ಬೆಂಗಳೂರು: ಭಾರೀ ಚರ್ಚೆಗಳು, ಊಹಾಪೋಹಗಳ ಬಳಿಕ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಸ್ಪರ್ಧೆಯನ್ನು ಡಿಸಿಎಂ ಡಿ.ಕೆ. ಶಿವಕುಮಾರ್ ಶುಕ್ರವಾರ ತಳ್ಳಿಹಾಕಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿ, ‘ಕನಕಪುರದಲ್ಲಿ ಉಪಚುನಾವಣೆ ಏಕೆ? ನಾನು ಕನಕಪುರದ ಶಾಸಕ ಮತ್ತು ಕಾಂಗ್ರೆಸ್ ರಾಜ್ಯಾಧ್ಯಕ್ಷ’ ಎಂದರು.
‘ನನಗೆ ಬೆಂಬಲ ನೀಡುವಂತೆ ಮಾತ್ರ ನಾನು ಅಲ್ಲಿನ ಜನರನ್ನು ಕೇಳಿದ್ದೇನೆ’ ರಾಮನಗರ ಜಿಲ್ಲೆಯವರು ಮತ್ತು ಅದರ ಅಭಿವೃದ್ಧಿಯಲ್ಲಿ ಪಟ್ಟಭದ್ರ ಆಸಕ್ತಿ ಹೊಂದಿದ್ದೇನೆ. ನನ್ನ ರಾಜಕೀಯ ಜೀವನಕ್ಕೆ ಶ್ರದ್ದಾಂಜಲಿ ಬರೆಯುತ್ತಿರುವವರು ನನ್ನ ಹಿಂದೆ ಒಂದು ದೊಡ್ಡ ಶಕ್ತಿ ಇದೆ ಎಂದು ತಿಳಿದಿರಬೇಕು, ಅದೇ ಜನಶಕ್ತಿ’ ಎಂದರು.
ಹೇಳಿಕೆ ಊಹಾಪೋಹಕ್ಕೆ ಕಾರಣವಾಗಿತ್ತು
“ಚನ್ನಪಟ್ಟಣವೇ ನನ್ನ ಹೃದಯ. ಜನಒಪ್ಪಿದರೆ ಇಲ್ಲಿ ಸ್ಪರ್ಧೆ ಮಾಡದೆ ವಿಧಿ ಇಲ್ಲ. ಇದು ನನಗೆ ರಾಜಕೀಯ ಜನ್ಮ ನೀಡಿದ ಸ್ಥಳ’ ಎಂದಿದ್ದರು.
ಚನ್ನಪಟ್ಟಣದಿಂದ “ಅಚ್ಚರಿಯ ಅಭ್ಯರ್ಥಿ’ ಕಣಕ್ಕಿಳಿಯುತ್ತಾರೆ ಎಂದು ಡಿ.ಕೆ. ಸುರೇಶ್ ಹೇಳಿದ ಬೆನ್ನಲ್ಲೇ ಶಿವಕುಮಾರ್ ತಾವು ಸ್ಪರ್ಧಿಸಲು ಸಿದ್ಧ ಎಂಬ ಸಂದೇಶ ನೀಡಿದ್ದರು.