Advertisement

ಸುಧಾಕರಣ್ಣಾ.. ನೀನು ಮೊದಲು ಔಷಧಿ ಕೊಡಿಸುವ ಕೆಲಸ ಮಾಡು: ಡಿ ಕೆ ಶಿವಕುಮಾರ್

01:22 PM Jun 01, 2021 | Team Udayavani |

ಬೆಂಗಳೂರು: “ಸುಧಾಕರಣ್ಣಾ.. ನೀನು ಮೊದಲು ಕೋವಿಡ್ ಲಸಿಕೆ ಕೊಡಿಸುವ ಕೆಲಸ ಮಾಡು. ಡೆತ್ ಆಡಿಟ್ ಕೆಲಸ ನಿನಗೆ ಬೇಡ” ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ವಿರುದ್ಧ ವಾಗ್ದಾಳಿ ನಡೆಸಿದರು.

Advertisement

ಕೋವಿಡ್ ನಿಂದ ಸಾವನ್ನಪ್ಪಿರುವವರ ಲೆಕ್ಕವನ್ನು ಸರ್ಕಾರ ಮುಚ್ಚಿಡುತ್ತಿಲ್ಲ, ಬೇಕಾದರೆ ಡಿ ಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯನವರು ಬೇರೆ ರಾಜ್ಯಗಳಿಗೆ ಹೋಗಿ ನೋಡಲಿ ಎಂಬ ಸುಧಾಕರ್ ಮಾತಿಗೆ ಡಿಕೆಶಿ ತಿರುಗೇಟು ನೀಡಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಂದಾಯ ಇಲಾಖೆಯಿದೆ, ಕಾರ್ಪೋರಶೇನ್ ಇದೆ. ಅವರಿಗೆ ಸಾವಿನ ಲೆಕ್ಕ ಸಿಕ್ಕಿರುತ್ತದೆ. ಈ ಕೆಲಸ ನಿನಗೆ  ಆಗುವುದಿಲ್ಲ. ಸಿಎಂ ಮತ್ತೆ ನಿನಗೆ ಈ ಜವಾಬ್ದಾರಿ ನೀಡುವುದು ಬೇಡ ಎಂದರು.

ಇದನ್ನೂ ಓದಿ:ಅರಣ್ಯ ಸಿಬ್ಬಂದಿಗೆ ಲಸಿಕೆ ನೀಡಿದ್ದಕ್ಕೆ ನೋಟಿಸ್‌ ಜಾರಿಗೊಳಿಸಿದ್ದು ಸರಿನಾ?

ಕೋವಿಡ್ ನಿಂದ ಸಾವನ್ನಪ್ಪಿದವರ ಕುಟುಂಬಕ್ಕೆ ಕೇಂದ್ರ ಸರ್ಕಾರ ಯೋಜನೆ ಜಾರಿ ಮಾಡಿದರೆ, ಇವರ ತಪ್ಪು ಲೆಕ್ಕದಿಂದ ಎಲ್ಲರಿಗೂ ಸಿಗುವುದಿಲ್ಲ. ರಾಜಸ್ಥಾನ ಮುಖ್ಯಮಂತ್ರಿ ಈಗಾಗಲೇ ಡೆತ್ ಆಡಿಟ್ ಮಾಡಿಸಲು ಹೇಳಿದ್ದಾರೆ. ಇಲ್ಲೂ ಮಾಡಲಿ ಎಂದರು.

Advertisement

ನರಗುಂದ ವಿಧಾನಸಭೆ ಕ್ಷೇತ್ರದಲ್ಲಿ ಕಾಂಗ್ರೆಸ್ ಆಯೋಜಿಸಿರುವ ಲಾಕ್ ಡೌನ್ ಸಂತ್ರಸ್ತ ಬಡವರಿಗೆ ಆಹಾರ ಕಿಟ್ ನೀಡುವ ಕಾರ್ಯಕ್ರಮಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಬೆಂಗಳೂರಿನ ಸದಾಶಿವನಗರದಲ್ಲಿ ಸಾಂಕೇತಿಕವಾಗಿ ಮಂಗಳವಾರ ಚಾಲನೆ ನೀಡಿದರು. ಕೆಪಿಸಿಸಿ ಸಂಯೋಜಕ ಡಾ. ಸಂಗಮೇಶ್, ಕಾಂಗ್ರೆಸ್ ವೈದ್ಯ ಘಟಕದ ಅಧ್ಯಕ್ಷ ಡಾ. ಮಧು, ಉಪಾಧ್ಯಕ್ಷ ಡಾ. ಶ್ರೀನಿವಾಸನ್, ಪ್ರಧಾನ ಕಾರ್ಯದರ್ಶಿಗಳಾದ, ಡಾ. ಶಂಕರ್ ಗುಹಾ, ಡಾ. ಭಗತ್ ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next