Advertisement

ಬಡವರ ಅಕ್ಕಿಯನ್ನು ಬಿಜೆಪಿ ನಾಯಕರು ತಮಿಳುನಾಡಿಗೆ ಮಾರಿದ್ದಾರೆ: ಡಿಕೆಶಿ ಗಂಭೀರ ಆರೋಪ

08:10 AM Apr 25, 2020 | keerthan |

ಬೆಂಗಳೂರು: ರಾಜ್ಯದ ಬಡವರಿಗಾಗಿ ಇರುವ ಅಕ್ಕಿಯನ್ನು ಬಿಜೆಪಿ ನಾಯಕರು  ತಮಿಳುನಾಡಿಗೆ ಮಾರುತ್ತಿದ್ದಾರೆ. ಇಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ. ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಗಂಭೀರ ಆರೋಪ ಮಾಡಿದ್ದಾರೆ.

Advertisement

ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸರ್ಕಾರಕ್ಕೆ ಕಾಂಗ್ರೆಸ್ ಸಂಪೂರ್ಣ ಬೆಂಬಲ ನೀಡಿದೆ. ಕೋವಿಡ್-19 ಸೋಂಕು ತಡೆಗೆ ಬೆಂಬಲ ನೀಡುತ್ತೇವೆ. ಸರ್ಕಾರಗಳ ಪಾರದರ್ಶಕ ಎಲ್ಲಾ ಕೆಲಸಕ್ಕೆ ಸಹಕಾರವಿದೆ. ಅವರ ಇತಿಮಿತಿಯಲ್ಲಿ ಕೆಲಸ ಮಾಡ್ತಿದ್ದಾರೆ. ಆದರೆ ಅನುಷ್ಠಾನ ಮಾಡುವ ವೇಳೆ ಭ್ರಷ್ಟಾಚಾರ ನಡೆಯುತ್ತಿದೆ. ಸಿಎಂಗೆ ಗೊತ್ತಿದೆಯೋ ಇಲ್ವೋ ಗೊತ್ತಿಲ್ಲ,ಮುಖ್ಯಮಂತ್ರಿಗಳ ಗಮನಕ್ಕೆ ನಾವು ತರಬೇಕಿದೆ ಎಂದರು.

ಬಡವರಿಗಾಗಿ ಕೊಡುವ ಅಕ್ಕಿ ತಮಿಳುನಾಡು ಪಾಲಾಗುತ್ತಿದೆ. ಹರ್ಯಾಣದಿಂದ ಬಂದ ಅಕ್ಕಿಯನ್ನ ಮಾರಿಕೊಳ್ಳಲಾಗಿದೆ. 1879 ಕ್ವಿಂಟಾಲ್ ಅಕ್ಕಿ ಅಕ್ರಮವಾಗಿ ಮಾರಾಟವಾಗಿದೆ. ಇದನ್ನು ತಮಿಳುನಾಡು ಬಾರ್ಡರ್ ಗೆ ಸಾಗಿಸಲಾಗಿದೆ. ಬಿಜೆಪಿ ಸಕ್ರಿಯ ನಾಯಕರೇ ವ್ಯಾಪಾರ ಮಾಡಿದ್ದಾರೆ ತಮಿಳುನಾಡಿನ ಹೊಸೂರಿನ ವ್ಯಾಪಾರಿಗೆ ಮಾರಿದ್ದಾರೆ ಎಂದರು.

ಹರ್ಯಾಣದ ಅಕ್ಕಿಯನ್ನು ನಾವು ಸೀಜ್ ಮಾಡಿಸಿದ್ದೇವೆ. ಸರ್ಜಾಪುರದ ಗೋಡೌನ್ ನಲ್ಲಿ ಅಕ್ಕಿ ಸಂಗ್ರಹಿಸಿದ್ದಾರೆ. ಸಂಗ್ರಹ ಮಾಡಬೇಕಾದರೆ ತಹಸೀಲ್ದಾರ್ ಅನುಮತಿ ಬೇಕು. ಆದರೆ ಯಾವುದೇ ಅನುಮತಿಯಿಲ್ಲದೆ ಸಂಗ್ರಹಿಸಿದ್ದಾರೆ. ಈಗ ತಹಸೀಲ್ದಾರ್ ಗೆ ಧಮ್ಕಿ ಹಾಕ್ತಿದ್ದಾರೆ. ಬಿಜೆಪಿ ಮುಖಂಡ ಬುಲೆಟ್ ಬಾಬು ಎನ್ನುವವರ ಗೋಡೌನ್ ನಲ್ಲಿ ಅಕ್ಕಿ ಸಂಗ್ರಹವಾಗಿದೆ. ನಮ್ಮ ಕಾರ್ಯಕರ್ತರು ಇದನ್ನ ಪತ್ತೆ ಹಚ್ಚಿದ್ದಾರೆ. ಇದು ಸರ್ಕಾರದ ಸ್ವತ್ತಾಗಿದ್ದರೆ ಘೋಷಣೆ ಮಾಡಿಕೊಳ್ಳಬೇಕು ಎಂದರು.

ಆಹಾರ ಕಾಯ್ದೆ ಪ್ರಕಾರ ಇದರ ಬಗ್ಗೆ ಕಠಿಣ ಕ್ರಮತೆಗೆದುಕೊಳ್ಳಬೇಕು. ಬಿಜೆಪಿ ಮುಖಂಡನನ್ನ ಬಂಧಿಸಬೇಕು ಎಂದು ಡಿಕೆಶಿ ಆಗ್ರಹಿಸಿದರು.

Advertisement

ಪ್ರತಿಯೊಂದು ಜಿಲ್ಲೆಯಲ್ಲೂ ಇದೇ ರೀತಿ ಅಕ್ರಮ ವ್ಯಾಪಾರವಾಗ್ತಿದೆ. ಅಕ್ಕಿಯನ್ನ ಪಾಲಿಶ್ ಮಾಡಿ ಬ್ಲಾಕ್ ನಲ್ಲಿ ಮಾರಾಟ ಮಾಡ್ತಿದ್ದಾರೆ. 30/40 ರೂ ನಂತೆ  ಅಕ್ಕಿ ಮಾರಾಟ ಮಾಡ್ತಿದ್ದಾರೆ. ಕೇಂದ್ರದಿಂದ ಉಚಿತವಾಗಿ ಬರುವ ಅಕ್ಕಿಯನ್ನ ಮಾರಾಟ ಮಾಡ್ತಿದ್ದಾರೆ ಎಂದರು.

ಅಕ್ಕಿ ಅಕ್ರಮ ವ್ಯಾಪಾರದ ದೃಶ್ಯ ಬಿಡುಗಡೆ ಮಾಡಿದ ಡಿಕೆಶಿ, ದಾಖಲೆ ಸಮೇತ ನಾವು ಪತ್ತೆ ಹಚ್ಚಿದ್ದೇವೆ. ಸಾಕ್ಷಿ ಸಮೇತ ನಾವು ಪತ್ತೆ ಹಚ್ಚಿದ್ದೇವೆ. ,

Advertisement

Udayavani is now on Telegram. Click here to join our channel and stay updated with the latest news.

Next