Advertisement
ಭೇಟಿ ನಂತರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ‘ಸಮನ್ವಿ ಚಿಕ್ಕ ವಯಸ್ಸಿನಲ್ಲೇ ಸಾಂಸ್ಕೃತಿಕ ಕ್ಷೇತ್ರದಿಂದ ಜನರ ಮನಗೆದ್ದು ಅಪಾರ ಅಭಿಮಾನಿಗಳನ್ನು ಸಂಪಾದಿಸಿದ್ದಳು. ಚಿಕ್ಕ ವಯಸ್ಸಿನಲ್ಲಿ ಇಂತಹ ಪ್ರತಿಭೆ ಎಲ್ಲರಿಗೂ ಸಿಗುವುದಿಲ್ಲ. ಆಕೆಗೆ ಇಷ್ಟು ಸಣ್ಣ ವಯಸ್ಸಿನಲ್ಲೇ ಈ ರೀತಿ ಆಗಬಾರದಿತ್ತು. ಯಮ ನಿಷ್ಕರುಣಿ” ಎಂದು ದುಃಖ ವ್ಯಕ್ತಪಡಿಸಿದರು.
Koo AppRelated Articles
Advertisementಅರಳಿ ನಗಬೇಕಿದ್ದ ಹೂವೊಂದು ಮೊಗ್ಗಿನಲ್ಲೇ ದೇವರಿಗೆ ಅರ್ಪಣೆಯಾಗಿದೆ. ಖ್ಯಾತ ಹರಿಕಥಾ ವಿದ್ವಾಂಸ ಶ್ರೀ ಗುರುರಾಜ ನಾಯ್ಡು ಅವರ ಮೊಮ್ಮಗಳು ಸಮನ್ವಿ ಪ್ರತಿಭಾವಂತೆ ಭವಿಷ್ಯದಲ್ಲಿ ಉತ್ತಮ ಕಲಾವಿದೆಯಾಗುವ ಭರವಸೆಹುಟ್ಟಿಸಿದ್ದಳು. ಆಕೆಯ ಅಗಲಿಕೆ ಕಲಾ ರಂಗಕ್ಕೆ ತುಂಬಲಾರದ ನಷ್ಟ. ಇಂದು ಸಮನ್ವಿ ಅವರ ಮನೆಗೆ ಭೇಟಿ ನೀಡಿ ಅವರ ಪೋಷಕರಿಗೆ ಧೈರ್ಯ ಹೇಳಿದೆ. – D K Shivakumar (@dkshivakumar_official) 18 Jan 2022