ಬೆಂಗಳೂರು : ವಿಶ್ವಮಾನವ ಪಿತಾಮಹ ಸಚಿವ ಅಶ್ವತ್ಥನಾರಾಯಣ ಕಾಲದಲ್ಲಿ ಇಷ್ಟೆಲ್ಲ ಭ್ರಷ್ಟಾಚಾರ ಆಗುತ್ತಿದೆಯಲ್ಲ ಎಂಬುದೇ ಬೇಸರದ ಸಂಗತಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವ್ಯಂಗ್ಯವಾಡಿದರು.
ಸುದ್ದಿಗಾರರ ಜತೆ ಮಾತನಾಡಿದ ಅವರು, ಪ್ರಿಯಾಂಕ್ ಖರ್ಗೆ ನೋಟಿಸ್ ನೀಡಿ ಪೊಲೀಸ್ ಅಧಿಕಾರಿಗಳು ಒಳ್ಳೆ ಕೆಲಸ ಮಾಡುತ್ತಿದ್ದಾರೆ.ಯಾರು ಆರೋಪ ಮಾಡುತ್ತಾರೆ ಅವರಿಗೆ ನೋಟಿಸ್ ಕೊಡ್ತಾರೆ.ಒಳ್ಳೆಯ ಸಂಪ್ರದಾಯ ಶುರು ಮಾಡಿದಕ್ಕೆ ಅಭಿನಂದನೆ. ಅದೇ ರೀತಿ ಯತ್ನಾಳ್ ಅವರಿಗೂ ಕೊಡಬೇಕಲ್ಲ ಎಂದು ಪ್ರಶ್ನಿಸಿದರು.
ಪ್ರಿಯಾಂಕ್ ನಮ್ಮ ವಕ್ತಾರರು.ಈ ವಿಚಾರಗಳನ್ನು ಮಾತನಾಡಲು ಅಧಿಕಾರ ಕೊಟ್ಟಿದ್ದೇವೆ. ಬಿಜೆಪಿ ತಟ್ಟೆಯಲ್ಲಿ ಹೆಗಣ್ಣ ಬಿದ್ದಿದೆ.ಗೃಹ ಮಂತ್ರಿಗಳು ಸದನದಲ್ಲಿ ಏನು ಆಗಿಲ್ಲ ಎಂದು ಉತ್ತರ ಕೊಟ್ಟಿದ್ದಾರೆ.ಹಾಗಾದ್ರೆ ಅಕ್ರಮ ಆಗಿದೆ ಎಂದು ಅರೆಸ್ಟ್ ಯಾಕೆ ಮಾಡುತ್ತಿದ್ದಾರೆ.ಯಾರು ಆರೋಪಿ ಏನು, ಎಂಬುದು ಬಹಳ ಗೌಪ್ಯವಾಗಿ ಇಡುತ್ತಿದ್ದಾರೆ. ದಲಿತ ನಾಯಕನಿಗೆ ದೌರ್ಜನ್ಯ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಪ್ರಿಯಾಂಕ್ ಖರ್ಗೆ, ಅವರನ್ನು ಯಾವಗ ವಿಚಾರಣೆಗೆ ಕಳಿಸಬೇಕು, ಏನು ಕೊಟ್ಟು ಕಳಿಸಬೇಕು ಅಂತ ನಮಗೆ ಗೊತ್ತಿದೆ.ಅದರ ಬಗ್ಗೆ ಪಕ್ಷ ನಿರ್ಧಾರ ಮಾಡುತ್ತದೆ ಎಂದರು.
ನಾನು ಮೊದಲ ಎರಡು ನೋಟೀಸ್ ಗೆ ಈಗಾಗಲೇ ಉತ್ತರ ಕೊಟ್ಟಿದ್ದೇನೆ.ಆಡಿಯೋ ಬಗ್ಗೆ ಹೇಗೆ ಉತ್ತರ ಕೊಡಬೇಕು ಅಂತ ನಾನು ವರಿಷ್ಠರ ಜೊತೆ ಮಾತಾಡಿ ತೀರ್ಮಾನ ಮಾಡುತ್ತೇನೆ. ಕಾನೂನಾತ್ಮಕವಾಗಿ ಏನು ಮಾಡಬೇಕೋ ಅದನ್ನ ಮಾಡೇ ಮಾಡುತ್ತೇನೆ ಎಂದು ಹೇಳಿದರು.
ಅಶ್ವತ್ಥ ನಾರಾಯಣ್ ರಾಮನಗರ ಉಸ್ತವಾರಿ ಸಚಿವ. ಅದೇನೋ ಕ್ಲೀನ್ ಮಾಡಿದ್ರಲ್ಲಪ್ಪ. ಏನು ಕ್ಲೀನ್ ಮಾಡಿದರು?ಅಸಿಸ್ಟೆಂಟ್ ಪ್ರೋಫೆಸರ್ ಹಗರಣ ಹೇಗಾಯ್ತು? ಅದಕ್ಕೆ ಜಬಾಬ್ದಾರಿ ಯಾರು?ಇವರು ಭ್ರಷ್ಟಾಚಾರ ಕ್ಕೆ ವಿಶ್ವಮಾನವ ಪಿತಾಮಹ. ಅವರ ಸಂಪರ್ಕ ಇರುವ ಸಂಸ್ಥೆಗಳಲ್ಲಿ ಇದೆಲ್ಲಾ ಆಗುತ್ತಾ ಇದೆ ಎಂದು ಕಿಡಿ ಕಾರಿದರು.