ಸಿಂಧನೂರು (ರಾಯಚೂರು): ಮಸ್ಕಿ ಉಪಚುನಾವಣೆ ಕಣದಲ್ಲಿ ನಮ್ಮ ಪಕ್ಷದ ಅಭ್ಯರ್ಥಿಯ ಪರ ಜನರೇ ದೇಣಿಗೆ ನೀಡಿ ಬೆಂಬಲಿಸುತ್ತಿದ್ದು, ಕಾಂಗ್ರೆಸ್ ಜಯ ನಿಶ್ಚಿತ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದರು.
ನಗರದ ಯುವ ಕಾಂಗ್ರೆಸ್ ಕಚೇರಿಯಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದರು.
ಕಾಂಗ್ರೆಸ್ ಅಭ್ಯರ್ಥಿ ಆರ್.ಬಸನಗೌಡರ ಪರ ಬೆಂಬಲ ವ್ಯಕ್ತಪಡಿಸಿ ಮತದಾರರೇ ಉತ್ಸಾಹ ತೋರುತ್ತಿದ್ದಾರೆ ವ್ಯಾಪಾರಸ್ಥರು, ಗುತ್ತಿಗೆದಾರರು ದೇಣಿಗೆ ಕೋಡುವುದು ಬೇರೆ. ಆದರೆ ಹಳ್ಳಿಗಳಲ್ಲಿ ಕೂಲಿಕಾರ ಮಹಿಳೆಯರು ತಮ್ಮ ದುಡಿಮೆಯ ಹಣ ದೇಣಿಗೆ ನೀಡುತ್ತಿದ್ದಾರೆ ಎಂದರು.
ಇದನ್ನೂ ಓದಿ:ಸಾರಿಗೆ ನೌಕರರ ಮನವೊಲಿಕೆ ಪ್ರಯತ್ನವೇ ಇಲ್ಲ, ಪರ್ಯಾಯ ಮಾರ್ಗವಿದೆ: ಸರ್ಕಾರದ ದೃಢ ನಿರ್ಧಾರ
ಇದು ಸ್ವಾಭಿಮಾನಿ ಮತದಾರರ ಚುನಾವಣೆ. ಬಿಜೆಪಿಗೆ ಮಾರಾಟವಾದ ಪ್ರತಾಪಗೌಡ ಪಾಟೀಲರಿಗೆ ತಕ್ಕ ಪಾಠ ಕಲಿಸಲಿದ್ದಾರೆ. ಜಾತಿ, ಪಕ್ಷ ಮರೆತು ಪ್ರತಾಪಗೌಡರ ವಿರುದ್ದ ಮತ ಚಲಾಯಿಸಿ ಬಸನಗೌಡರನ್ನು ಗೆಲ್ಲಿಸಲಿದ್ದಾರೆ. ಕಾಂಗ್ರೆಸ್ ಮುಳುಗುವ ಹಡಗು ಎನ್ನುವವರಿಗೆ ಈ ಉಪಚುನಾವಣೆಯ ಫಲಿತಾಂಶ ಉತ್ತರ ಕೊಡಲಿದೆ ಎಂದು ಡಿಕೆ ಶಿವಕುಮಾರ್ ಹೇಳಿದರು.
ಕಾಂಗ್ರೆಸ್ ಮುಖಂಡ ಬಸನಗೌಡ ಬಾದರ್ಲಿ ಸೇರಿದಂತೆ ಇತರರು ಇದ್ದರು.