Advertisement

Kunigal: ಜನರ ಕೆಲಸ ಮಾಡದ ಅಧಿಕಾರಿಗಳಿಗೆ ಡಿ.ಕೆ.ಸುರೇಶ್ ತೀವ್ರ ತರಾಟೆ

08:01 PM Nov 17, 2023 | Team Udayavani |

ಕುಣಿಗಲ್ : ನರೇಗಾದಲ್ಲಿ ಕೋಟ್ಯಾಂತರೂ ಹಣ ಲೂಟಿ ಮಾಡುತ್ತೀರಿ, ಒಳ್ಳೆ ಕೆಲಸ ಮಾಡುವ ಯೋಜನೆಗೆ ಬೇಗ ಅಪ್ರೋಲ್ ಸಿಗುವುದಿಲ್ಲ, ಆದರೆ ಕೆಟ್ಟ ಕೆಲಸಕ್ಕೆ ಬೇಗ ಅಪ್ರೋಲ್ ಸಿಗುತ್ತದೆ, ನಿಮಗೆ ಯೋಗ್ಯತೆಗೆ 10 ಲಕ್ಷ ರೂ ನರೇಗಾ ಹಣ ಬಳಸಿಕೊಂಡು ಸಾರ್ವಜನಿಕ ಸ್ಮಶಾನ ಅಭಿವೃದ್ದಿ ಮಾಡಲು ಆಗಲಿಲ್ಲವೇ ಎಂದು ಅಧಿಕಾರಿಗಳನ್ನು ಸಂಸದ ಡಿ.ಕೆ.ಸುರೇಶ್ ತೀವ್ರ ತರಾಟೆ ತೆಗೆದುಕೊಂಡರು.

Advertisement

ಕುಣಿಗಲ್ ತಾಲೂಕು ಅಮೃತೂರಿನಲ್ಲಿ ಶುಕ್ರವಾರ ನಡೆದ ಜನ ಸಂಪರ್ಕ ಸಭೆಯಲ್ಲಿ ಅಧಿಕಾರಿಗಳನ್ನು ಹಿಗ್ಗಾಮುಗ್ಗಾ ತರಾಟೆ ತೆಗೆದುಕೊಂಡರು.

ಅಮೃತೂರಿನಲ್ಲಿ 20 ಗುಂಟೆ ಸಾರ್ವಜನಿಕ ಸ್ಮಶಾನ ಕ್ಕೆ ಜಾಗ ಇದೆ, ಯಾರೋ ನ್ಯಾಯಾಲಯಕ್ಕೆ ಹೋಗುತ್ತಾರೆ ಎಂದು ಸುಮ್ಮನೆ ಇದ್ದೀರೆಲ್ಲಾ, ನಾನು ಸತ್ತರು ಅಲ್ಲಿಗೆ, ನೀವು ಸತ್ತರು ಅಲ್ಲಿಗೆ ಹೋಗಬೇಕು, ಸರ್ಕಾರ ಸಾರ್ವಜನಿಕ ಸ್ಮಶಾನ ಎಂದು ಘೋಷಣೆ ಮಾಡಿದೆ, ಸ್ಮಶಾನ ಅಭಿವೃದ್ದಿಗೆ ಹಣವಿಲ್ಲವೆಂದು ಸಬೂಬು ಹೇಳುತ್ತೀರಿ, ನಿಮಗೆ ಏನು ಅನಿಸುವುದಿಲ್ಲವೇ ಎಂದು ಕಿಡಿಕಾರಿದ ಸಂಸದರು, ಸ್ಮಶಾನ ಜಾಗದಲ್ಲಿ ಸುತ್ತಲು ತಂತಿ ಬೇಲಿ ಹಾಕಬೇಕು, ನೀರಿನ ವ್ಯವಸ್ಥೆ ಮಾಡಬೇಕು, ಸಾರ್ವಜನಿಕರು ನಿಲ್ಲಲು ಶೆಡ್ ನಿರ್ಮಾಣ ಮಾಡಬೇಕು ಎಂದು ಪಿಡಿಓ ಶಿವಣ್ಣ ಅವರಿಗೆ ತಾಕೀತು ಪಡಿಸಿದರು.

