಿದ್ದರೆ ಮಕ್ಕಳ ಸಂಖ್ಯೆ ಏರಿಕೆಯಾಗುವ ಸಾಧ್ಯತೆ ಇದೆ ಎನ್ನುತ್ತಾರೆ ಸಾರ್ವಜನಿಕರು.
ಉತ್ತಮ ವ್ಯವಸ್ಥೆ
ದ.ಕ.ದಲ್ಲಿ ಕೂಸಿನ ಮನೆಗೆ ಉತ್ತಮ ಸ್ಪಂದನೆ ತೋರುತ್ತಿದ್ದಾರೆ. ಶಿಶುಪಾಲನೆ ಕೇಂದ್ರದಲ್ಲಿ ಪ್ರತೀ ಮಗುವಿಗೆ ದಿನಕ್ಕೆ 12 ರೂ. ನಿಗದಿಪಡಿಸಲಾಗಿದೆ. ಶಿಶುಪಾಲನೆ ಕೇಂದ್ರದ ನಿರ್ವಹಣೆಗೆ 1 ಲಕ್ಷ ರೂ. ಅನುದಾನ ನೀಡಲಾಗಿದೆ. ಮಕ್ಕಳಿಗೆ ಪೌಷ್ಟಿಕಾಂಶವುಳ್ಳ ಆಹಾರವನ್ನು ತಯಾರಿಸಿ ನೀಡಲಾಗುತ್ತಿದೆ. – ಡಾ| ಆನಂದ್ ಕೆ., ಸಿಇಒ, ದ.ಕ.ಜಿ.ಪಂ.
ಚೈತ್ರೇಶ್ ಇಳಂತಿಲ