Advertisement

ಪೇಜಾವರ ಶ್ರೀಗಳ ನಿಧನಕ್ಕೆ ಡಿ.ಕೆ. ಶಿವಕುಮಾರ್ ಕಂಬನಿ

09:55 AM Dec 30, 2019 | keerthan |

ಬೆಂಗಳೂರು: ಉಡುಪಿಯ ಅಷ್ಟಮಠಗಳಲ್ಲಿ ಒಂದಾದ ಪೇಜಾವರ ಮಠದ ಶ್ರೀ ವಿಶ್ವೇಶ ತೀರ್ಥ ಶ್ರೀಗಳ ಕೃಷ್ಣೈಕ್ಯಕ್ಕೆ ಮಾಜಿ ಸಚಿವ, ಕಾಂಗ್ರೆಸ್ ಮುಖಂಡ ಡಿ.ಕೆ. ಶಿವಕುಮಾರ್ ಕಂಬನಿ ಮಿಡಿದಿದ್ದಾರೆ.

Advertisement

ಪ್ರಖಾಂಡ ತರ್ಕಶಾಸ್ತ್ರಜ್ಞರು, ವೇದ ಪಾರಂಗತರು, ಸಕಲಶಾಸ್ತ್ರ ಪ್ರವೀಣರು, ಸಂಸ್ಕೃತಿ ವಿದ್ವಾಂಸರು, ಸರ್ವಧರ್ಮ ಸಮಾನತೆ, ಅಸ್ಪೃಶ್ಯತೆ ನಿವಾರಣೆಗೆ ತುಡಿದವರು, ಸಾಮಾಜಿಕ ಪಿಡುಗುಗಳ ವಿರುದ್ಧ ಹೋರಾಡಿದವರು, ಸರಳತೆಯ ಪ್ರತಿರೂಪ, ಗಾಂಧೀವಾದ ಪ್ರತಿಪಾದಿಸಿದವರು, ಯತಿವರ್ಯರಲ್ಲಿ ಮೇರುಪರ್ವತದತಿದ್ದ ಶ್ರೀಗಳು ಧಾರ್ಮಿಕ ಜಗತ್ತಿಗೆ ನೀಡಿರುವ ಕೊಡುಗೆ ವರ್ಣಾತೀತ ಎಂದು ಡಿ.ಕೆ ಶಿವಕುಮಾರ್ ಕೊಂಡಾಡಿದ್ದಾರೆ.

ಕನ್ಯಾಕುಮಾರಿಯಿಂದ ಕಾಶಿಯವರೆಗೆ ಅನೇಕ ವಿದ್ವತ್ ಜನರನ್ನು ತರ್ಕಶಾಸ್ತ್ರದಲ್ಲಿ ಸೋಲಿಸಿ ಅನೇಕ ರಾಜಮಹಾರಾಜರುಗಳಿಂದ ಪ್ರಖಾಂಡ ಪಂಡಿತರೆಂದು ಪುರಸ್ಕೃತರಾದ ಶ್ರೀಗಳು ಸರ್ವಜನಸಾಮಾನ್ಯರ ಬಗ್ಗೆಯೂ ಬಹು ಕಾಳಜಿ ಉಳ್ಳವರಾಗಿದ್ದರು.ಪರಿಶಿಷ್ಟರ ಕೇರಿಯಲ್ಲಿ ಪಾದಯಾತ್ರೆ, ಶ್ರೀಮಠದ ಆವರಣದಲ್ಲಿ ರಂಜಾನ್ ಆಚರಣೆ, ಮಡೆಸ್ನಾನ ನಿಷೇಧ ಮತ್ತಿತರ ಆದರ್ಶ ನಡೆಗಳ ಮೂಲಕ ಸಮಾಜಕ್ಕಷ್ಟೇ ಅಲ್ಲದೇ ಧಾರ್ಮಿಕ ಕ್ಷೇತ್ರಕ್ಕೂ ಮಾದರಿಯಾದವರು. ಅಂಥ ಶೀಗಳ ಅಗಲಿಕೆಯಿಂದ ಬರಿ ಕನ್ನಡನಾಡಷ್ಟೇ ಅಲ್ಲ ಇಡೀ ದೇಶವೇ ಅದರಲ್ಲೂ ಧಾರ್ಮಿಕ ಜಗತ್ತು ಬಡವಾಗಿದೆ. ಶ್ರೀಗಳ ಅಗಲಿಕೆಯ ನೋವು ಭರಿಸುವ ಶಕ್ತಿಯನ್ನು ಅವರ ಭಕ್ತವೃಂದಕ್ಕಷ್ಟೇ ಇಡೀ ನಾಡಿಗೆ ಆ ಕೃಷ್ಣ ಕರುಣಿಸಲಿ ಎಂದು ಶಿವಕುಮಾರ್ ಅವರು ಶೋಕಸಂದೇಶದಲ್ಲಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next