ಫಲಾನುಭವಿಗಳನ್ನು ಬೀದಿಗೆ : ಸರ್ಕಾರದ ನಿದೇಶನದ ಪ್ರಕಾರ ಗ್ರಾಮೀಣ ಪ್ರದೇಶದಲ್ಲಿ ಮನೆ ಹಂಚಿಕೆ ಮಾಡಿಲ್ಲ, 2011-13 ರ ಎಸ್‌ಸಿಸಿ ಡೇಟವನ್ನು ಪರಿಗಣೆಗೆ ತೆಗೆದುಕೊಂಡು, ಯಾರಿಗೆ ಮನೆ ಇಲ್ಲ, ಯಾರಿಗೆ ನಿವೇಶನ ಇಲ್ಲ ಎಂಬ ಪಲಾನುಭವಿಗಳನ್ನು ಮೊದಲು ಆಯ್ಕೆ ಮಾಡಬೇಕು, ನಿಮಗೆ ಇಷ್ಟ ಬಂದವರನ್ನು ಆಯ್ಕೆ ಮಾಡಿದ್ದೀರಿ, ಹೀಗಾಗಿ ಸರ್ಕಾರ ಹಣ ಬಿಡುಗಡೆ ಮಾಡಲಿಲ್ಲ, ಫಲಾನುಭವಿಗಳನ್ನು ಬೀದಿಗೆ ತಂದು ನಿಲ್ಲಿಸಿದ್ದೀರಿ, ಸರ್ಕಾರ ಗೈಡ್ ಲೈನ್ ಓದಲು ನಿಮಗೆ ಸಮಯವಿಲ್ಲವೇ, ನಿಮ್ಮ ಬೇಜವಾಬ್ದಾರಿ ಕೆಲಸದಿಂದ ಇಂದು ಸಾರ್ವಜನಿಕರಿಗೆ ಅತಂತ್ರ ಸ್ಥಿತಿಗೆ ತಲುಪುವಂತೆ ಮಾಡಿದ್ದೀರ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕೊನೆಯ ಎಚ್ಚರಿಕೆ : ತಾಲೂಕು ಪಂಚಾಯ್ತಿ ತಾಲೂಕು ಕಚೇರಿ ಸರಿಯಾದರೇ ಇಡೀ ವ್ಯವಸ್ಥೆಯೇ ಸರಿಯಾಗುತ್ತದೆ ಎಂದು ಜನರು ಹೇಳುತ್ತಾರೆ ಅವರ ಮಾತು ನಿಜ, ಗ್ರಾಮ ಪಂಚಾಯ್ತಿ ಆಡಳಿತ ಗ್ರಾಮ ಸ್ವರಾಜ್ಯದ ಕನಸ್ಸನ್ನು ಕಂಡಿರುವಂತಹ ಗಾಂಧೀಜಿ, ಮತ್ತು ಸಂವಿಧಾನವನ್ನು ಸಮಾಜದ ಕಟ್ಟ ಕಡೆಯ ಜನರಿಗೆ ಕೊಟ್ಟಿರುವ ಡಾ.ಬಿ.ಆರ್.ಅಂಬೇಡ್ಕರ್ ಅವರ ಇಬ್ಬರ ಚಿಂತನೆ ಹಳ್ಳಿಗಳ ಉದ್ದಾರ ಆಗಬೇಕು, ಎಲ್ಲರೂ ಸರಿಸಮಾನಾಗಿ ಇರಬೇಕೆಂಬ ಚಿಂತನೆ ಇಟ್ಟುಕೊಂಡು, ಗ್ರಾಮ ಪಂಚಾಯ್ತಿಗಳಿಗೆ ಗ್ರಾಮ ವಿಕೇಂದ್ರೀಕರಣದ ಮೂಲಕ ಹೆಚ್ಚು ಅಧಿಕಾರ ಕೊಟ್ಟಿದ್ದೇವೆ, ಅಧಿಕಾರ ಕೋಟ್ಟಾಗಿನಿಂದ ಸಮಸ್ಯೆಗಳನ್ನು ಜಾಸ್ತಿ ಮಾಡಿಕೊಳ್ಳುತ್ತಿರುವುದು ಇವತ್ತು ನೋಡುತ್ತಿದ್ದೇವೆ, ಜನ ಸಾಮಾನ್ಯರ ಸಮಸ್ಯೆಗೆ ಸ್ಪಂಧಿಸಿ ಕೆಲಸ ಮಾಡಬೇಕು, ಇದು ನಿಮಗೆ ಕೊನೆಯ ಎಚ್ಚರಿಕೆ ಆಗಿದೆ ಎಂದು ಸಂಸದರು ಗುಡುಗಿದರು.

Advertisement

ಲಿಂಕ್ ಕೆನಾಲ್ ಶೀಘ್ರವಾಗಿ ಕಾಮಗಾರಿ ಅರಂಭ:
ಕುಣಿಗಲ್ ಕ್ಷೇತ್ರವನ್ನು ಮಾದರಿ ಕ್ಷೇತ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ನಾನು ಮತ್ತು ಶಾಸಕ ಡಾ.ರಂಗನಾಥ್ ಅವರು ಕಾರ್ಯೋನ್ಮಕರಾಗಿದ್ದೇವೆ ಎಂದು ತಿಳಿಸಿದರು. ಕಳೆದ ಐದು ವರ್ಷದಿಂದ ಲಿಂಕ್ ಕೆನಾಲ್ ತರುವ ನಿಟ್ಟಿನಲ್ಲಿ ಹೋರಾಟ ಮುಂದುವರಿದಿದೆ. ಈಗ ಅಂತಿಮವಾಗಿ ಈ ಹೋರಾಟಕ್ಕೆ ಯಶಸ್ಸು ಸಿಗುವ ಸಮಯ ಬಂದಿದೆ. ಎಲ್ಲಾ ಪ್ರಸ್ತಾವನೆಯೂ ಮುಗಿದಿದ್ದು ಬೋರ್ಡ್ ಮೀಟಿಂಗ್‌ನಲ್ಲಿ ಅನುಮತಿ ಪಡೆದುಕೊಳ್ಳುವ ಹಂತದಲ್ಲಿ ಇದೆ. ಜನವರಿ ವೇಳೆಗೆ ಕಾಮಗಾರಿಗೆ ಟೆಂಡರ್ ಕೆರೆಯುವ ಸಾಧ್ಯತೆ ಇದೆ ಎಂದು ತಿಳಿಸಿದರು.

ಕುಣಿಗಲ್ ಖಾಸಗಿ ಬಸ್ ನಿಲ್ದಾಣ ಅಭಿವೃದ್ದಿ:
ಕಳೆದ ಒಂದು ದಶಕದಿಂದ ನೆನೆಗುದಿಗೆ ಬಿದ್ದಿದ್ದ ಕಾಸಗಿ ಬಸ್ ನಿಲ್ದಾಣ ಅಭಿವೃದ್ದಿ ಕಾಂಗಾರಿಗೆ ಸರಕಾರದಿಂದ 9.5 ಕೋಟಿ ರೂ ಅನುದಾನ ಮಂಜೂರುರಾತಿ ಮಾಡಿಸಿಕೊಂಡು ತಂದಿದ್ದೇವೆ. ಶ್ರೀಘವೇ ಟೆಂಡರ್ ಕರೆದು ಖಾಸಗಿ ಬಸ್ ನಿಲ್ದಾಣವನ್ನು ಹೈಟೆಕ್ ಮಾದರಿಯಲ್ಲಿ ಅಭಿವೃದ್ದಿ ಪಡೆಸಲಾಗುವುದು ಎಂದು ತಿಳಿಸಿದರು. ಮಾರ್ಕೋನಹಳ್ಳಿ ಮತ್ತು ಮಂಗಳ ಜಲಾಶಯದ ಲಿಂಕ್ ಕೆನಾಲ್ ಕಾಮಗಾರಿಯೂ ಈಗಾಗಲೇ ಪ್ರಗತಿಯಲ್ಲಿ ಇದೆ ಎಂದು ತಿಳಿಸಿದರು.

ಕಾಂಗ್ರೆಸ್ ಸರಕಾರದ ಐದು ಗ್ಯಾರಂಟಿಗಳು ಕುಣಿಗಲ್ ಕ್ಷೇತ್ರದಲ್ಲಿ ಸಮರ್ಪಕವಾಗಿ ಜಾರಿ ಮಾಡಲಾಗಿದೆ. ಕೆಲವು ತಾಂತ್ರಿಕ ದೋಷದಿಂದ ಕೆಲವು ಮಂದಿಗಳಿಗೆ ಕೆಲವು ಗ್ಯಾರಂಟಿಗಳನ್ನು ತಲುಪ್ತತಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅತೀ ಶೀಘ್ರದಲ್ಲಿ ಸರಿಪಡಿಸಿ ಗ್ಯಾರಂಟಿ ಸಿಗುವಂತೆ ಮಾಡಲಾಗುವುದು ಎಂದು ತಿಳಿಸಿದರು.

ಅಭಿವೃದ್ದಿ ಕೆಲಸ ಮುಂದುವರಿಯಲಿದೆ:
ಶಾಸಕ ಡಾ.ರಂಗನಾಥ್ ಅವರ ಮೇಲೆ ನಂಬಿಕೆ ಇಟ್ಟು ಎರಡನೇ ಬಾರಿ ಶಾಸಕರಾಗಿ ಆಯ್ಕೆ ಮಾಡಿಕೊಂಡಿರುವ ಕುಣಿಗಲ್ ಜನತೆಯ ನಿರೀಕ್ಷೆಗಳನ್ನು ಹುಸಿ ಮಾಡುವುದಿಲ್ಲ ಕಾಂಗ್ರೆಸ್ ಸರಕಾರ ಐದು ವರ್ಷ ಮುಂದುವರಿಯಲಿದೆ. ಈ ಐದು ವರ್ಷದಲ್ಲಿ ಹತ್ತು ಹಲವು ಅಭಿವೃದ್ದಿ ಕೆಲಸಗಳಿಗೆ ಸರಕಾರದಿಂದ ಅನುದಾನ ತಂದು ಕುಣಿಗಲ್ ತಾಲೂಕಿನಲ್ಲಿ ಏನೆಲ್ಲಾ ಕೆಲಸಗಳು ಮಾಡಬಹುದು ಎಲ್ಲಾ ಕೆಲಸಗಳನ್ನು ಮಾಡಿಸಲಾಗುವುದು ಎಂದು ತಿಳಿಸಿದರು.

ಬಡವರಿಗೆ ನಿವೇಶನ:
ಕುಣಿಗಲ್ ತಾಲೂಕಿನ 269 ಎಕ್ರೆ ಸರಕಾರಿ ಜಮೀನನ್ನು ಗುರುತಿಸಲಾಗಿದೆ. ಜಮೀನನ್ನು ಇಒ ಅವರಿಗೆ ವರ್ಗಾವಣೆ ಮಾಡಿಕೊಂಡು ಅರ್ಹ ಬಡವರಿಗೆ ನಿವೇಶನಗಳನ್ನು ಶಾಸಕರ ಅಧ್ಯಕ್ಷತೆಯಲ್ಲಿ ಹಂಚಿಕೆ ಮಾಡಲಾಗುವುದು ಇನ್ನೂ ಅನೇಕ ಕಡೆ ಇರುವ ಜಮೀನುಗಳನ್ನು ಗುರುತಿಸಿ ಮತಷ್ಟು ನಿವೇಶನಗಳನ್ನು ಹಂಚಿಕೆ ಮಾಡಲು ಪ್ರಮಾಣಿಕ ಪ್ರಯತ್ನ ಮಾಡಲಾಗುತ್ತಿದೆ ಎಂದು ತಿಳಿಸಿದರು.

ಶಾಸಕ ಡಾ.ರಂಗನಾಥ್ ಮಾತನಾಡಿ ಸಂಸದರಾದ ಡಿ.ಕೆ.ಸುರೇಶ್ ಅವರ ಜನರ ಸಮಸ್ಯೆಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ಜನ ಸಂಪರ್ಕ ಸಭೆಯನ್ನು ಪ್ರತಿ ಗ್ರಾ.ಪಂ ಮಟ್ಟದಲ್ಲಿ ಆಯೋಜನೆ ಮಾಡಿಕೊಂಡು ಬರುತ್ತಿದ್ದಾರೆ. ಅಧಿಕಾರಿಗಳನ್ನು ಒಂದು ಕಡೆ ಸೇರಿಸಿಕೊಂಡಿ ಸಾರ್ವಜನಿಕರಿಂದ ಅರ್ಜಿ ಸ್ವೀಕರಿಸಿ ಸ್ಥಳದಲ್ಲೇ ಸಮಸ್ಯೆಗೆ ಪರಿಹಾರ ಕಂಡುಕೊಂಡು ಸಮಸ್ಯೆಗಳನ್ನು ಬಗೆಹರಿಸಲಾಗುತ್ತಿದೆ ಮುಂದೆ ಇನ್ನೂ ಈ ಜನ ಸಂಪರ್ಕ ಸಭೆ ನಿರಂತರವಾಗಿ ಮುಂದುವರಿಯಲ್ಲಿ ಸಾರ್ವಜನಿಕರು ಸದುಪಯೋಗ ಪಡೆಸಿಕೊಳ್ಳಬೇಕೆಂದು ತಿಳಿಸಿದರು. ಸಂದ ಡಿ.ಕೆ.ಸುರೇಶ್ ಹಾಗೂ ಉಪ ಮುಖ್ಯ ಮಂತ್ರಿ ಡಿ.ಕೆ.ಶಿವಕುಮಾರ್ ಅವರ ಮಾರ್ಗದರ್ಶನದಲ್ಲಿ ಕುಣಿಗಲ್ ಕ್ಷೇತ್ರದಲ್ಲಿ ಅಭಿವೃದ್ದಿ ಕೆಲಸಗಳನ್ನು ಮಾಡುವ ಮೂಲಕ ಕ್ಷೇತ್ರದ ಜನತೆಯ ಋಣ ತೀರಿಸುವ ಕೆಲಸ ಮಾಡತ್ತೇವೆ ಎಂದು ತಿಳಿಸಿದರು.

ತಹಸೀಲ್ದಾರ್ ವಿಶ್ವನಾಥ್, ಇಒ ಜೋಸೆಫ್, ಗ್ರಾ.ಪಂ ಅಧ್ಯಕ್ಷೆ ಲೀಲಾವತಿ, ಉಪಾಧ್ಯಕ್ಷ ಭರತ್, ಬಿಇಒ ಬೋರೇಗೌಡ, ವಿಎಸ್‌ಎಸ್‌ಎನ್ ಮಾಜಿ ಅಧ್ಯಕ್ಷ ಎ.ಸಿ.ಹರೀಶ್ ಮುಂತಾದವರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next